ಕ್ರೀಡೆ

ಐ-ಲೀಗ್ ಎರಡನೇ ಡಿವಿಷನ್: ಸದರ್ನ್ ಸಮಿತಿಗೆ ಜಯ

Published On :

ಬೆಂಗಳೂರು: ಆಕರ್ಷಕ ಪ್ರದರ್ಶನ ನೀಡಿದ ಪಶ್ಚಿಮ ಬಂಗಾಳದ ಸದರ್ನ್ ಸಮಿತಿ ತಂಡ ಎರಡನೇ ಡಿವಿಷನ್ ಐ- ಲೀಗ್ ಪಂದ್ಯಾವಳಿಯಲ್ಲಿ ಸೋಮವಾರ ನಡೆದ ಏಕೈಕ ಪಂದ್ಯದಲ್ಲಿ ಕಾಳಿಘಾಟ್ ತಂಡದ ವಿರುದ್ಧ ಜಯ ಸಾಧಿಸಿತು.
ಪಂದ್ಯದ 63ನೇ ಮತ್ತು 77ನೇ ನಿಮಿಷದಲ್ಲಿ ಸರ್ದನ್ ಸಮಿತಿ ಪರ ಗೋಲು ದಾಖಲಿಸಿದ ಡೇವಿಡ್ ಕೆಸಿ ಗಹ್ತೆ ಜಯದ ರೂವಾರಿ ಎನಿಸಿದರು.
ಆದರೆ, ಕಾಳಿಘಾಟ್ ಪರ ಜೇಮ್ಸ್ ಜಿಬೀಲೀ ಮಾತ್ರ 88ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಹೀಗಾಗಿ ಪಂದ್ಯದಲ್ಲಿ ಸದರ್ನ್ ಸಮಿತಿ 2-1 ಗೋಲುಗಳ ಅಂತರದಿಂದ ಜಯ ಕಂಡುಕೊಳ್ಳುವಲ್ಲಿ ಯಶಸ್ವಿಯಾಯಿತು.
ಪಂದ್ಯಾವಳಿಯಲ್ಲಿ ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ 3ರಲ್ಲಿ ಜಯ ಸಾಧಿಸಿ, 1ರಲ್ಲಿ ಡ್ರಾ ಕಂಡಿರುವ ಸದರ್ನ್ ಸಮಿತಿ 10 ಪಾಯಿಂಟ್ಗಳೊಂದಿಗೆ ಅಗ್ರ ಸ್ಥಾನದಲ್ಲಿದೆ.
ಇನ್ನು ಎರಡು ಪಂದ್ಯಗಳಲ್ಲಿ ಜಯ ಸಾಧಿಸಿ 1ರಲ್ಲಿ ಡ್ರಾ ಕಂಡಿರುವ ಗೋವಾದ ವಾಸ್ಕೋ ಮತ್ತು ಮುಂಬೈ ಟೈಗರ್ಸ್ ತಂಡಗಳು ತಲಾ 7 ಅಂಕ ಗಳಿಸಿ 2ನೇ ಸ್ಥಾನಕ್ಕಾಗಿ ಹೋರಾಟ ನಡೆಸಿವೆ, ಎರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಕಾಳಿಘಾಟ್ 6 ಅಂಕ ಪಡೆದು ಪೈಪೋಟಿಯಲ್ಲಿದೆ.
ಮಂಗಳವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಗೋವಾದ ವಾಸ್ಕೋ ಮತ್ತು ಮುಂಬೈ ಟೈಗರ್ಸ್ ತಂಡಗಳು ಸೆಣಸಲಿದ್ದು, ಎರಡನೇ ಪಂದ್ಯದಲ್ಲಿ ಲೋನಾಜುಮಲ್ ಮತ್ತು ಕೇರಳ ಅಂಗಣಕ್ಕಿಳಿಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.