ನವದೆಹಲಿ: ಪಾಲೇಸ್ತೇನ್ನ ರಾಷ್ಟ್ರೀಯ ಫುಟ್ಬಾಲ್ ತಂಡದ ವಿರುದ್ಧ ನಡೆಯಲಿರುವ ಸ್ನೇಹಪೂರ್ವ ಪಂದ್ಯಕ್ಕಾಗಿ ಭಾರತ ಫುಟ್ಬಾಲ್ ತಂಡವನ್ನು ಪ್ರಕಟಿಸಲಾಗಿದೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ತಂಡದ ತರಬೇತುದಾರ ವಿಮ್ ಕೊವರ್ಮನ್ ಅವರು, 23 ಆಟಗಾರರ ಭಾರತ ತಂಡವನ್ನು ಪ್ರಕಟಿಸಿದರು. ಫೆ. 6ರಂದು ಕೊಚ್ಚಿಯಲ್ಲಿ ಈ ಪಂದ್ಯ ನಡೆಯಲಿದೆ.
ಆಟಗಾರರು:
ಗೋಲ್ ಕೀಪರ್ಗಳು: ಸುಬ್ರತಾ ಪಾಲ್, ಸಂದೀಪ್ ನಂದಿ, ಕರಂಜಿತ್ ಸಿಂಗ್.
ಡಿಫೆಂಡರ್ಸ್: ನಿರ್ಮಲ್ ಚೆಟ್ರಿ, ಗೌರಮಂಗಿ ಸಿಂಗ್, ಶೌವಿಕ್ ಘೋಷ್, ಸಯ್ಯದ್ ರಹೀಮ್, ನಬಿ, ಗುರ್ಜಿಂದರ್ ಕುಮಾರ್, ರಾಜು ಗಾಯಕ್ವಾಡ್, ಡೆನ್ಜಿಲ್ ಫ್ರಾಂಕೋ.
ಮಿಡ್ ಫೀಲ್ಡರ್ಸ್: ಲೆನ್ರಿ ರಾಡ್ರಿಗ್ಸ್, ಲಾಲ್ಕಮಲ್ ಭೌಮಿಕ್, ಅರತಾ ಇಝುಮಿ, ಮೆಹತಾಬ್ ಹುಸೇನ್, ಫ್ರಾನ್ಸಿಸ್ ಫರ್ನಾಂಡಿಸ್, ಆಂತೋನಿ ಪರೇರಾ, ಆಲ್ವಿನ್ ಜಾರ್ಜ್, ಜೆವೆಲ್ ರಾಜಾ, ಕ್ಲಿಪೋರ್ಡ್ ಮಿರಾಂಡಾ, ವಿನೀತ್ ಸಿ,ಕೆ.
ಫಾರ್ವಡ್ಸ್: ಸುನಿಲ್ ಚೆಟ್ರಿ, ಮನದೀಪ್ ಸಿಂಗ್, ಸುಶೀಲ್ ಕುಮಾರ್ ಸಿಂಗ್.
ರೆಫ್ರಿ: ಎ. ರೋವನ್