ಕಿವೀಸ್ ನೆಲದಲ್ಲಿ ಸರಣಿ ಮುಡಿಗೇರಿಸಿಕೊಂಡ ಆಂಗ್ಲ ಪಡೆ

ಆಕ್ಲೆಂಡ್: ಸ್ಟೀವನ್ ಫಿನ್ ಅವರ ಆಕ್ರಮಣಕಾರಿ ಬೌಲಿಂಗ್ ಹಾಗೂ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳ ಅಬ್ಬರದ ಬ್ಯಾಟಿಂಗ್ನ ನೆರವಿನಿಂದಾಗಿ ಇಂಗ್ಲೆಂಡ್ ತಂಡ, ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ 5 ವಿಕೆಟ್ಗಳ ಜಯ ಸಾಧಿಸಿದೆ. ಈ ಜಯದಿಂದಾಗಿ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಆಂಗ್ಲರ ತಂಡ ಗೆದ್ದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡ 185 ರನ್ಗಳ ಅಲ್ಪ ಮೊತ್ತವನ್ನು ಪೇರಿಸಿತ್ತು. ನಂತರ, ಬ್ಯಾಟಿಂಗ್ಗೆ ಇಳಿದ ಇಂಗ್ಲೆಂಡ್ ತಂಡ, 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ, ಜಯ ಸಂಪಾದಿಸಿತು.
ಟಾಸ್ ಗೆದ್ದಿ ಇಂಗ್ಲೆಂಡ್, ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಫಿನ್ ಅವರ ಆಕ್ರಮಣಕಾರಿ ಬೌಲಿಂಗ್ನ ನೆರವಿನಿಂದಾಗಿ, ನ್ಯೂಜಿಲೆಂಡ್ ತಂಡ ಆರಂಭಿಕರಾದ ವ್ಯಾಟ್ಲಿಂಗ್ (1) ಹಾಗೂ ರುದರ್ಫೋರ್ಡ್ (2) ಅವರನ್ನು ಕಳೆದುಕೊಂಡಿತು.
ಆನಂತರ, ಬೌಲರ್ಗಳಾದ ಆ್ಯಂಡರ್ಸನ್ ಹಾಗೂ ಬ್ರಾಡ್ ಇಬ್ಬರೂ ಕ್ರಮವಾಗಿ ಮೂರನೇ ಕ್ರಮಾಂಕದ ವಿಲಿಯಮ್ಸನ್ (7) ಹಾಗೂ ಟೇಲರ್ (28) ವಿಕೆಟ್ ಕಬಳಿಸಿದರು. ಏತನ್ಮಧ್ಯೆ, ಮಧ್ಯಮ ಕ್ರಮಾಂಕದ ಗ್ರಾಂಟ್ ಇಲಿಯಟ್ ರನೌಟ್ ಆದರು.
ಇನ್ನು, ಇವರ ದಾಳಿಗೆ ಕೈ ಜೋಡಿಸಿದ ಸ್ವಾನ್, ಮಧ್ಯಮ ಕ್ರಮಾಂಕದ ಬ್ರೆಂಡಾನ್ ಮೆಕಲಂ (79) ಹಾಗೂ ಜೇಮ್ಸ್ ಫ್ರಾಂಕ್ಲಿನ್ (13) ಅವರ ವಿಕೆಟ್ ಪಡೆದರು.
ಆನಂತರ, ಪುನಃ ದಾಳಿಗಿಳಿದ ಫಿನ್ ಅವರು, ನಥಾನ್ ಮೆಕಲಂ (4) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ಇನ್ನು, ಕಿವೀಸ್ ತಂಡದ ಕೊನೆಯ ಕ್ರಮಾಂಕದ ಬ್ಯಾಟ್ಸ್ಮನ್ಗಳಾದ ಆ್ಯಂಡ್ರ್ಯೂ ಎಲ್ಲೀಸ್ (9), ಕೈಲ್ ಮಿಲ್ಸ್ (5) ಅವರು ಕ್ರಮವಾಗಿ ಬ್ರಾಡ್ ಹಾಗೂ ವೋಕ್ಸ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿ, ಹೊರನಡೆದರು. ಕೊನೆಯದಾಗಿ, 5 ರನ್ ಗಳಿಸಿದ್ದ ಸೌಥೀ ಅಜೇಯರಾಗಿ ಉಳಿದರು.
