ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಜಯದಿಂದಾಗಿ ಎರಡು ಪಂದ್ಯಗಳ ಸರಣಿಯಲ್ಲಿ ಲಂಕಾ 1-0ಯ ಮುನ್ನಡೆ ಪಡೆದುಕೊಂಡಿದೆ.
ಟಾಸ್ ಗೆದ್ದಿದ್ದ ಆಸ್ಟ್ರೇಲಿಯಾ, ಮೊದಲು ಬ್ಯಾಟ್ ಮಾಡಿ, ಡೇವಿಡ್ ವಾರ್ನರ್ ಅವರ ಅಜೇಯ 90 ರನ್‌ಗಳ ನೆರವಿನಿಂದಾಗಿ ಆಸೀಸ್ ನಿಗದಿತ 20 ಓವರ್‌ಗಳಲ್ಲಿ 137 ರನ್ ಗಳಿಸಿತು. ಸಾಧಾರಣ ಮೊತ್ತಕ್ಕೆ ಆಸೀಸ್ ತಂಡವನ್ನು ನಿಯಂತ್ರಿಸಿದ ಲಂಕಾಕ್ಕೆ ಆರಂಭಿಕರಾದ ಪೆರೇರಾ ಹಾಗೂ ದಿಲ್ಷಾನ್ ಉತ್ತಮ ಆರಂಭ ನೀಡಿದರು. ಮ್ಯಾಥ್ಯೂಸ್ ಅವರ ಅಜೇಯ 35 ರನ್ ಹಾಗೂ ತಿರುಮಾನೆ ಅವರ 20 ರನ್‌ಗಳ ನೆರವಿನಿಂದಾಗಿ ಲಂಕಾ ಪಂದ್ಯದಲ್ಲಿ ಜಯ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 137/3 (20 ಓವರ್)
ವಾರ್ನರ್ ಅಜೇಯ 90 (62)
ವೋಗ್ಸ್ ಅಜೇಯ 11 (9)
ಬೌಲಿಂಗ್: ಕುಲಸೇಕರ 21/1, ಪೆರೇರಾ 29/1
ಶ್ರೀಲಂಕಾ: 139/5 (18.5 ಓವರ್)
ಮ್ಯಾಥ್ಯೂಸ್ ಅಜೇಯ 35 (27),
ಪೆರೇರಾ 33 (22)
ಬೌಲಿಂಗ್: ಮ್ಯಾಕ್ಸ್‌ವೆಲ್ 15/2,
ಡೊಹರ್ತಿ 21/2
ಪಂದ್ಯಶ್ರೇಷ್ಠ: ಡೇವಿಡ್ ವಾರ್ನರ್