ಗೆಲುವಿನ ಉತ್ಸಾಹದಲ್ಲಿ ಭಾರತ

ಯಗೋನ್: ಅತಿಯಾದ ಆತ್ಮವಿಶ್ವಾಸದೊಂದಿಗೆ ನೀರಸ ಪ್ರದರ್ಶನ ನೀಡುತ್ತಿರುವ ಭಾರತ ಫುಟ್ಬಾಲ್ ತಂಡ, ಎಎಫ್‌ಸಿ ಚಾಲೆಂಜ್ ಕಪ್ ಅರ್ಹತಾ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಶನಿವಾರ ಚೀನಾ ತೈಪೇಯನ್ನು ಎದುರಿಸಲಿದೆ.
ಇತ್ತೀಚೆಗೆ ಫೆಬ್ರವರಿ 6ರಂದು ಕೇರಳದಲ್ಲಿ ಪ್ಯಾಲೆಸ್ತೀನ್ ವಿರುದ್ಧ ನಡೆದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಭಾರತ 2-4 ಗೋಲುಗಳ ಅಂತರದಿಂದ ಕೈಚೆಲ್ಲಿತ್ತು.
ಪ್ಯಾಲೆಸ್ತೀನ್ ವಿರುದ್ಧ ಗೋಲು ದಾಖಲಿಸಿದ್ದ ಸೈಯಿದ್ ರಹೀಮ್ ನಬಿ ಮತ್ತು ಕ್ಲಿಫಾರ್ಡ್ ಮಿರಾಂಡಾ ಅವರು ಚೀನಾ ತೈಪೇ ವಿರುದ್ಧ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಗಳಿವೆ. ಆದರೆ, ನಾಯಕ ಸುನಿಲ್ ಚೆಟ್ರಿ ಮೇಲೂ ತಂಡ ಹೆಚ್ಚಿನ ಅವಲಂಬನೆಯಾಗಲಿದೆ.
ಸ್ಪೋರ್ಟಿಂಗ್ ಲಿಸ್ಬನ್ ಕ್ಲಬ್ ಪರ ಆಡಲು ಹೆಚ್ಚಿನ ಸಮಯಾವಕಾಶ ಸಿಗದಿದ್ದರೂ, ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಚೆಟ್ರಿ ಸದಾ ಉತ್ತಮ ಪ್ರದರ್ಶನವನ್ನೇ ನೀಡುತ್ತಾರೆ. ಹೀಗಾಗಿ ಭಾರತ ಪಾಳಯದಲ್ಲಿ ಚೆಟ್ರಿ ಮೇಲೆ ನಿರೀಕ್ಷೆಗಳು ಹೆಚ್ಚಿವೆ.
ರ್ಯಾಂಕಿಂಗ್‌ನಲ್ಲಿ ಉಭಯ ತಂಡಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಆದರೆ, ಕಳೆದ ವರ್ಷ ಇದೇ ಪಂದ್ಯಾವಳಿಯಲ್ಲಿ ಎದುರಾಳಿಯನ್ನು ಭಾರತ 3-0 ಅಂತರದಿಂದ ಪರಾಭವಗೊಳಿಸಿತ್ತು. ಭಾರತ ರ್ಯಾಂಕಿಂಗ್‌ನಲ್ಲಿ 167ನೇ ಸ್ಥಾನದಲ್ಲಿದ್ದರೆ, ಚೀನಾ ತೈಪೇ ಭಾರತಕ್ಕಿಂತ ನಾಲ್ಕು ಸ್ಥಾನ ಹಿಂದಿದ್ದು, 171ನೇ ಸ್ಥಾನದಲ್ಲಿದೆ.
20 ರಾಷ್ಟ್ರಗಳು ಭಾಗವಹಿಸಿರುವ ಪಂದ್ಯಾವಳಿಯಲ್ಲಿ, 5 ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆದ ಮತ್ತು 2 ಶ್ರೇಷ್ಠ ತಂಡಗಳು 2014ರಲ್ಲಿ ಮಾಲ್ಡೀವ್ಸ್‌ನಲ್ಲಿ ನಡೆಯಲಿರುವ ಎಎಫ್‌ಸಿ ಚಾಲೆಂಜ್ ಕಪ್‌ನಲ್ಲಿ ಭಾಗವಹಿಸಲಿವೆ. ಮಾಲ್ಡೀವ್ಸ್ ಪಂದ್ಯಾವಳಿಯಲ್ಲಿ ಗೆಲ್ಲುವ ತಂಡ 2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್ ಕಪ್‌ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯಾವಳಿಗೆ ಈಗಾಗಲೇ ಉತ್ತರ ಕೊರಿಯಾ ಅರ್ಹತೆ ಪಡೆದುಕೊಂಡಿದೆ.
