ಫುಟ್ಬಾಲ್: ಸೌಥ್ ಯುನೈಟೆಡ್ಗೆ ಸೋಲು
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯ ಬುಧವಾರದ ಪಂದ್ಯದಲ್ಲಿ ಸ್ಥಳೀಯ ಸೌಥ್ ಯುನೈಟೆಡ್ ತಂಡ ಗೋವಾದ ವಾಸ್ಕೋ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 0-1 ಗೋಲು ಅಂತರದಿಂದ ಕೈಚೆಲ್ಲಿತು. ಗೋವಾ ತಂಡದ ಪರ ಪಂದ್ಯದ 78ನೇ ನಿಮಿಷದಲ್ಲಿ ಬಾಬಾ ತುಂಡೆ ಗೋಲು ದಾಖಲಿಸಿದರು. ಆದರೆ, ಸೌಥ್ ಯುನೈಟೆಡ್ ತಂಡಕ್ಕೆ ಒಂದು ಗೋಲು ಗಳಿಸಲೂ ಸಾಧ್ಯವಾಗಲಿಲ್ಲ. ಗುರುವಾರ ಕೋಲ್ಕತಾದ ಸೌದರ್ನ್ ಸಮಿತಿ ಮತ್ತು ಕೇರಳ ಈಗಲ್ ಎಫ್ಸಿ ನಡುವೆ ಮೊದಲ ಪಂದ್ಯ ನಡೆದರೆ, ಕಾಲಿಘಾಟ್ ಮಿಲಾನ್ ಮತ್ತು ಡೋಡ್ಸಾಲ್ ಸ್ಪೋರ್ಟ್ಸ್ ನಡುವೆ 2ನೇ ಪಂದ್ಯ ನಡೆಯಲಿದೆ.
ಕೆಜಿಎಫ್ಗೆ ಜಯ: ಬೋಪಾಲ್ನಲ್ಲಿ ನಡೆಯುತ್ತಿರುವ ಐ- ಲೀಗ್ 2ನೇ ಡಿವಿಷನ್ನ ಎ ಗುಂಪಿನ ಬುಧವಾರದ ಪಂದ್ಯದಲ್ಲಿ ರಾಜ್ಯದ ಕೆಜಿಎಫ್ ಅಕಾಡೆಮಿ ತಂಡ, ಜಾರ್ಜ್ ಟೆಲೆಗ್ರಾಫ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿತು.
ಮಾಜಿ ಫುಟ್ಬಾಲ್ ಆಟಗಾರ ನಿಧನ
ಬೆಂಗಳೂರು: ರಾಜ್ಯದ ಮಾಜಿ ಫುಟ್ಬಾಲ್ ಆಟಗಾರ ಎಂ.ಕೆ. ರಫಿಕ್ ಮಂಗಳವಾರ ನಿಧನರಾದ್ದಾರೆ. ರಫಿಕ್ ಕರ್ನಾಟಕ ಏಕೀಕರಣಕ್ಕೂ ಮುನ್ನ ಇದ್ದ, ಮೈಸೂರ್ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದರು. ಮೃತರ ಅಂತ್ಯಕ್ರಿಯೆಯನ್ನು ಬುಧವಾರ ನೆರವೇರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

