ಕ್ರೀಡೆ

ಜೂರಿಚ್ ಚೆಸ್: ಎರಡನೇ ಸ್ಥಾನ ಪಡೆದ ವಿಶ್ವನಾಥನ್ ಆನಂದ್

ಜೂರಿಚ್ ಚೆಸ್: ಎರಡನೇ ಸ್ಥಾನ ಪಡೆದ ವಿಶ್ವನಾಥನ್ ಆನಂದ್
Published On :

ಜೂರಿಚ್ (ಸ್ವಿಜರ್ಲೆಂಡ್): ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ಜೂರಿಚ್ ಚೆಸ್ ಚಾಲೆಂಜ್ ಚಾಂಪಿಯನ್‌ಷಿಪ್‌ನ ಅಂತಿಮ ಸುತ್ತಿನಲ್ಲಿ ರಷ್ಯಾದ ಲಾಡಿಮಿರ್ ಕ್ರಾಮ್ನಿಕ್ ಅವರನ್ನು ಸೋಲಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದರು. ನಾಲ್ಕನೇ ಸುತ್ತಿನಲ್ಲಿ ಇಟಲಿಯ ಫ್ಯಾಬಿಯಾನೋ ಕರ್ವಾನಾ ವಿರುದ್ಧ ಸೋಲನುಭವಿಸಿದ ನಂತರ, ಭಾರತದ ಆನಂದ್ ಅವರು ಪಂದ್ಯಾವಳಿಯಲ್ಲಿ ತೀವ್ರ ಒತ್ತಡದಲ್ಲಿ ಸಿಲುಕಿದ್ದರು. ಆದರೆ, ಅಂತಿಮ ಸುತ್ತಿನಲ್ಲಿ ಕ್ರಾಮ್ನಿಕ್ ವಿರುದ್ಧ ಜಯ ಸಾಧಿಸುವ ಮೂಲಕ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಫ್ಯಾಬಿಯಾನೋ ಕರ್ವಾನಾ ಅಂತಿಮ ಸುತ್ತಿನಲ್ಲಿ ಇಸ್ರೇಲ್‌ನ ಬೋರೀಸ್ ಜೆಲ್ಫೆಂಡ್ ವಿರುದ್ಧ ಆಕರ್ಷಕ ಜಯ ದಾಖಲಿಸುವ ಮೂಲಕ, ಅಗ್ರ ಸ್ಥಾನ ಪಡೆದುಕೊಂಡರು. ನಾಲ್ವರು ಆಟಗಾರರು ಭಾಗವಹಿಸಿದ್ದ ಡಬಲ್ ರೌಂಡ್ ರಾಬಿನ್ ಪಂದ್ಯಾವಳಿಯಲ್ಲಿ ಇಟಲಿಯ ಆಟಗಾರ 6 ಆಂಕ ಗಳಿಸುವ ಸಾಧ್ಯತೆ ಇತ್ತು. ಆದರೆ, ನಾಲ್ಕು ಅಂಕಳೊಂದಿಗೆ ಪಂದ್ಯಾವಳಿಯನ್ನು ಮುಕ್ತಾಯಗೊಳಿಸಿದರು. ಆನಂದ್ ಒಂದು ಸೋಲು ಮತ್ತು ನಾಲ್ಕು ಪಂದ್ಯಗಳಲ್ಲಿ ಡ್ರಾ ಹಾಗೂ ಒಂದು ಪಂದ್ಯದಲ್ಲಿ ಜಯ ಸಾಧಿಸಿ ಮೂರು ಅಂಕಗಳಿಗೆ ತಮ್ಮ ಹೋರಾಟ ಅಂತ್ಯಗೊಳಿಸಿದರು. ಪಂದ್ಯಾವಳಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಕರ್ವಾನಾ ಅವರು ವಿಶ್ವ ರ್ಯಾಂಕಿಂಗ್‌ನಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.