ಬ್ರೆಂಡಾನ್ ಮೆಕಲಂ ಹೊರತುಪಡಿಸಿ, ಮಿಕ್ಕೆಲ್ಲಾ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದ್ದರಿಂದ ಕಿವೀಸ್, 185 ರನ್ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ನ ಫಿನ್ ಅವರು ಒಂಭತ್ತು ಓವರ್ ಮಾಡಿ, 27 ರನ್ ನೀಡಿ, ಮೂರು ವಿಕೆಟ್ ಕಬಳಿಸಿದರು.
ಜಯ ತಂದುಕೊಟ್ಟ ಕುಕ್-ಟ್ರಾಟ್: ಕಿವೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಇಂಗ್ಲೆಂಡ್ ತಂಡ, ತನ್ನ ಇನಿಂಗ್ಸ್ ಆರಂಭಗೊಳಿಸಿದ ಕೆಲ ಹೊತ್ತಿನಲ್ಲೇ ಇಯಾನ್ ಬೆಲ್ (24) ಅವರನ್ನು ಕಳೆದುಕೊಂಡಿತು. ಆದರೆ, ಆನಂತರ ಜೊತೆಯಾದ ಆರಂಭಿಕ ಹಾಗೂ ನಾಯಕ ಅಲಾಸ್ಟೇರ್ ಕುಕ್ ಹಾಗೂ ಮೂರನೇ ಕ್ರಮಾಂಕದ ಜೊನಾಥನ್ ಟ್ರಾಟ್ ಇಬ್ಬರೂ, 2ನೇ ವಿಕೆಟ್ಗೆ 67 ರನ್ಗಳ ಜೊತೆಯಾಟವಾಡಿ, ಇನಿಂಗ್ಸ್ಗೆ ಆಸರೆಯಾದರು.
22ನೇ ಓವರ್ನಲ್ಲಿ ಟ್ರಾಟ್ (38) ಮತ್ತು 24ನೇ ಓವರ್ನಲ್ಲಿ ಕುಕ್ (46) ವಿಕೆಟ್ ಒಪ್ಪಿಸಿದರು, ನಂತರ ಬಂದ ಜೊ ರೂಟ್ ಹಾಗೂ ಇಯಾನ್ ಮಾರ್ಗನ್ (39) ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. 33ನೇ ಓವರ್ನಲ್ಲಿ ಇಯಾನ್ ಮಾರ್ಗನ್ ಔಟಾದರು. ಆದರೆ, ಅವರ ನಂತರ ಬಂದ ಜಾಸ್ ಬಟ್ಲರ್ (3) ಹೆಚ್ಚು ಆಡದಿದ್ದರೂ, ಕ್ರೀಸ್ನಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಬೀಸಿದ ರೂಟ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ, 37.5 ಓವರ್ಗಳಲ್ಲಿ ಇಂಗ್ಲೆಂಡ್ ತಂಡ, 5 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿತು. ರೂಟ್ (28), ವೋಕ್ಸ್ (3) ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್: 185/10 (43.5 ಓವರ್)
ಬ್ರೆಂಡಾನ್ ಮೆಕಲಂ 79 (68), ಟೇಲರ್ 28 (52)
ಬೌಲರ್: ಫಿನ್ನ್ 27/3, ಬ್ರಾಡ್ 38/2
ಇಂಗ್ಲೆಂಡ್: 186/5 (37.3 ಓವರ್)
ಕುಕ್ 46 (67), ಟ್ರಾಟ್ 38 (44)
ಬೌಲಿಂಗ್: ಸೌಥೀ 48/3, ಎಲ್ಲೀಸ್ 35/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


