ಕ್ರೀಡೆ

ಏಷ್ಯನ್ ಆರ್ಚರಿ: ಭಾರತಕ್ಕೆ 2 ಪದಕ

Published On :

ಬ್ಯಾಂಕಾಕ್: ಭಾರತದ ಆರ್ಚರಿ ಪಟುಗಳು ಇಲ್ಲಿ ನಡೆಯುತ್ತಿರುವ ಏಷ್ಯನ್ ಆರ್ಚರಿ ಗ್ರಾನ್ ಪ್ರೀನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಗುರುವಾರ ಭಾರತಕ್ಕೆ ಎರಡು ಪದಕ ಲಭಿಸಿದೆ.
ಪುರುಷರ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಭಾರತದ ರಾಹುಲ್ ಬ್ಯಾನರ್ಜಿ ಬೆಳ್ಳಿ ಪದಕ ಪಡೆದಿದ್ದು, ಇದೇ ವಿಭಾಗದಲ್ಲಿ ಅತನು ದಾಸ್ ಕಂಚಿನ ಪದಕ ಪಡೆದಿದ್ದಾರೆ.
11ನೇ ರ್ಯಾಂಕ್ ಪಡೆದಿರುವ ರಾಹುಲ್ ಒಟ್ಟು 651 ಅಂಕಗಳನ್ನುಗಳಿಸಿದ್ದು, ಜಪಾನ್‌ನ ತಕಹ್ಯಾರಿ ಫುರಪಕವಾ 664 ಅಂಕಗಳೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಕೇವಲ 13 ಅಂಕಗಳ ಹಿನ್ನಡೆಯೊಂದಿಗೆ ರಾಹುಲ್ ಚಿನ್ನದ ಪದಕದಿಂದ ವಂಚಿತರಾದರು.

ಫುಟ್ಬಾಲ್ ರ್ಯಾಂಕಿಂಗ್: ಭಾರತಕ್ಕೆ 143ನೇ ಸ್ಥಾನ
ಜುರಿಕ್:
ವಿಶ್ವ ಫುಟ್ಬಾಲ್‌ನಲ್ಲಿ ಅಂಬೆಗಾಲಿಡುತ್ತಿರುವ ಭಾರತ ಫುಟ್ಬಾಲ್ ತಂಡ ಫುಟ್ಬಾಲ್ ರ್ಯಾಂಕಿಂಗ್ ಪಟ್ಟಿಯಲ್ಲಿ 24 ಸ್ಥಾನಗಳ ಜಿಗಿತ ಕಂಡಿದೆ. 167ನೇ ಸ್ಥಾನದಲ್ಲಿದ್ದ ಭಾರತ ತಂಡ ಪರಿಷ್ಕೃತ ರ್ಯಾಂಕಿಂಗ್ ಪಟ್ಟಿಯಲ್ಲಿ 143ನೇ ಸ್ಥಾನಕ್ಕೆ ಏರಿದೆ. 177 ಅಂಕಗಳನ್ನು ಪಡೆದಿರುವ ಭಾರತ ತಂಡ 143ನೇ ಸ್ಥಾನಕ್ಕೆ ಏರಿದೆ. ಸ್ಪೇನ್ ಅಗ್ರ ಸ್ಥಾನದಲ್ಲಿ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.