ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್ಎ ಪಂದ್ಯಾವಳಿಯ ಶನಿವಾರ ಪಂದ್ಯಗಳಲ್ಲಿ ಪೋಸ್ಟಲ್ ಹಾಗೂ ಎಡಿಇ ತಂಡದ ನಡುವೆ ನಡೆದ ಪಂದ್ಯದಲ್ಲಿ ಪೋಸ್ಟಲ್ ತಂಡ 1-0 ಅಂತರದಲ್ಲಿ ಜಯ ದಾಖಲಿಸಿತು. ಪೊಸ್ಟಲ್ ಪರ ವೆಂಕಟೇಶ್ ಅವರು ಪಂದ್ಯದ 67ನೇ ನಿಮಿಷದಲ್ಲಿ ಗೋಲು ದಾಖಲಿಸಿ, ತಮ್ಮ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಚ್ಐಎಲ್ ಹಾಗೂ ಕರ್ನಾಟಕ ಪೊಲೀಸ್ ತಂಡಗಳ ನಡುವೆ ನಡೆದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.