ಭಾರತೀಯ ವನಿತೆಯರ ಗೆಲುವಿನ ಕೇಕೆ
ನವದೆಹಲಿ: ವಿಶ್ವ ಹಾಕಿ ಲೀಗ್‌ನ ಎರಡನೇ ಸುತ್ತಿನ ಪಂದ್ಯಾವಳಿಯಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಭಾರತ ಮಹಿಳಾ ತಂಡ, ಗುರುವಾರ ನಡೆದ ಫಿಜಿ ವಿರುದ್ಧದ ಪಂದ್ಯದಲ್ಲಿ 10-0 ಗೋಲುಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ತಮ್ಮ ಗೆಲುವಿನ ಓಟ ಮುಂದುವರಿಸಿದೆ.
ಮಲೇಷ್ಯಾ ವಿರುದ್ಧದ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ಹೆಚ್ಚಿನ ಸಂಘಟಿತ ಆಟ ಪ್ರದರ್ಶಿಸಿದ ಭಾರತ ವನಿತೆಯರು ನಿರೀಕ್ಷೆಯಂತ ಜಯದ ನಗೆ ಬೀರಿದರು.
ರೊಸೆಲಿನ್ ದುಂಗ್ ದುಂಗ್, ರಾಣಿ ರಾಂಪಾಲ್, ಜಸ್ಪ್ರೀತ್ ಕೌರ್ ತಲಾ ಎರಡು ಗೋಲುಗಳನ್ನು ದಾಖಲಿಸಿದರೆ, ಸೌಂದರ್ಯ, ನಮಿತಾ ಟೊಪ್ಪೊ, ನವ್‌ಜೋತ್ ಕೌರ್ ಹಾಗೂ ಚಂಚನ್ ದೇವಿ ತಲಾ ಒಂದು ಗೋಲು ದಾಖಲಿಸಿದರು.
ಆತಿಥೇಯ ಭಾರತ ವಿರುದ್ಧ 59ನೆ ರ್ಯಾಂಕಿಂಗ್ ಪಡೆದಿರುವ ಫಿಜಿ ತಂಡ ಪಂದ್ಯದ ಉದ್ದಕ್ಕೂ ಕಠಿಣ ಸವಾಲು ಎದುರಿಸಿತು. ಹೀಗಾಗಿ ಭಾರತ ವನಿತೆಯರು ಪಂದ್ಯದ ಆರಂಭದಲ್ಲಿ ಪಡೆದ ಹಿಡಿತವನ್ನು ಕೊನೆಯವರೆಗೂ ಕಾಪಾಡಿಕೊಂಡರು.
ಪಂದ್ಯದ 7ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಸೌಂದರ್ಯ, ತಂಡಕ್ಕೆ ಮೊದಲ ಮುನ್ನಡೆ ತಂದುಕೊಟ್ಟರು. ನಂತರ 11ನೇ ನಿಮಿಷದಲ್ಲಿ ನಮಿತಾ ಗೋಲು ದಾಖಲಿಸಿದರು, 15ನೇ ನಿಮಿಷದಲ್ಲಿ ಗೋಲು ದಾಖಲಿಸಿದ ರೊಸೆಲಿನ್ ದುಂಗ್ ದುಂಗ್ ತಂಡಕ್ಕೆ 3-0 ಮುನ್ನಡೆ ತಂದುಕೊಟ್ಟರು. ನಂತರ ರಾಣಿ ರಾಂಪಾಲ್ 22ನೇ ನಿಮಿಷದಲ್ಲಿ, ನವ್‌ಜೋತ್ ಕೌರ್ 38ನೇ ನಿಮಿಷದಲ್ಲಿ ಹಾಗೂ ರೊಸೆಲಿನ್ 45ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಮೂಲಕ ಮೊದಲಾರ್ಧದಲ್ಲಿ ಭಾರತ ತಂಡ 6-0 ಅಂತರದ ಮುನ್ನಡೆ ಸಾಧಿಸಿದರು.
ದ್ವಿತಿಯಾರ್ಧದಲ್ಲೂ ಬಿಗುವಿನ ದಾಳಿ ಮುಂದುವರಿಸಿದ ಭಾರತೀಯ ವನಿತೆಯರು, ಯಾವುದೇ ಕ್ಷಣದಲ್ಲೂ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡಲಿಲ್ಲ. 59ನೇ ನಿಮಿಷದಲ್ಲಿ ಜಸ್ಪ್ರೀತ್ ಕೌರ್ ಗೋಲು ದಾಖಲಿಸಿದರು. ನಂತರ 61ನೇ ನಿಮಿಷದಲ್ಲಿ ರಾಣಿ ರಾಂಪಾಲ್, 66ನೇ ನಿಮಿಷದಲ್ಲಿ ಚಂಚನ್ ದೇವಿ ಗೋಲು ದಾಖಲಿಸಿದರು. ಅಂತಿಮವಾಗಿ 69ನೇ ನಿಮಿಷದಲ್ಲಿ ಮತ್ತೆ ಗೋಲು ದಾಖಲಿಸಿದ ಜಸ್ಪ್ರೀತ್ ಕೌರ್ ತಂಡದ ಗೋಲನ್ನು ಎರಡಂಕ್ಕಿಗೆ ತಲುಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