ಚೆಟ್ರಿ ಜತೆ ವಿಮ್ ಕೋವರಮನ್ಸ್ ತಂಡದಲ್ಲಿ ಅಲ್ವೇನ್ ಜಾರ್ಜ್, 2010ರ ಆವೃತ್ತಿಯ ಸ್ಟಾರ್ ಆಟಗಾರ ಜೆಜೆ ಲಾಲ್ಪೆಖಾಲೂ ಹಾಗೂ ರಾಬಿನ್ ಸಿಂಗ್ ಉತ್ತಮ ಸ್ಟ್ರೈಕರ್‌ಗಳಾಗಿದ್ದಾರೆ.
ಡೆಂಜಿಲ್ ಫ್ರಾಂಕೋ, ಗೌರಿಮಾಂಗಿ ಸಿಂಗ್, ಶೌವಿಕ್ ಘೋಷ್ ಮತ್ತು ಗುರ್ಜಿಂದರ್ ಸಿಂಗ್ ಅವರು ಭಾರತ ರಕ್ಷಣಾ ವಿಭಾಗವನ್ನು ನಿರ್ವಹಿಸುವ ಸಾಧ್ಯತೆಗಳಿವೆ. ನಬಿ, ಮೆಹ್ತಾಬ್ ಹುಸೇನ್, ಮಿರಾಂಡಾ ಅವರೊಂದಿಗೆ ಲೆನ್ನಿ ರೋಡ್ರಿಗಸ್ ಅವರು ಮಿಡ್‌ಫಿಲ್ಡಿಂಗ್‌ನಲ್ಲಿ ತಮ್ಮ ಹೋರಾಟ ನಡೆಸಲಿದ್ದಾರೆ. ಚೆಟ್ರಿ ಅವರು ಪೊರ್ಚುಗಲ್‌ನ ಸ್ಪೋರ್ಟಿಂಗ್ ಲಿಸ್ಬಾನ್ ಕ್ಲಬ್ ಪರ ಆಡುವುದನ್ನು, ಸಧ್ಯಕ್ಕೆ ನಾಲ್ಕು ತಿಂಗಳ ಕಾಲ ನಿಲ್ಲಿಸಿದ್ದಾರೆ. 'ಪ್ಯಾಲೆಸ್ತೀನ್ ವಿರುದ್ಧ ಮೊದಲಾರ್ಧ ಪಂದ್ಯದಲ್ಲಿ ತಕ್ಕ ಹೋರಾಟ ನಡೆಸಿದ್ದೆವು. ಆದರೆ, ದ್ವಿತೀಯಾರ್ಧದಲ್ಲಿ ಎದುರಾಳಿ ತಂಡವನ್ನು ನಿಯಂತ್ರಿಸಲು ನಮ್ಮಿಂದ ಸಾಧ್ಯವಾಗಲಿಲ್ಲ. ಇಂತಹ ತಪ್ಪು ಮತ್ತೆ ಮರುಕಳಿಸದಿರುವಂತೆ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ನಾವು ಕಠಿಣ ಪರಿಶ್ರಮಪಡುತ್ತಿದ್ದೇವೆ' ಎಂದು ಪ್ಯಾಲೆಸ್ತೀನ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲನುಭವಿಸಿದ ಬಗ್ಗೆ ಚೆಟ್ರಿ ಪ್ರತಿಕ್ರಿಯಿಸಿದರು.
'ನಾವು ಪ್ರತಿಯೊಂದು ಪಂದ್ಯದಲ್ಲಿ ಗೆಲ್ಲಬೇಕು ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿರುತ್ತದೆ. ಪಂದ್ಯದಲ್ಲಿ ಸೋತಿದ್ದಕ್ಕೆ ಅವರನ್ನು ನಿಂದಿಸಬಾರದು' ಎಂದು ಪಂದ್ಯದಲ್ಲಿ ಸೋಲನುಭವಿಸಿದ್ದಕ್ಕೆ ಅಭಿಮಾನಿಗಳು ಮೈದಾನದಲ್ಲಿ ಮಾಡಿದ ಕಿರಿಕಿರಿ ಕಾರಣವಾಯಿತೇ ಎಂಬ ಪ್ರಶ್ನೆಗೆ ಚೆಟ್ರಿ ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


