ವಿಜಯ ಬ್ಯಾಂಕ್‌ಗೆ ಸೋಲು

Updated on: 

ಬೆಂಗಳೂರು: ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೆಡರೇಷನ್ ಕಪ್ ಬಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಕರ್ನಾಟಕದ ವಿಜಯ ಬ್ಯಾಂಕ್ ಪರಾಜಯ ಹೊಂದಿತು.
ತೀವ್ರ ಪೈಪೋಟಿಯಿಂದ ನಡೆದ ಪಂದ್ಯದಲ್ಲಿ ವಿಜಯ ಬ್ಯಾಂಕ್ ತಂಡ ಐಎಎಫ್ ವಿರುದ್ಧ ಸೋಲನುಭವಿಸಿತು. ಉಭಯ ತಂಡಗಳ ಆಟಗಾರರು ಬಿರುಸಿನ ಹೋರಾಟ ನಡೆಸಿದರು.
ಆದರೆ, ಪಂದ್ಯದಲ್ಲಿ ಅಂತಿಮವಾಗಿ ಐಎಎಫ್ 85-76 ಅಂಕಗಳಿಂದ ವಿಜಯ ಸಾಧಿಸಿತು.
ಮೊದಲ ಪಂದ್ಯದಲ್ಲಿ ಕೊಚ್ಚಿ ಕಸ್ಟಮ್ಸ್ ಮತ್ತು ಸೆಂಟ್ರಲ್ ಎಕ್ಸ್‌ಸೈಜ್ ತಂಡ ಡೆಲ್ಲಿಯ ಕ್ಯಾಪ್ಟನ್ಸ್ ಕ್ಲಬ್ ವಿರುದ್ಧ 88-63 ಅಂಕಗಳಿಂದ ಜಯ ಸಾಧಿಸಿತು.
ಇನ್ನು ಎರಡನೇ ಪಂದ್ಯದಲ್ಲಿ ಚೆನ್ನೈನ ಐಒಬಿ ದಕ್ಷಿಣ ಕೇಂದ್ರ ರೇಲ್ವೆ ತಂಡವನ್ನು 80-45 ಅಂಕಗಳ ಅಂತರದಿಂದ ಸೋಲಿಸಿತು.
ಮೂರನೇ ಪಂದ್ಯದಲ್ಲಿ ಒಎನ್‌ಜಿಸಿ ತಂಡ ಹರ್ಯಾಣವನ್ನು 96-59 ಅಂಕಗಳ ಅಂತರದಿಂದ ಪರಾಭವಗೊಳಿಸಿತು. ದಿನದ ಪುರಷರ ವಿಭಾಗದ 4ನೇ ಪಂದ್ಯದಲ್ಲಿ ಪಂಜಾಬ್ ಪೊಲೀಸ್ ತಂಡ ಡೆಲ್ಲಿ ಕ್ಯಾಪ್ಟನ್ ಕ್ಲಬ್ ತಂಡವನ್ನು 74-53 ಅಂಕಗಳಿಂದ ಪರಾಭವಗೊಳಿಸಿತು.
ಮಹಿಳೆಯರ ವಿಭಾಗದ ಪಂದ್ಯದಲ್ಲಿ ಸೌಥ್ ಈಸ್ಟ್ ಸೆಂಟ್ರಲ್ ರೇಲ್ವೆ ತಂಡ ಕೇರಳದ ವಿರುದ್ಧ 79-68 ಅಂಕಗಳ ಅಂತರದಿಂದ ಜಯ ಕಂಡುಕೊಂಡಿತು.
ಇನ್ನೊಂದು ಪಂದ್ಯದಲ್ಲಿ ತಮಿಳುನಾಡು ತಂಡ ಚತ್ತೀಸ್‌ಗಡ ತಂಡವನ್ನು 64-57 ಅಂಕಗಳ ಅಂತರದಿಂದ ಮಣಿಸಿತು.
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ನಡುವೆ ನಡೆದ ಪಂದ್ಯದಲ್ಲಿ ಆಂಧ್ರಪ್ರದೇಶ 89-41 ಅಂಕಗಳಿಂದ ಮೇಲುಗೈ ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com