

ನವದೆಹಲಿ: ಭಾರತೀಯ ಸೇನೆಯ ಹಿರಿಯ ಶೂಟರ್ ಹಾಗೂ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಸುಬೇದಾರ್ ವಿಜಯ್ ಕುಮಾರ್ ಅವರಿಗೆ ಸೇನೆಯವತಿಯಿಂದ ನೀಡಲಾಗುವ 'ಅತಿ ವಿಶಿಷ್ಟ ಸೇವಾ ಪದಕ' (ಎವಿಎಸ್ಎಂ) ವನ್ನು ಲಭಿಸಿದೆ. ಹಿರಿಯ ಶ್ರೇಣಿ ಪಡೆದ ಸೇನಾಧಿಕಾರಿಗಳಿಗಷ್ಟೇ ನೀಡಲಾಗುವ ಈ ಪದಕವನ್ನು ವಿಜಯ್ ಅವರಿಗೆ ನೀಡಿರುವುದು ವಿಶೇಷವಾಗಿದೆ.
ಇದುವರೆಗೂ 31 ಸೇನಾಧಿಕಾರಿಗಳು ಈ ಪದಕದ ಗೌರವ ಪಡೆದಿದ್ದು, ಈ ಪಟ್ಟಿಗೆ 32ನೇಯವರಾಗಿ ವಿಜಯ್ ಸೇರ್ಪಡೆಗೊಂಡಿದ್ದಾರೆ. ಕಳೆದ ವರ್ಷ ನಡೆದಿದ್ದ ಲಂಡನ್ ಒಲಿಂಪಿಕ್ಸ್ನಲ್ಲಿ ವಿಜಯ್ ಕುಮಾರ್, 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
ಭಾರತೀಯ ಸೇನೆಯ ಮಹಿಳಾ ಪರ್ವತಾರೋಹಿಗಳ ತಂಡಕ್ಕೆ 'ವಿಶಿಷ್ಟ ಸೇವಾ ಪದಕ' (ವಿಎಸ್ಎಂ) ನೀಡಿ ಗೌರವಿಸಲಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಈ ತಂಡ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿತ್ತು.