ಜಪಾನ್‌ಗೆ ಜಯ ತಂದ ಕೊಮಾಜಾವಾ
ನವದೆಹಲಿ: ರಿಕಾ ಕೊಮಾಜಾವಾ ಬಾರಿಸಿದ ಪೆನಾಲ್ಟಿ ಕಾರ್ನರ್ ಗೋಲ್‌ನ ಸಹಾಯದಿಂದ ಶುಕ್ರವಾರ ರಾತ್ರಿ ನಡೆದ ವಿಶ್ವ ಹಾಕಿ ಲೀಗ್ ಪಂದ್ಯದಲ್ಲಿ ಜಪಾನ್ ತಂಡ, ಭಾರತದ ವಿರುದ್ಧ 3-2 ಅಂತರದಿಂದ ಸೋಲಿಸಿತು.
ಗೆಲುವಿನ ಲಹರಿಯಲ್ಲಿದ್ದ ಭಾರತ ತಂಡ ಹಾಗೂ ಅದಕ್ಕಿಂತಲೂ ಹೆಚ್ಚಿನ ರ್ಯಾಂಕಿಂಗ್ ಹೊಂದಿರುವ ಜಪಾನ್ ನಡುವಿನ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು.
ಪಂದ್ಯದ ಆರಂಭದಿಂದಲೂ ಮಿಂಚಿನ ಆಟವಾಡಿದ್ದ ಜಪಾನ್ 2 ಗೋಲು ಗಳಿಸಿ, ಮುನ್ನಡೆ ಸಾಧಿಸಿತ್ತು. ಆನಂತರ, ಪಂದ್ಯದ ಕೊನೆಯ ಹಂತದಲ್ಲಿ ಭಾರತ ಎರಡು ಗೋಲು ದಾಖಲಿಸಿ, ಸಮಬಲ ಸಾಧಿಸಿತು.
ಪೆನಾಲ್ಟಿ ಅವಕಾಶ: ಪಂದ್ಯ ಡ್ರಾ ಆದ ಹಿನ್ನೆಲೆಯಲ್ಲಿ, ಇತ್ತಂಡಗಳಿಗೆ ತಲಾ ಐದು ಪೆನಾಲ್ಟಿ ಕಾರ್ನರ್ ಅವಕಾಶ ನೀಡಲಾಯಿತು. ಭಾರತದ ಪರವಾಗಿ ಮೊದಲ ಮೂರು ಪೆನಾಲ್ಟಿ ಕಾರ್ನರ್ ಅವಕಾಶ ಪಡೆದ ಚಂಚನ್ ದೇವಿ ತೊಕ್ಚೋಮ್, ನಾಯಕಿ ರೀತು ರಾಣಿ ಹಾಗೂ ವಂದನಾ ಕಟಾರಿಯಾ ಮೂವರೂ ಗೋಲು ಬಾರಿಸುವಲ್ಲಿ ವಿಫಲರಾದರು. ಆದರೆ, ಜಪಾನ್‌ನ ಮಜುಕಿ ಅರಿ, ಯೂರಿ ನಗಾಯ್ ಅವರು ಗೋಲು ದಾಖಲಿಸುವಲ್ಲಿ ಯಶಸ್ವಿಯಾಗಿ ತಮ್ಮ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.
ಆನಂತರ, ಭಾರತಕ್ಕೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಸಫಲರಾದ ಸೌಂದರ್ಯ ಯೆಂದಾಳ ಹಾಗೂ ರಾಣಿ, 2 ಗೋಲು ಗಳಿಸಿಕೊಟ್ಟರು.
ನಂತರ, ಜಪಾನ್‌ನ ಎರಡು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅಕಿಕೋ ಕಾಟೋ ಅವರ ಪ್ರಯತ್ನ ವಿಫಲವಾಯಿತು. ಆದರೆ, ಜಪಾನ್‌ಗೆ ಉಳಿದಿದ್ದ ಕೊನೆಯ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಆ ತಂಡದ ನಾಯಕಿ ರಿಕಾ ಕೊಮಾಜಾವಾ ಅವರು ಸಾಫಲ್ಯತೆ ಕಂಡರು. ಕೊನೆಯ ಪೆನಾಲ್ಟಿಯಲ್ಲಿ ಅವರು ಗಳಿಸಿದ ಗೋಲು ಜಪಾನ್‌ಗೆ 3-2ರ ಜಯ ತಂದುಕೊಟ್ಟಿತು. ಪೆನಾಲ್ಟಿ ಕಾರ್ನರ್‌ಗೂ ಮುನ್ನ ನಡೆದಿದ್ದ ಪಂದ್ಯದಲ್ಲಿ ಜಪಾನ್ ಪರವಾಗಿ ಶಿಹೋ ಸಕಾಯ್ (4ನೇ ನಿಮಿಷ), ಅಕಿಕೋ (31ನೇ ನಿಮಿಷ) ಗೋಲು ಗಳಿಸಿ, ಭಾರತಕ್ಕಿಂತ 2-0 ಮುನ್ನಡೆ ಸಾಧಿಸಲು ನೆರವಾಗಿದ್ದರು.
ಪಂದ್ಯದ ದ್ವಿತೀಯಾರ್ಧದ ಅಂತಿಮ ಹಂತದಲ್ಲಿ ಭಾರತದ ಪರವಾಗಿ, ಸೌಂದರ್ಯ ಯೆಂದಾಳ (62ನೇ ನಿಮಿಷ), ಅನುಪಾ ಬಾರ್ಲಾ (65ನೇ ನಿಮಿಷ) ಗೋಲು ಗಳಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

