ಮೊಹಾಲಿ: ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಜಯಿಸಿದ ನಂತರ ಸತತ ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ಇಂಗ್ಲೆಂಡ್ ತಂಡ, ಮತ್ತೇ ಗೆಲುವು ಸಾಧಿಸುವ ಮೂಲಕ ಪರಿಸ್ಥಿತಿಯನ್ನು ಬದಲಿಸುವ ಸಾಮರ್ಥ್ಯವಿದೆ ಎಂದು ಇಂಗ್ಲೆಂಡ್ ತಂಡದ ಸ್ಪಿನ್ನರ್ ಟ್ರೇಡ್‌ವೆಲ್ ತಿಳಿಸಿದ್ದಾರೆ. ಸತತ ಎರಡು ಸೋಲುಗಳಿಂದ ತಂಡ ಹಿನ್ನಡೆ ಅನುಭವಿಸಿದೆ. ಆದರೆ ಇಷ್ಟು ಬೇಗನೆ ಸರಣಿಯ ಫಲಿತಾಂಶದ ಬಗ್ಗೆ ಯೋಚಿಸಿದರೆ ನಮ್ಮ ಪ್ರದರ್ಶನದ ಮೇಲೆ ಅದು ಪರಿಣಾಮ ಬೀರಲಿದೆ. ಹಾಗಾಗಿ ನಾವು ಯಾವುದೇ ವಿಷಯದ ಬಗ್ಗೆ ಚಿಂತನೆ ಮಾಡದೆ ಕೇವಲ ಮುಂದಿನ ಪಂದ್ಯಗಳತ್ತ ಗಮನ ಹರಿಸುತ್ತಿದ್ದೇವೆ ಎಂದು ಟ್ರೆಡ್‌ವೆಲ್ ಹೇಳಿದರು. ನಾವು ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈ ಪ್ರದರ್ಶನದ ಆಧಾರದ ಮೇಲೆ ನಮ್ಮ ಮುಂದಿನ ಸಿದ್ಧತೆ ನಡೆಸುತ್ತೇವೆ. ನಾವು ಕಳೆದ ಎರಡು ದಿನಗಳಲ್ಲಿ ಉತ್ತಮ ಅಭ್ಯಾಸ ನಡೆಸಿದ್ದು, ಉತ್ತಮ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದೇವೆ ಎಂದರು.