ಬೋಪಣ್ಣ ಜೋಡಿ ಕ್ವಾರ್ಟರ್ಗೆ
ದುಬೈ: ಭಾರತದ ರೋಹನ್ ಬೋಪಣ್ಣ ಹಾಗೂ ರ್ಯಾಮ್ ಜೋಡಿ ದುಬೈ ಓಪನ್ನ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ತಲುಪಿದೆ.
ಆದರೆ, ಭಾರತದ ಮತ್ತೊಬ್ಬ ಟೆನಿಸಿಗ ಸೋಮ್ದೇವ್ ದೇವವರ್ಮ್ನ್ ಅವರು, ಪಂದ್ಯಾವಳಿಯಿಂದ ಆಚೆ ನಡೆದಿದ್ದಾರೆ.
ಬುಧವಾರ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೊಸದಾಗಿ ಜೋಡಿಯಾಗಿರುವ ಭಾರತ-ಅಮೆರಿಕದ ಬೋಪಣ್ಣ ಹಾಗೂ ರಾಜೀವ್ ರಾಮ್, ಪಾಕಿಸ್ತಾನ-ಅಮೆರಿಕದ ಜೋಡಿಯಾದ ಏಸಮ್ ಉಲ್ ಹಕ್ ಹಾಗೂ ಜೀನ್-ಜೂಲಿಯನ್ ರೋಜರ್ ಜೋಡಿಯನ್ನು 6-4, 6-4 ಅಂತರದಲ್ಲಿ ಸೋಲಿಸಿತು.
ಕ್ವಾರ್ಟರ್ ಫೈನಲ್ ಹಂತದಲ್ಲಿ, ಬೋಪಣ್ಣ- ರ್ಯಾಮ್ ಜೋಡಿ, ರೊಮೇನಿಯಾ-ಚೆಕ್ ಗಣರಾಜ್ಯದ ಜೋಡಿಯಾದ ವಿಕ್ಟರ್ ಹ್ಯಾನಿಸ್ಕೂ ಹಾಗೂ ಲ್ಯೂಕಸ್ ರೊಸೋಲ್ ಅವರನ್ನು ಎದುರಿಸಲಿದೆ.
ನಿರಾಸೆಗೊಳಿಸಿದ ಸೋಮ್: ಭಾರತದ ಟೆನಿಸಿಗ ಸೋಮ್ದೇವ್ ಅವರು, ಪಂದ್ಯಾವಳಿಯಿಂದ ಆಚೆ ನಿರ್ಗಮಿಸಿ ಭಾರತದ ಟೆನಿಸ್ ಕ್ರೀಡಾಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಬುಧವಾರ ನಡೆದ, ಪುರುಷರ ಸಿಂಗಲ್ಸ್ ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಮ್ ಅವರು, ವಿಶ್ವದ 7ನೇ ಶ್ರೇಯಾಂಕದ ಆಟಗಾರ ಅರ್ಜೆಂಟೈನಾದ ಜುವಾನ್ ಮಾರ್ಟಿನ್ ಡೆಲ್ ಪೊಟ್ರೋ ಅವರ ವಿರುದ್ಧ 6-4, 6-4 ಅಂತರದಲ್ಲಿ ಸೋಲು ಕಂಡರು.
ಜೊಕೋವಿಚ್ಗೆ ಜಯ: ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ನೊವಾಕ್ ಜೊಕೋವಿಚ್ ಅವರು, ಬೌಟಿಸ್ತಾ ಅಗಟ್ ಅವರನ್ನು 6-1, 7-6 (7-4) ಅಂತರದಲ್ಲಿ ಸೋಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

