ಕ್ರೀಡೆ

ಯುವ ನೀತಿಗಾಗಿ ಜಿತೇಂದ್ರ ಸಭೆ

Published On :

ನವದೆಹಲಿ: 2012ರ ರಾಷ್ಟ್ರೀಯ ಯುವ ನೀತಿಗೆ ಸಂಬಂಧಿಸಿದಂತೆ ಯುವಜನ ಹಾಗೂ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ತಮ್ಮ ನೇತೃತ್ವದಲ್ಲಿ ಶುಕ್ರವಾರ ಸಲಹಾ ಸಮಿತಿಯ ಸಭೆ ನಡೆಸಿದರು.
ಈ ಸಭೆ ಉದ್ದೇಶಿಸಿ ಮಾತನಾಡಿದ ಜಿತೇಂದ್ರ ಸಿಂಗ್, ಈ ವರ್ಷ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ರಾಷ್ಟ್ರೀಯ ಯುವ ನೀತಿ ಹೆಚ್ಚು ಮಹತ್ವ ಪಡೆದುಕೊಳ್ಳಲಿದೆ.
ರಾಷ್ಟ್ರೀಯ ಯುವ ನೀತಿಯ ಪ್ರಮುಖ ಗುರಿ ಎಂದರೆ ದೇಶದ ಯುವ ಜನತೆಗೆ ಶಕ್ತಿ ನೀಡಿ, ಅವರ ಸರ್ವಾಂಗೀಣ ಅಭಿವೃದ್ಧಿಗೆ ಸಹಾಯ ಮಾಡುವುದು. ಈ ಮೂಲಕ ಯುವಕರು ತಮ್ಮ ಸಾಮರ್ಥ್ಯದ ಆಧಾರದ ಮೇಲೆ ಬೆಳವಣಿಗೆ ಹೊಂದಿ ಅವರ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಸಹಕರಿಸುವಂತೆ ಮಾಡುವುದು ಎಂದು ಸಚಿವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಯುವ ಜನತೆಯ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ 2013-14ನೇ ವರ್ಷವನ್ನು ಯುವಕರ ಕೌಶಲ್ಯ ಅಭಿವೃದ್ಧಿ ವರ್ಷ ಎಂದು ಘೋಷಿಸಲು ಸಚಿವಾಲಯ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಯುವ ನೀತಿಯಲ್ಲಿನ ವಯೋವುತಿಯನ್ನು ಯುನೈಟೆಡ್ ನೇಷನ್ಸ್, ಕಾಮನ್‌ವೆಲ್ತ್‌ನ ವಯೋವುತಿ ಆಧಾರದಂತೆ 16ರಿಂದ 30ರ ವಯೋವುತಿಗೆ ನಿಗದಿಪಡಿಸಲಾಗುವುದು. ಹಾಗೆಯೇ ಇದರಲ್ಲಿ ವಿದ್ಯಾರ್ಥಿ, ಬುಡಕಟ್ಟು, ನಗರ, ಗ್ರಾಮೀಣ, ಷೋಶಣೆಗೊಳಗಾಗಿರುವ, ಶಾಲೆಯಿಂದ ವಂಚಿತರಾದ, ಕಳಂಕಿತ ಯುವಕರಿಗೆ  ಹೆಚ್ಚಿನ ಆದ್ಯತೆನೀಡಲಾಗುವುದು.
ಯವತಿಯರಿಗೆ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಗುಂಪುಗಳಿಗೆ ಈ ನೀತಿಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು.
ಆರೋಗ್ಯ, ಶಿಕ್ಷಣ, ಸೌಕರ್ಯ, ಭಾಗವಹಿಸುವಿಕೆ, ಅಭಿವೃದ್ಧಿಯ ಕ್ಷೇತ್ರಗಳನ್ನು ಮಾಪನವಾಗಿಸಿಕೊಂಡು ಯುವ ನೀತಿಯ ಲಕ್ಷಣಗಳನ್ನು ಅಳೆಯಬಹುದಾಗಿದೆ.
ಈ ಯುವ ನೀತಿಯು ಕೇಂದ್ರ ಹಾಗೂ ರಾಜ್ಯದ ನಡುವೆ ಸಹಕಾರವನ್ನು ಸ್ಥಾಪಿಸುವಲ್ಲಿ ಸಹಾಯ ಮಾಡಲಿದೆ. ಪ್ರಸ್ತುತ ರಾಜ್ಯ ಯುವ ನೀತಿಯು ರಾಷ್ಟ್ರೀಯ ಯುವನೀತಿಯ ಹೊಂದಾಣಿಕೆ ಮಾಡಿಕೊಂಡುಹಂತ ಹಂತವಾಗಿ ಬೆಳೆಯುವ ಅವಶ್ಯಕತೆ ಇದೆ. ರಾಷ್ಟ್ರೀಯ ಯುವ ನೀತಿಯನ್ನು ಪ್ರತಿ ಜನಗಣತಿಯ ನಂತರ ಪುನರ್‌ವಿಮರ್ಶೆ ಮಾಡಲಾಗುವುದು ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.