ಕ್ರೀಡೆ

ಮೆಕ್ಸಿಕನ್ ಓಪನ್: ರಫೆಲ್ ನಡಾಲ್ ಮುಡಿಗೆ ಪ್ರಶಸ್ತಿ

ಮೆಕ್ಸಿಕನ್ ಓಪನ್: ರಫೆಲ್ ನಡಾಲ್ ಮುಡಿಗೆ ಪ್ರಶಸ್ತಿ
Published On :

ಮೆಕ್ಸಿಕೊ: ಹಾಲಿ ಚಾಂಪಿಯನ್ ಡೇವಿಡ್ ಫೆರರ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ರಫೆಲ್ ನಡಾಲ್, ಇಲ್ಲಿ ನಡೆದ ಮೆಕ್ಸಿಕನ್ ಓಪನ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಹಾಕಿಕೊಂಡರು. ಈ ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ನಡಾಲ್, ಫೆರರ್ ಅವರನ್ನು 6-0, 6-2 ಅಂತರದಲ್ಲಿ ಮಣಿಸಿ 2ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪಂದ್ಯದಲ್ಲಿ ಕೈಚೆಲ್ಲಿದ ಫೆರರ್, ಈ ಬಾರಿಯೂ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಸತತ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದು, ಥಾಮಸ್ ಮಸ್ಟರ್ ಜತೆ ದಾಖಲೆ ಹಂಚಿಕೊಳ್ಳುವ ಕನಸು ಭಗ್ನಗೊಂಡಿದೆ.
ಕಳೆದ ತಿಂಗಳು ಗಾಯದ ಸಮಸ್ಯೆಯಿಂದ ವಾಪಸ್ಸಾದ ನಂತರ ಆಡಿದ 3 ಪಂದ್ಯಾವಳಿಗಳಲ್ಲಿ ಎರಡರಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಮಹಿಳಾ ವಿಭಾಗದಲ್ಲಿ ವಿಶ್ವದ 8ನೇ ರ್ಯಾಂಕಿಂಗ್ ಆಟಗಾರ್ತಿ ಸಾರಾ ಎರ್ರಾನಿ ಈ ಬಾರಿಯೂ ಪ್ರಶಸ್ತಿಯನ್ನು ತಮ್ಮಲೇ ಉಳಿಸಿಕೊಂಡಿದ್ದಾರೆ. ಸಾರಾ ತಮ್ಮ ಎದುರಾಳಿ 2ನೇ ಶ್ರೇಯಾಂಕಿತೆ ಕಾರ್ಲಾ ಸೌರೆಜ್ ನವಾರೊ ಅವರನ್ನು 6-0, 6-4 ಸೆಟ್‌ಗಳ ಅಂತರದಲ್ಲಿ ಮಣಿಸಿ ಗೆಲುವಿನ ನಗೆ ಬೀರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.