ಫಿಲಿಪ್ ಹ್ಯೂಸ್ ಆಟಕ್ಕೆ ಬೆದರಿದ ಸಿಂಹಳಿಯರು

Updated on: 

ಹೊಬಾರ್ಟ್: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ 2-1ರ ಹಿನ್ನಡೆ ಅನುಭವಿಸಿದ್ದ ಆಸೀಸ್ ತಂಡ ಬುಧವಾರ ಇಲ್ಲಿ ನಡೆದ ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಫಿಲಿಪ್ ಹ್ಯೂಸ್ ಅವರ ಅಮೋಘ ಶತಕದ ನೆರವಿನಿಂದ 32 ರನ್ಗಳ ಅಂತರದ ಜಯ ಸಾಧಿಸಿದೆ. ಈ ಮೂಲಕ ಆಸೀಸ್ ತಂಡ ಸರಣಿ ಸೋಲಿನಿಂದ ಪಾರಾಗಿ ಸರಣಿಯನ್ನು ಸಮಬಲ ಮಾಡಿಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸೀಸ್ ನಿಗಧಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 247 ರನ್ಗಳಿಸಿತು. ಆರಂಭಿಕರಾಗಿ ಬಂದ ಮ್ಯಾಥ್ಯೂ ವೇಡ್ 23 ರನ್ಗಳಿಸಿದರೆ, ವಾರ್ನರ್ ಕೇವಲ 10 ರನ್ಗಳಿಸಿದರು. ನಂತರ ಬಂದ ಹ್ಯೂಸ್ಉತ್ತಮ ಬ್ಯಾಟಿಂಗ್ ನಡೆಸುವ ಮೂಲಕ ಆರಂಭಿಕ ಕುಸಿತದಿಂದ ತಂಡವನ್ನು ಪಾರು ಮಾಡಿದರು. 154 ಎಸೆತಗಳನ್ನು ಎದುರಿಸಿದ ಹ್ಯೂಸ್ಅಜೇಯ 138 ರನ್ಗಳಿಸಿದರು. ಉತ್ತಮ ಸಮಯೋಜಿತ ಆಟ ಪ್ರದರ್ಶಿಸಿದ ಹ್ಯೂಸ್ತಮ್ಮ ಇನಿಂಗ್ಸ್ನಲ್ಲಿ 13 ಬೌಂಡರಿಗಳು ಹಾಗೂ 1 ಸಿಕ್ಸರ್ಗಳನ್ನು ಬಾರಿಸಿದ್ದರು.
ಆಸೀಸ್ ತಂಡದ ಪರ ಹ್ಯೂಸ್ಹೊರತು ಪಡಿಸಿ ಉಳಿದ ಯಾವುದೇ ಆಟಗಾರರು ಉತ್ತಮ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ಹ್ಯೂಸ್ನಂತರ ಡೇವಿಡ್ ಹಸ್ಸಿ 34 ರನ್ಗಳಿಸಿದರೆ, ಬೈಲಿ 17 ರನ್ಗಳಿಸಿದರು. ನಂತರ ಕಾಂಗರೂಗಳು ನೀಡಿದ ಗುರಿಯನ್ನು ಬೆನ್ನಟ್ಟಿದ ಸಿಂಹಳಿಯರು 48.3 ಓವರ್ಗಳಲ್ಲಿ ತನ್ನೇಲ್ಲಾ ವಿಕೆಟ್ ಕಳೆದುಕೊಂಡು 215 ರನ್ಗಳಿಸಿತು. ಶ್ರೀಲಂಕಾ ತಂಡದ ಅಗ್ರ ನಾಲ್ಕು ಆಟಗಾರರು ಉತ್ತಮ ಮೊತ್ತ ಗಳಿಸಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಜಯವರ್ಧನೆ 38 ಹಾಗೂ ದಿಲ್ಷಾನ್ 19 ರನ್ಗಳಿಸಿದರು. ಮೂರನೇ ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಬಂದ ತಿರಿಮಾನೆ ಹಾಗೂ ಚಂದಿಮಲ್ ಕ್ರಮವಾಗಿ 1 ಹಾಗೂ 6 ರನ್ಗಳಿಸಿದರು. ಈ ನಡುವೆ ಬ್ಯಾಟಿಂಗ್ಗೆ ಬಂದ ಮ್ಯಾಥ್ಯೂಸ್ 79 ಎಸೆತಗಳನ್ನೆದುರಿಸಿ 67 ರನ್ಗಳಿಸಿದರು. ನಂತರ ಬಂದ ಬ್ಯಾಟ್ಸ್ಮನ್ಗಳು ಇವರಿಗೆ ಉತ್ತಮ ಸಾಥ್ ನೀಡಲು ವಿಫಲರಾದ ಕಾರಣ ಶ್ರೀಲಂಕಾ ತಂಡ 215ರನ್ಗಳಿಗೆ ಸರ್ವ ಪತನಗೊಂಡು 32 ರನ್ಗಳ ಸೋಲನುಭವಿಸಿತು.

ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ 247/5 (50 ಓವರ್)
ಹ್ಯೂಸ್138, ಹಸ್ಸಿ 34
ಬೌಲಿಂಗ್: ದಿಲ್ಷಾನ್ 22/1, ಪೆರೇರಾ 39/1
ಶ್ರೀಲಂಕಾ 215/10 (48.2 ಓವರ್ಗಳು)
ಮ್ಯಾಥ್ಯೂಸ್ 67, ಜಯವರ್ಧನೆ 38
ಬೌಲಿಂಗ್: ದೊಹಾರ್ಟಿ 21/3, ಹೆನ್ರಿಕ್ಸ್ 32/3
ಪಂದ್ಯ ಶ್ರೇಷ್ಠ: ಫಿಲಿಪ್ ಹ್ಯೂಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com