ಕ್ರೀಡೆ

ಸಚಿವಾಲಯಹೊಸ ಗಡವು

Published On :

ನವದೆಹಲಿ: ದೇಶದ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ತನ್ನ ಕ್ರೀಡಾ ನೀತಿಯ ಅನುಸಾರವಾಗಿ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ಮಾಡುವಂತೆ ಸೂಚನ ನೀಡಿದ್ದು, ಈ ತಿದ್ದುಪಡಿ ಮಾಡಲು ಹೊಸ ಗಡುವು ನೀಡಿದೆ. ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಫೆ.28ರ ಒಳಗಾಗಿ ಕ್ರೀಡಾ ನೀತಿಯ ಅನ್ವಯ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಇಲ್ಲವಾದರೆ, ಸರ್ಕಾರಿ ಮಾನ್ಯತೆ ಮೇಲೆ ಪರಿಣಾಮ ಬೀರಲಿದೆ ಎಂದು ಕ್ರೀಡಾ ಸಚಿವಾಲಯ ತಿಳಿಸಿದೆ. ಇದುವರೆಗೂ ದೇಶದ 53 ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳು ಮಾನ್ಯತೆಪಡೆದಿವೆ. ಅದರಲ್ಲಿ 29 ಕ್ರೀಡಾ ಸಚಿವಾಲಯದ ಪತ್ರಕ್ಕೆ ಧನಾತ್ಮಕವಾ ಸ್ಪಂಧಿಸಿ ತಮ್ಮ ಸಂವಿಧಾನದಲ್ಲಿ ತಿದ್ದುಪಡಿ ತಂದಿವೆ. ಬುಧವಾರ ಎಲ್ಲಾ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ಗಳಿಗೂ ಹೊಸ ಪತ್ರವನ್ನು ಕಳುಹಿಸಿರುವ ಕ್ರೀಡಾ ಸಚಿವಾಲಯ, ತಿದ್ದುಪಡಿ ಮಾಡದ ಫೆಡರೇಷನ್‌ಗಳಿಗೆ ಫೆ.28ರ ಗಡುವು ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.