ಮೆಲ್ಬರ್ನ್: ಭಾರತದ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ತಂಡ ಪ್ರಕಟಿಸಿರುವ ಆಸ್ಟ್ರೇಲಿಯಾ, ತಂಡದಲ್ಲಿ ಇಬ್ಬರು ಹೊಸಬರಿಗೆ ಅವಕಾಶ ನೀಡಿದೆ. ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ಮೋಯಿಸೆಸ್ ಹೆನ್ರಿಕ್ಯೂಸ್ ಬರುವ ತಿಂಗಳು ಭಾರತದಲ್ಲಿ ನಡೆಯಲಿರುವ ಸರಣಿಗೆ ಆಸೀಸ್ ತಂಡದಲ್ಲಿ ಸ್ಥಾನ ಪಡೆದ ಆಟಗಾರರಾಗಿದ್ದಾರೆ. ನಥಾನ್ ಲೇಯಾನ್ ಅವರೊಂದಿಗೆ ಕ್ಸೇವಿಯರ್ ಡೋಹಾರ್ಟಿ ಮತ್ತು ಸ್ಟಿವೆನ್ ಸ್ಮಿತ್ ಸಹ ತಂಡದಲ್ಲಿದ್ದಾರೆ. ಸ್ಪಿನ್ಸ್ನೇಹಿ ಭಾರತದ ಪಿಚ್ಗಳಲ್ಲಿ ನಡೆಯಲಿರುವ ಸರಣಿಗೆ ಆಸೀಸ್ ತಂಡದಲ್ಲಿ ನಾಲ್ವರು ಸ್ಪಿನ್ನರ್ಗಳಿಗೆ ಮಣೆ ಹಾಕಿದೆ. ಜೇಮ್ಸ್ ಪ್ಯಾಟಿನ್ಸನ್, ಪೀಟರ್ ಸಿಡ್ಲ್, ಜಾಕ್ಸನ್ ಬರ್ಡ್. ಮಿಚೆಲ್ ಸ್ಟಾರ್ಕ್ ಹಾಗೂ ಮಿಚೆಲ್ ಜಾನ್ಸ್ನ್ ತಂಡದಲ್ಲಿ ಸ್ಥಾನ ಪಡೆದ ವೇಗದ ಬೌಲರ್ಗಳಾಗಿದ್ದಾರೆ.
ತಂಡ: ಮೈಕೆಲ್ ಕ್ಲಾರ್ಕ್ (ನಾಯಕ), ಇಡಿ ಕೌವಾನ್, ಡೇವಿಡ್ ವಾರ್ನರ್, ಫಿಲ್ ಹ್ಯೂಘೆಸ್, ಶೇನ್ ವ್ಯಾಟ್ಸನ್, ಉಸ್ಮಾನ್ ಖವಾಜಾ, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಗ್ಲೆನ್ ಮ್ಯಾಕ್ಸ್ವೆಲ್, ಮೋಯಿಸೆಸ್ ಹೆನ್ರಿಕ್, ಮಿಚೆಲ್ ಜಾನ್ಸನ್, ಪೀಟರ್ ಡೋಹಾರ್ಟಿ, ಜಾಕ್ಸನ್ ಬರ್ಡ್.