ಕಟಕ್: ಪಾಕಿಸ್ತಾನ ತಂಡ, ಶುಕ್ರವಾರ ವಿಶ್ವಕಪ್‌ನ 'ಗ್ರೂಪ್ ಬಿ' ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಪಾಕಿಸ್ತಾನ ತಂಡವನ್ನು ಸರಾ ಮಿರ್ ಅವರು ಮುನ್ನಡೆಸಲಿದ್ದಾರೆ. ಅವರೊಂದಿಗೆ ಆಲ್ರೌಂಡರ್ ಹಾಗೂ ಉಪನಾಯಕಿ ಬಿಸ್ಮಾ ಮಾರೂಫ್, ಬೌಲರ್‌ಗಳಾದ ನೀದಾ ದಾರ್ ಹಾಗೂ ಡಯಾನಾ ಬೇಕ್ ಇದ್ದಾರೆ.
ಅತ್ತ, 2012 ಮಹಿಳೆಯರ ಟಿ20 ಚಾಂಪಿಯನ್‌ಷಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿರುವ ಆಸ್ಟ್ರೇಲಿಯಾ, ಜೂಡಿ ಫೀಲ್ಡ್ಸ್ ನೇತೃತ್ವದಲ್ಲಿ ಲೀಸಾ ಸ್ಟಾಲೇಕರ್, ಅಲೆಕ್ಸ್ ಬ್ಲಾಕ್‌ವೆಲ್ ಅವರನ್ನು ಒಳಗೊಂಡಿದೆ.