ಇಂಗ್ಲೆಂಡ್ಗೆ ಟ್ರಾಟ್ ಆಧಾರ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಅಚ್ಚರಿಯ ಕುಸಿತ ಕಂಡಿದ್ದ ಇಂಗ್ಲೆಂಡ್ ತಂಡದ ಬ್ಯಾಟ್ಸ್ಮನ್ಗಳು, ಗುರುವಾರ ಇಲ್ಲಿ ಆರಂಭವಾದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಇಂಗ್ಲೆಂಡ್ ತಂಡ ಮೊದಲ ದಿನಾಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 267 ರನ್ಗಳಿಸಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕಗಳಿಸಿದ್ದ ಕಾಂಪ್ಟನ್, ಎರಡನೇ ಟೆಸ್ಟ್ನಲ್ಲೂ ಶತಕಗಳಿಸಿದ್ದಾರೆ. ಇವರ ಜತೆಗೆ ಜೊನಾಥನ್ ಟ್ರಾಟ್ ಕೂಡ ಶತಕಗಳಿಸಿ ಅಜೇಯರಾಗಿದ್ದು, ತಂಡಕ್ಕೆ ದಿನದ ಗೌರವ ಸಲ್ಲುವಂತೆ ಮಾಡಿದ್ದಾರೆ.
ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಆಂಗ್ಲರು ಆರಂಭಿಕ ಆಘಾತ ಎದುರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಅಲಾಸ್ಟೇರ್ ಕುಕ್ ಹಾಗೂ ಕಾಂಪ್ಟನ್ ಜೋಡಿ ಮೊದಲ ವಿಕೆಟ್ಗೆ ಕೇವಲ 26ರನ್ ಕಲೆಹಾಕಿತು.
ಕಾಂಪ್ಟನ್ ಮತ್ತು ಟ್ರಾಟ್ 2ನೇ ವಿಕೆಟ್ಗೆ 210 ರನ್ಗಳ ಭರ್ಜರಿ ಜತೆಯಾಟ ನೀಡುವ ಮೂಲಕ ತಂಡವನ್ನು ಸುಭದ್ರ ಸ್ಥಿತಿಗೆ ಕೊಂಡೊಯ್ದರು. ದಿನದ ಕೊನೆ ಅವಧಿಯಲ್ಲಿ ತಮ್ಮ ಶತಕ ಪೂರೈಸಿದ ಕಾಂಪ್ಟನ್ (100) ಮಾರ್ಟೀನ್ ಎಸೆತದಲ್ಲಿ ಟೇಲರ್ಗೆ ಕ್ಯಾಚಿತ್ತು ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಪೀಟರ್ಸನ್, ಟ್ರಾಟ್ ಜತೆ ಸೇರಿ 3ನೇ ವಿಕೆಟ್ಗೆ ಮುರಿಯದ 31ರನ್ ಜತೆಯಾಟ ನೀಡಿದ್ದು, ಟ್ರಾಟ್ ಅಜೇಯ 121 ಹಾಗೂ ಪೀಟರ್ಸನ್ ಅಜೇಯ 18 ರನ್ಗಳಿಸಿ ತಮ್ಮ ಆಟವನ್ನು 2ನೇ ದಿನಕ್ಕೆ ಮುಂದುವರಿಸಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 267/2 (ಮೊದಲ ದಿನಾಂತ್ಯಕ್ಕೆ)
ಟ್ರಾಟ್ ಅಜೇಯ 121, ಕಾಂಪ್ಟನ್ 100
ಬೌಲಿಂಗ್: ಮಾರ್ಟೀನ್ 58/1, ವಾಗ್ನರ್ 70/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

