ಐರ್ಲೆಂಡ್ ಮಣಿಸಿದ ಭಾರತ
ನವದೆಹಲಿ: ಭಾರತ ಪುರುಷರ ಹಾಕಿ ತಂಡ ವಿಶ್ವ ಹಾಕಿ ಲೀಗ್ 2ನೇ ಸುತ್ತಿನಲ್ಲಿ ತನ್ನ ಜಯದ ನಾಗಾಲೋಟವನ್ನು ಮುಂದುವರಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಭಾರತ ಐರ್ಲೆಂಡ್ ವಿರುದ್ಧ 3-2 ಗೋಲುಗಳಿಂದ ವಿಜಯ ಸಾಧಿಸಿತು. ಪಂದ್ಯದ ಅಂತಿಮ ಕ್ಷಣಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಆಟಗಾರರು ಜಯ ದಾಖಲಿಸುವ ಮೂಲಕ, 3 ಪಂದ್ಯಗಳಿಂದ ಒಟ್ಟು 9 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿ ಉಳಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಪರ ರೂಪಿಂದರ್ ಪಾಲ್ ಸಿಂಗ್ ಪಂದ್ಯದ 16ನೇ ನಿಮಿಷದಲ್ಲಿ, ಉಪ ನಾಯಕ ವಿ. ಆರ್ ರಘುನಾಥ್ 39ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ಆದರೆ, ಪಂದ್ಯದ 56ನೇ ನಿಮಿಷದಲ್ಲಿ ಮಹತ್ವದ ಗೋಲು ದಾಖಲಿಸಿದ ಧರ್ಮವೀರ್ ಸಿಂಗ್ ತಂಡಕ್ಕೆ ಜಯ ತಂದುಕೊಟ್ಟರು.
ಐರ್ಲೆಂಡ್ ಪರವಾಗಿ ಪಂದ್ಯದ 27ನೇ ನಿಮಿಷದಲ್ಲಿ ಕೊನಾರ್ ಹಾರ್ಟ್ ಗೋಲು ದಾಖಲಿಸಿದರೆ, ಎಗೆನೆ ಮಾಗೇ ಅವರು 51ನೇ ನಿಮಿಷದಲ್ಲಿ ಗೋಲು ಗಳಿಸಿದರು.
ಐರ್ಲೆಂಡ್ನ ಅದ್ಭುತ ರಕ್ಷಣಾ ವಿಭಾಗದ ಎದುರಿಗೆ ಭಾರತೀಯ ಆಟಗಾರರು ತಕ್ಕ ಸಾಂಘಿಕ ಹೋರಾಟ ನಡೆಸಿದರು. ಆರಂಭದಲ್ಲೇ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಿದ ಭಾರತ ಅಂತಿಮವಾಗಿ ಮೇಲುಗೈ ಸಾಧಿಸಿತು. ಆದರೆ, ಪಂದ್ಯದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿದಾಗ ಭಾರತದ ಆಟಗಾರರು ನಿರೀಕ್ಷೆಯ ಪ್ರದರ್ಶನ ತೋರಲಿಲ್ಲ. ಪಂದ್ಯದಲ್ಲಿ ದೊರಕಿದ ಆರು ಪೆನಾಲ್ಟಿ ಕಾರ್ನರ್ ಅವಕಾಶಗಳಲ್ಲಿ ಎರಡು ಗೋಲು ದಾಖಲಿಸಲು ಮಾತ್ರ ಅವರಿಂದ ಸಾಧ್ಯವಾಯಿತು.
ಶನಿವಾರ ಭಾರತ ಪುರುಷರ ತಂಡ ಚೀನಾವನ್ನು ಎದುರಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

