ಮೊಹಾಲಿಯಲ್ಲಿ ದಾಖಲೆ ಜಯ

ಮೊಹಾಲಿ: ಪಂದ್ಯದ ಮೊದಲ ದಿನ ಸಂಪೂರ್ಣ ಮಳೆಗೆ ಆಹುತಿ. ಇನ್ನು ಉಳಿದ ನಾಲ್ಕು ದಿನಗಳ ಪಂದ್ಯವನ್ನು ಉಳಿಸಿಕೊಳ್ಳಲೂ ಆಸ್ಟ್ರೇಲಿಯಾಕ್ಕೆ ಸಾಧ್ಯವಾಗಲಿಲ್ಲ. ಹೀಗಾಗಿ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್ ಅಂತರದಿಂದ ಆಸೀಸ್ ಮಣಿಸುವ ಮೂಲಕ ಸರಣಿ ಜಯ ಕಂಡುಕೊಂಡಿತು. ಇದರೊಂದಿಗೆ ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ 3-0 ಅಂತರದಿಂದ ಸರಣಿ ಗೆದ್ದುಕೊಂಡಿದೆ. 81 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯೊಂದರಲ್ಲಿ ಭಾರತ 2ಕ್ಕಿಂತ ಹೆಚ್ಚು ಪಂದ್ಯ ಗೆದ್ದುಕೊಂಡಿದೆ.
ಅಂತಿಮ ದಿನ, ದ್ವಿತೀಯ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ 223 ರನ್ಗಳಿಗೆ ಆಲೌಟ್ ಆದ ನಂತರ, 133 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ರೋಚಕ ಜಯ ಕಂಡುಕೊಂಡಿತು. ಆತಿಥೇಯ ಭಾರತ ಪಂದ್ಯದ ಅಂತ್ಯದಲ್ಲಿ ಕೆಲ ಹೊತ್ತು ವಿಚಲಿತಗೊಂಡಂತೆ ಕಂಡುಬಂದಿತು. ಆದರೆ, ಆದರೆ, ನಾಯಕ ಮಹೇಂದ್ರ ಸಿಂಗ್ ಧೋನಿ ಆಸೀಸ್ನ ಮೈಕಲ್ ಕ್ಲಾರ್ಕ್ ಬೌಲಿಂಗ್ನಲ್ಲಿ ಸತತ ಮೂರು ಬೌಂಡರಿಗಳನ್ನು ಬಾರಿಸುವ ಮೂಲಕ ಭಾರತ ವಿಜಯ ಸಂಭ್ರಮ ಆಚರಿಸಿತು. ಗ್ಯಾಲರಿಯಲ್ಲಿದ್ದ ಅಭಿಮಾನಿಗಳಲ್ಲಿ ಸಂತಸದ ಕಲರವ ಮುಗಿಲು ಮುಟ್ಟಿತ್ತು.
ಆಸೀಸ್ನ ಜೇವಿಯರ್ ಡೊಹಾರ್ಟಿ (18) ಮತ್ತು ಮಿಚೆಲ್ ಸ್ಟಾರ್ಕ್ (35) 18.1 ಓವರ್ಗಳವರೆಗೆ 65 ನಿಮಿಷಗಳ ಕಾಲ ಕ್ರೀಸ್ನಲ್ಲಿ ನಿಂತು 44 ರನ್ ಗಳಿಸಿದ್ದು, ಭಾರತ ತಂಡಕ್ಕೆ ಕೊಂಚ ಹೆಚ್ಚುವರಿ ಹೊರೆಯಾಗಿ ಪರಿಣಮಿಸಿತು.
ಭಾರತ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕ ಮುರಳಿ ವಿಜಯ್ (26), ಚೇತೇಶ್ವರ ಪೂಜಾರ (28), ವಿರಾಟ್ ಕೊಹ್ಲಿ (34) ಹಾಗೂ ಸಚಿನ್ ತೆಂಡೂಲ್ಕರ್ (21) ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಭಾರತ ಜಯ ಸಾಧಿಸಿದಾಗ ನಾಯಕ ಮಹೇಂದ್ರ ಸಿಂಗ್ ಧೋನಿ (18) ಮತ್ತು ರವೀಂದ್ರ ಜಡೇಜಾ (8) ಕ್ರೀಸ್ನಲ್ಲಿದ್ದರು.
