ಜೈಪುರ: ಭಾರತೀಯ ಕ್ರಿಕೆಟ್ ತಂಡದಲ್ಲಿ ಈ ಹಿಂದೆ 'ಮಾನಸಿಕ ಸ್ಥಿತಿ ತರಬೇತುದಾರ'ರಾಗಿ ಸೇವೆ ಸಲ್ಲಿಸಿದ್ದ ಪ್ಯಾಡಿ ಅಪ್ಟನ್ ಅವರನ್ನು ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ತರಬೇತುದಾರರನ್ನಾಗಿ ನೇಮಿಸಲಾಗಿದೆ. ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ತರಬೇತುದಾರರಾಗಿಯೂ ಸೇವೆ ಸಲ್ಲಿಸಿರುವ 44 ವರ್ಷದ ಪ್ಯಾಡಿ ಅವರು, ಇದೇ ವರ್ಷ ಏಪ್ರಿಲ್ನಿಂದ ಆರಂಭಗೊಳ್ಳಲಿರುವ ಆರನೇ ಆವೃತ್ತಿಯ 'ಪೆಪ್ಸಿ ಐಪಿಎಲ್ ಪಂದ್ಯಾವಳಿ'ಗಾಗಿ ರಾಜಸ್ಥಾನ ರಾಯಲ್ಸ್ ತಂಡವನ್ನು ಅಣಿಗೊಳಿಸಲಿದ್ದಾರೆ.