ಕ್ರೀಡೆ

ವಾಲಿಬಾಲ್ ಫೆಡರೇಷನ್‌ಕಪ್: ರಾಜ್ಯ ತಂಡ ಆಯ್ಕೆ

Published On :

ಬೆಂಗಳೂರು: ಫೆ.24 ರಿಂದ ಫೆ.3ರ ವರೆಗೆ ಕೇರಳದ ಪತಿನಂತಿಟ್ಟದಲ್ಲಿ ನಡೆಯಲಿರುವ ಫೆಡರೇಷನ್ ಕಪ್ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡ ಪ್ರಕಟಿಸಲಾಗಿದೆ.
12 ಆಟಗಾರರ ತಂಡವನ್ನು ಆಯ್ಕೆ ಮಾಡಿರುವ ಆಯ್ಕೆ ಸಮಿತಿ, ಟಿ.ಡಿ ರವಿಕುಮಾರ್‌ಗೆ ನಾಯಕ ಪಟ್ಟ ನೀಡಿದ್ದು, ಅನುಪ್ ಡಿ ಕೊಸ್ಟಾ ಅವರನ್ನು ಉಪನಾಯಕನನ್ನಾಗಿ ಆಯ್ಕೆ ಮಾಡಿದೆ.
ಈ ತಂಡ ಗುರುವಾರ ಕೇರಳದ ಪತಿನಂತಿಟ್ಟಕ್ಕೆ ಪ್ರಯಾಣ ಬೆಳೆಸಿದ್ದು, ಪಂದ್ಯಾವಳಿಯ ಬಿ ಗುಂಪಿನಲ್ಲಿ ತಮಿಳುನಾಡು, ಉತ್ತರಖಂಡ್ ಮತ್ತು ಪಂಜಾಬ್ ವಿರುದ್ಧ ಸೆಣೆಸಲಿದೆ. ಕರ್ನಾಟಕ ತಂಡ ತಮ್ಮ ಮೊದಲ ಪಂದ್ಯವನ್ನು ಫೆ.25 ರಂದು ತಮಿಳುನಾಡಿನ ವಿರುದ್ಧ ಆಡಲಿದೆ.
ತಂಡ: ಟಿ.ಡಿ ರವಿಕುಮಾರ್ (ನಾಯಕ), ಅನುಪ್ ಡಿ ಕೊಸ್ಟಾ (ಉಪನಾಯಕ), ಕಾರ್ತಿಕ್ ಎ, ಸುಜಿತ್ ಎ, ವಿನಾಯಕ್, ನವೀನ್ ಕುಮಾರ್, ಶ್ರವಣ್ ಯಾದವ್, ಮಾರುತಿ ಜಿ ನಾಯಕ್, ಮಂಜುನಾಥ್, ಸೂರಜ್ ಜಿ ನಾಯಕ್, ನಾಗೇಶ್ ಎಂ.ವಿ, ಭರತ್ ಬಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.