ಕ್ರೀಡೆ

ಧೋನಿ ಬ್ಯಾಟಿಂಗ್ ನಾಯಕತ್ವದ ಮೇಲೆ ಪರಿಣಾಮ: ಅಶ್ವಿನ್

ಧೋನಿ ಬ್ಯಾಟಿಂಗ್ ನಾಯಕತ್ವದ ಮೇಲೆ ಪರಿಣಾಮ: ಅಶ್ವಿನ್
Published On :

ಹೈದರಾಬಾದ್: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಧೋನಿಯ ಬಗ್ಗೆ ತಂಡದ ಸಹ ಆಟಗಾರ ಮೆಚ್ಚುಗೆ ವ್ಯಕ್ತಪಡಿಸಿದ್ದು, ಧೋನಿಯ ಅದ್ಭುತ ಬ್ಯಾಟಿಂಗ್ ಫಾರ್ಮ್ ಆತನ ನಾಯಕತ್ವದ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಸುಮಾರು ಎರಡು ಸೆಷನ್‌ಗಳಲ್ಲಿ ದ್ವಿಶತಕ ದಾಖಲಿಸಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಧೋನಿ, ಪಂದ್ಯದ ನಂತರ ಮತ್ತೇ ಈ ರೀತಿಯ ಪ್ರದರ್ಶನ ನೀಡುವ ಬಗ್ಗೆ ಖಚಿತವಿಲ್ಲದಿರುವುದಾಗಿ ತಿಳಿಸಿದ್ದಾರೆ. ಧೋನಿ ನಾಯಕನಾಗಿ ಸಂಪೂರ್ಣ ಪ್ರಮಾಣದಲ್ಲಿ ಹೊಂದುಕೊಂಡಿದ್ದು, ಆತನ ಅದ್ಭುತ ಪ್ರದರ್ಶನ ಫೀಲ್ಡಿಂಗ್ ವೇಳೆ ಕ್ಷೇತ್ರರಕ್ಷಣೆ ಹಾಗೂ ಬೌಲಿಂಗ್ ಬದಲಾಯಿಸುವ ನಾಯಕತ್ವದ ನಿರ್ಧಾರದ ಮೇಲೆ ಹೆಚ್ಚು ಪರಿಣಾಮ ಬೀರಿತ್ತು. ಧೋನಿಯ ಆ ಪ್ರದರ್ಶನದ ನಂತರ ನಾವು ಪಂದ್ಯದಲ್ಲಿ ಹಿಂತಿರುಗಿ ನೋಡಲಿಲ್ಲ, ಈ ರೀತಿಯಾದ ಇನಿಂಗ್ಸ್ ಆಡಿದರೆ ಯಾವುದೇ ಎದುರಾಳಿ ತಂಡ ತಮ್ಮ ಮನಸ್ಥೈರ್ಯ ಕಳೆದುಕೊಳ್ಳಲಿದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟರು.

'ಡೊಹಾರ್ಟಿ  ಟೆಸ್ಟ್ ಬೌಲರ್ ಅಲ್ಲ'
ಮೆಲ್ಬರ್ನ್:
ಭಾರತ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಕ್ಸೆವಿಯರ್ ಡೊಹಾರ್ಟಿಯನ್ನು ತಂಡದಲ್ಲಿ ಆಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಡೊಹಾರ್ಟಿ ಟೆಸ್ಟ್ ಬೌಲರ್ ಅಲ್ಲ ಎಂದು ಆಸೀಸ್‌ನ ಸ್ಪಿನ್ ಸಲಹೆಗಾರ ಸ್ಟುವರ್ಟ್ ಮ್ಯಾಕ್‌ಗಿಲ್ ತಿಳಿಸಿದ್ದಾರೆ.
  ಡೊಹಾರ್ಟಿ ಮೂಲತಃ ಸೀಮಿತ ಓವರ್ ಪಂದ್ಯಗಳಲ್ಲಿ ಉತ್ತಮ ಬೌಲರ್ ಆಗಿದ್ದು, ಅವರು ಟೆಸ್ಟ್ ಬೌಲರ್ ಅಲ್ಲ. ಹೀಗಾಗಿ ಅವರನ್ನು ಎರಡನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಸುವುದರಿಂದ ಪ್ರವಾಸಿ ತಂಡ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿದ್ದು, ಇದು ಉತ್ತಮ ನಿರ್ಧಾರವಲ್ಲ ಎಂದು ಮ್ಯಾಕ್‌ಗಿಲ್ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.