ಮೆಲ್ಬರ್ನ್: ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಅವರು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮೇಲೆ ಗರಂ ಆಗಿದ್ದಾರೆ. ಪಂದ್ಯಾವಳಿಗಳಿಗಾಗಿ ಆಟಗಾರರ ಆಯ್ಕೆ, ಮಂಡಳಿ ತೆಗೆದುಕೊಳ್ಳುವ ನಿರ್ಧಾರಗಳು ಎಲ್ಲವೂ ವಿವೇಚನಾ ರಹಿತವಾದ ನಿರ್ಧಾರಗಳಾಗಿದ್ದು, ಇಂಥ ನಿರ್ಣಯಗಳನ್ನು ಕೈಗೊಳ್ಳುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಜನರ ನಿರೀಕ್ಷೆಗಳಿಗೆ ಮೋಸ ಮಾಡುತ್ತಿದೆ ಎಂದು ದೂರಿದ್ದಾರೆ.
ಅಸಲಿಗೆ, ಶೇನ್ ವಾರ್ನ್ಗೆ ಈ ಅಧಿಕಾರಿಗಳ ಮೇಲೆ ವೈಯಕ್ತಿಕವಾಗಿ ಯಾವ ಸಿಟ್ಟೂ ಇಲ್ಲ. ಆದರೆ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ)ಯಲ್ಲಿ ಜಾರಿಯಲ್ಲಿರುವ ರೊಟೇಶನ್ ಪದ್ಧತಿಯ ಬಗ್ಗೆ ಕಿಡಿನುಡಿಯಾಡಿರುವ ಅವರು, ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಅವ್ಯವಸ್ಥೆಯನ್ನು ಸಿಎ ಅಧಿಕಾರಿಗಳೇ ಮಾಡಿದ್ದಾರೆ. ಅವರು ಒಂದು ರೀತಿ ಜೋಕರ್ಗಳು ಎಂದು ವಾರ್ನ್ ಟೀಕಿಸಿದ್ದಾರೆ.