ಕ್ರೀಡೆ

ಭಾರತಕ್ಕೆ ಮತ್ತೊಂದು ಗೆಲುವು

Published On :

ನವದೆಹಲಿ: ವಿಶ್ವ ಹಾಕಿ ಲೀಗ್‌ನಲ್ಲಿ ತನ್ನ ಜಯದ ಅಭಿಯಾನವನ್ನು ಮುಂದುವರೆಸಿರುವ ಭಾರತ ಪುರುಷರ ಹಾಕಿ ತಂಡ, ಶನಿವಾರ ಮತ್ತೊಂದು ಜಯ ಪಡೆಯಿತು.
ಚೀನಾ ವಿರುದ್ಧದ ಪಂದ್ಯದಲ್ಲಿ ಭಾರತ 0-4 ಗೋಲುಗಳ ಅಂತರದಲ್ಲಿ ಜಯ ಗಳಿಸಿತು.
ಭಾರತ ತಂಡದ ಉಪ ನಾಯಕ ವಿ.ಆರ್. ರಘುನಾಥ್ ಅವರು ಪಂದ್ಯದ 12ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡಕ್ಕೆ ಮೊದಲ ಗೋಲು ಗಳಿಸಿಕೊಟ್ಟರು.
ಆನಂತರ, ರಘುನಾಥ್ ಅವರೇ ಪಂದ್ಯದ 28ನೇ ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ, ಭಾರತಕ್ಕೆ 2-0ಯ ಮುನ್ನಡೆ ತಂದುಕೊಟ್ಟರು.
ಅತ್ತ, ಚೀನಾದ ಕಡೆಯಿಂದ ಈ ಹಂತದಲ್ಲಿ ಯಾವುದೇ ಆಕ್ರಮಣಕಾರಿ ಆಟ ಮೂಡಿ ಬರಲಿಲ್ಲ.
ಏತನ್ಮಧ್ಯೆ, ಭಾರತದ ಧರಮ್‌ವೀರ್ ಸಿಂಗ್ ಅವರು, ಪಂದ್ಯದ 39ನೇ ನಿಮಿಷದಲ್ಲಿ ಭಾರತಕ್ಕೆ ಮೂರನೇ ಗೋಲು ದಾಖಲಿಸಿಕೊಟ್ಟರು.
ಆನಂತರ, ರೂಪಿಂದರ್ ಪಾಲ್ ಸಿಂಗ್ ಅವರು ಪಂದ್ಯದ 43ನೇ ನಿಮಿಷದಲ್ಲಿ ದಾಖಲಿಸಿದ ಗೋಲ್‌ನ ಸಹಾಯದಿಂದಾಗಿ, ಭಾರತ 4-0ರ ಮುನ್ನಡೆ ಪಡೆಯಿತು.
ಹೀಗೆ, ಪ್ರತಿ ಹಂತದಲ್ಲೂ ಎದುರಾಳಿಗಳ ಮೇಲೆ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಭಾರತ ತಂಡ, ಅಂತಿಮವಾಗಿ 4-0 ಗೋಲುಗಳ ಅಂತರದಿಂದ ಪಂದ್ಯವನ್ನು ಗೆದ್ದುಕೊಂಡಿತು.
ಚೀನಾ ವಿರುದ್ಧ ಜಯ ಸಾಧಿಸಿರುವ ಭಾರತ ತಂಡ, ತನ್ನ ಮುಂದಿನ ಹಾಗೂ ರೌಂಡ್-ರಾಬಿನ್ ಸುತ್ತಿನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.