ಮ್ಯಾನ್ಮಾರ್ ತಲುಪಿದ ಫುಟ್ಬಾಲ್ ಪಡೆ
ಯಾಂಗನ್: ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡ, ಚರ್ಚಿಲ್ ಬ್ರದರ್ಸ್ ಹಾಗೂ ಈಸ್ಟ್ ಬೆಂಗಾಲ್ ಆಟಗಾರರು ಮಾರ್ಚ್ 2ರಿಂದ ಆರಂಭವಾಗಲಿರುವ ಎಎಫ್ಸಿ ಚಾಲೆಂಜ್ ಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಭಾಗವಹಿಸಲು ಮ್ಯಾನ್ಮಾರ್ ತಲುಪಿದ್ದಾರೆ.
ಸೋಮವಾರ ರಾತ್ರಿ ಮುಂಬೈಯಿಂದ ಸಿಂಗಾಪುರ ಮೂಲಕ ತೆರಳಿದ ಆಟಗಾರರು ಮಂಗಳವಾರ ಬೆಳಗ್ಗೆ ಮ್ಯಾನ್ಮಾರ್ ತಲುಪಿದ್ದಾರೆ. 34 ಡಿಗ್ರಿ ತಾಪಮಾನದಲ್ಲಿ ಆಟಗಾರರನ್ನು ಬರಮಾಡಿಕೊಳ್ಳಲಾಯಿತು. ಮುಂಬರುವ ದಿನಗಳಲ್ಲಿ ಇಲ್ಲಿನ ತಾಪಮಾನ ಇನ್ನು ಹೆಚ್ಚಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಎ ಗುಂಪಿನಲ್ಲಿ ಆತಿಥೇಯ ಮ್ಯಾನ್ಮಾರ್, ಚೀನಾ ತೈಪೇ ಹಾಗೂ ಗುವಾಮ್ ದೇಶಗಳೊಂದಿಗೆ ಸೇರಿಕೊಂಡಿವೆ.
ಚರ್ಚಿಲ್ ಬ್ರದರ್ಸ್ನ ನಾಲ್ಕು ಆಟಗಾರರಾದ ಸಂದೀಪ್ ನಂದಿ, ಡೆಂಜಿಲ್ ಫ್ರಾನ್ಸ್, ಲೆನ್ನಿ ರಾಡ್ರಿಗಸ್ ಹಾಗೂ ಸುನಿಲ್ ಚೆಟ್ರಿ ಬುಧವಾರ ತಂಡವನ್ನು ಸೇರಲಿದ್ದಾರೆ. ಈಸ್ಟ್ ಬೆಂಗಾಲ್ ಆಟಗಾರರಾದ ರಾಜು ಗಾಯಕ್ವಾಡ್, ಮೆಹ್ತಾಬ್ ಹುಸ್ಸೇನ್ ಹಾಗೂ ರಾಬಿನ್ ಸಿಂಗ್ ಅವರು ಫೆಬ್ರುವರಿ 28ಕ್ಕೆ ಮ್ಯಾನ್ಮಾರ್ಗೆ ತೆರಳಲಿದ್ದಾರೆ.
ಕಾರಣ ಅದುವರೆಗೂ ಕೋಲ್ಕತಾದಲ್ಲಿ ನಡೆಯಲಿರುವ ಎಎಫ್ಸಿ ಕಪ್ ಪಂದ್ಯಗಳಲ್ಲಿ ಅವರು ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

