ವಾರಿಯರ್ಸ್, ವಿಝಾರ್ಡ್ಸ್ ಪಂದ್ಯ ಡ್ರಾ

Updated on: 

ಜಲಂಧರ್: ಜೇಪಿ ಪಂಜಾಬ್ ವಾರಿಯರ್ಸ್ ಹಾಗೂ ಉತ್ತರ ಪ್ರದೇಶ ವಿಝಾರ್ಡ್ಸ್ ತಂಡಗಳ ನಡುವೆ ಮಂಗಳವಾರ ನಡೆದ ಎಚ್‌ಐಎಲ್ ಹಾಕಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಉಭಯ ತಂಡಗಳು ತಲಾ 2 ಗೋಲು ಗಳಿಸಿದವು.
ಶಿವೇಂದ್ರ ಸಿಂಗ್ ಹಾಗೂ ಮಾಲಕ್ ಸಿಂಗ್ ಇಬ್ಬರೂ ವಾರಿಯರ್ಸ್ ಪರವಾಗಿ ಗೋಲು ಗಳಿಸಿ 2-0 ಮುನ್ನಡೆಯನ್ನು ತಮ್ಮ ತಂಡಕ್ಕೆ ಒದಗಿಸಿಕೊಟ್ಟಿದ್ದರು.
ಆದರೆ, ಉತ್ತರ ಪ್ರದೇಶದ ಸ್ಟಾರ್ ಆಟಗಾರ ವಿ.ಆರ್. ರಘುನಾಥ್ ಅವರು ತಮಗೆ ಸಿಕ್ಕ ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ತಂಡಕ್ಕೆ 2 ಗೋಲುಗಳನ್ನು ತಂದಿತ್ತರು. ಇದರಿಂದಾಗಿ, ಉತ್ತರ ಪ್ರದೇಶ ಪಂದ್ಯದಲ್ಲಿ 2-2ರ ಸಮಬಲ ಸಾಧಿಸಿತು.
ಪಂದ್ಯದ ಮುಗಿಯುವವರೆಗೂ ಇದೇ ಸಮಬಲ ಮುಂದುವರೆದ ಹಿನ್ನೆಲೆಯಲ್ಲಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com