ಕ್ರೀಡೆ

ಸೆಮಿಫೈನಲ್‌ಗೆ ಅಮ್ರಿತ್‌ಪ್ರೀತ್

Published On :

ನವದೆಹಲಿ: ಫಿಲಿಪೈನ್ಸ್‌ನ ಸುಬಿಕ್ ಬೇನಲ್ಲಿ ನಡೆಯುತ್ತಿರುವ ಎಎಸ್‌ಬಿಸಿ ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಭಾರತದ ಬಾಕ್ಸರ್ ಅಮ್ರಿತ್‌ಪ್ರೀತ್ ಸಿಂಗ್, 91 ಕೆ.ಜಿ ವಿಭಾಗದಲ್ಲಿ ಸೆಮಿಫೈನಲ್ ಹಂತಕ್ಕೆ ತಲುಪಿದ್ದಾರೆ.

ತಮ್ಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೊರ್ಡನ್‌ನ ಯೂಸೂಫ್ ಅಲ್ ನುಬಾನಿ ಅವರನ್ನು 16-9 ಅಂತರದಲ್ಲಿ ಸೋಲಿಸಿದ ಅಮ್ರಿತ್‌ಪ್ರೀತ್ ಸಿಂಗ್ ಪಂದ್ಯಾವಳಿಯ ನಾಲ್ಕರ ಘಟ್ಟಕ್ಕೆ ತಲುಪಿದ್ದಾರೆ. 2012ರ ಕಿರಿಯ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಅಮ್ರಿತ್‌ಪ್ರೀತ್, ಕಳೆದ ವರ್ಷ ಅರ್ಮೇನಿಯಾದಲ್ಲಿ ನಡೆದ ಎಐಬಿಎ ಯೂತ್ ವರ್ಲ್ಡ್ ಚಾಂಪಿಯನ್‌ಷಿಪ್‌ನ ಆರಂಭದಲ್ಲೇ ಸೋಲನುಭವಿಸಿದ್ದರು.

ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಧಾನ ಗತಿಯ ಆರಂಭ ಪಡೆದ ಅಮ್ರಿತ್‌ಪ್ರೀತ್, ನಂತರ ಆಕ್ರಮಣಕಾರಿ ಆಟಕ್ಕೆ ಮುಂದಾದರು. ಅಂತಿಮವಾಗಿ 16-9 ಅಂಕಗಳಿಂದ ಜಯ ಸಾಧಿಸಿದ ಅಮ್ರಿತ್‌ಪ್ರೀತ್ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು.

ಇನ್ನು 2012ರ ಅಗ್ಲೊರವ ಪಂದ್ಯಾವಳಿಯಲ್ಲಿ ಕಂಚಿನ ಪದಕ ಪಡೆದಿದ್ದ ಅಭಿಷೇಕ್ ಬೆನಿವಾಲ್, 81 ಕೆ.ಜಿ ವಿಭಾಗದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ. 2012ರ ಯೂತ್ ವರ್ಲ್ಡ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನರೇಂದ್ರ ಬೆರ್ವಾಲ್ 91 ಕೆ.ಜಿಗೂ ಅಧಿಕ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪಿದ್ದಾರೆ. ಶ್ರೀಲಂಕಾದ ರೋಶನ್ ಹೆಟ್ಟಯಾರ್ಚ್ಚಿ ಅವರನ್ನು ಮಣಿಸಿರುವ ನರೇಂದ್ರ, ಸೆಮಿಫೈನಲ್ ಪಂದ್ಯದಲ್ಲಿ ಕಜಕಿಸ್ಥಾನದ ದಸ್ತನ್ ಕುರ್ಮಾನ್ಬೆಟೊವ್‌ರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.