ಕ್ರೀಡೆ

ಕರ್ನಾಟಕ ಮನೆಗೆ ವಾಪಸ್

ಕರ್ನಾಟಕ ಮನೆಗೆ ವಾಪಸ್
Published On :

ವಿಶಾಖಪಟ್ಟಣ: ಪಶ್ಚಿಮ ಬಂಗಾಳದ ಮಾರಕ ಬೌಲಿಂಗ್ ದಾಳಿಗೆ ಕುಸಿದ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪರಾಭವ ಹೊಂದಿದೆ.
ಪ್ರಿ ಕ್ವಾರ್ಟರ್ಫೈನಲ್ವರೆಗೂ ಆಕರ್ಷಕ ಪ್ರದರ್ಶನ ನೀಡಿದ್ದ ಕರ್ನಾಟಕ ತಂಡ, ಕ್ವಾರ್ಟರ್ಫೈನಲ್ನಲ್ಲಿ ಸೋಲನುಭವಿಸಿರುವುದು ರಾಜ್ಯ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪಶ್ಚಿಮ ಬಂಗಾಳ ತಂಡ, ಕರ್ನಾಟಕವನ್ನು ಕೇವಲ 32.1 ಓವರ್ಗಳಲ್ಲಿ 127 ರನ್ಗಳ ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಬಂಗಾಳ ಕೇವಲ 28.3 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 128 ರನ್ ಪೇರಿಸಿ ಜಯದ ಕೇಕೆ ಹಾಕಿತು. ವೃದ್ಧಿಮಾನ್ ಸಾಹ (ಅಜೇಯ 52) ಮತ್ತು ಶ್ರೀವತ್ಸ ಗೋಸ್ವಾಮಿ (ಅಜೇಯ 70) ಅವರು ತಂಡವನ್ನು ಜಯದ ದಡಕ್ಕೆ ಸೇರಿಸಿದರು.
ಇದಕ್ಕೂ ಮುನ್ನ ಬಂಗಾಳದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಕರ್ನಾಟಕ ಬ್ಯಾಟ್ಸ್ಮನ್ಗಳಲ್ಲಿ ಮನೀಶ್ ಪಾಂಡೆ (28), ಕರುಣ್ ನಾಯರ್ (22), ವಿನಯ್ ಕುಮಾರ್ (20) ಹಾಗೂ ಅಭಿಮನ್ಯು ಮಿಥುನ್ (17) ಮಾತ್ರ ಎರಡಂಕಿ ದಾಟಿದರು.
ಬಂಗಾಳ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಶಮಿ ಅಹ್ಮದ್ 32/3, ಪ್ರತಾಪ ಸಿಂಗ್ 40/3, ಲಕ್ಷ್ಮಿ ಶುಕ್ಲಾ 20/2 ಹಾಗೂ ಐರೇಶ್ ಸಕ್ಸೇನಾ ಮತ್ತು ಸಂಜಿಬ್ ಸನಾಯಲ್ ಅವರು ತಲಾ ಒಂದು ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ 127/10 (32.1 ಓವರ್)
ಪಾಂಡೆ 28, ನಾಯರ್ 22
ಬೌಲಿಂಗ್: ಅಹ್ಮದ್ 32/3, ಪ್ರತಾಪ 40/3.
ಬಂಗಾಳ: 128/0 (28.3 ಓವರ್)
ವೃದ್ಧಿಮಾನ್ ಅಜೇಯ 52, ಗೋಸ್ವಾಮಿ ಅಜೇಯ 70.
ಬೌಲಿಂಗ್: ವಿನಯ್ 21/0, ಮಿಥುನ್ 16/0.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.