ಇದರೊಂದಿಗೆ ಭಾರತ ತಂಡ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ 0-4 ಅಂತರದಿಂದ ಸೋಲನುಭವಿಸಿದ ಸೇಡನ್ನು ತೀರಿಸಿಕೊಳ್ಳುವ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮರಳಿ ಪಡೆದುಕೊಂಡಿದೆ. ಟೆಸ್ಟ್ಗೆ ಪದಾರ್ಪಣೆ ಮಾಡಿ, ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶಿಖರ್ ಧವನ್ (187) ಮತ್ತು ಮುರಳಿ ವಿಜಯ್ (153) ಶತಕ ದಾಖಲಿಸಿ ವಿಜಯದ ರೂವಾರಿಗಳೆನಿಸಿದರು. ಧವನ್ ಕೇವಲ 85 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಟೆಸ್ಟ್ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ ಆಟಗಾರನೊಬ್ಬ ವೇಗದ ಶತಕ ಎಂಬ ದಾಖಲೆಗೆ ಅರ್ಹವಾಯಿತು. ಇದರೊಂದಿಗೆ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಹೀಗಾಗಿ ಈ ಭಾರತ ತಂಡ ನವದೆಹಲಿಯಲ್ಲಿ ಶುಕ್ರವಾರ ಆರಂಭವಾಗಲಿರುವ ನಾಲ್ಕನೇ ಮತ್ತು ಅಂತಿಮ ಪಂದ್ಯದಲ್ಲಿ ಕ್ಲೀನ್ ಸ್ವೀಪ್ ಮಾಡಲು ಎದುರು ನೋಡುತ್ತಿದೆ.
ರ್ಯಾಂಕಿಂಗ್: ಭಾರತಕ್ಕೆ 2ನೇ ಸ್ಥಾನ ಸಾಧ್ಯತೆ
ದುಬೈ: ಆಸೀಸ್ ವಿರುದ್ಧ ನಡೆಯುತ್ತಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಿಂದ ಮುನ್ನಡೆ ಕಂಡುಕೊಂಡಿರುವ ಭಾರತ ತಂಡ, ಐಸಿಸಿ ರ್ಯಾಂಕಿಂಗ್ನಲ್ಲಿ 2ನೇ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಿದೆ. ಸದ್ಯಕ್ಕೆ ದಕ್ಷಿಣ ಆಫ್ರಿಕಾ ಅಗ್ರ ಸ್ಥಾನವನ್ನು ಅಲಂಕರಿಸಿದ್ದು, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ. ಭಾರತ 4ನೇ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಸರಣಿಯ ಮೊದಲೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಈಗ ಇಂಗ್ಲೆಂಡ್- ಕಿವೀಸ್ ಸರಣಿಯ ಮೂರನೇ ಪಂದ್ಯ ಮತ್ತು ಭಾರತ- ಆಸೀಸ್ನ ನಾಲ್ಕನೇ ಪಂದ್ಯ ಮಾರ್ಚ್ 26ಕ್ಕೆ ಅಂತ್ಯಗೊಳ್ಳಲಿದ್ದು, ಆಗ ರ್ಯಾಂಕಿಂಗ್ ಪಟ್ಟಿ ಹೊರಬೀಳಲಿದೆ. ಹೀಗಾಗಿ ಇಂಗ್ಲೆಂಡ್ ಮತ್ತು ಆಸೀಸ್ ಹಿಂದಿಕ್ಕಿ 2ನೇ ಸ್ಥಾನ ಪಡೆಯಲು ಭಾರತಕ್ಕೆ ಇನ್ನು ಅವಕಾಶವಿದೆ. ಒಂದು ವೇಳೆ 2ನೇ ಸ್ಥಾನ ದಕ್ಕಿದರೆ ಐಸಿಸಿ ಬಹುಮಾನ ದೊರಕಲಿದೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 408
ಭಾರತ ಮೊದಲ ಇನಿಂಗ್ಸ್ 499
ಆಸ್ಟ್ರೇಲಿಯಾ 2ನೇ ಇನಿಂಗ್ಸ್ 223
ಫಿಲ್ ಹ್ಯೂಸ್ ಎಲ್ಬಿಡಬ್ಲ್ಯೂ ಬಿ ಅಶ್ವಿನ್ 69, ನಥಾನ್ ಲಿಯಾನ್ ಸಿ ಧೋನಿ ಬಿ ಓಜಾ 18, ಮೈಕಲ್ ಕ್ಲಾರ್ಕ್ ಸಿ ಪೂಜಾರ ಬಿ ಜಡೇಜಾ 18, ಬ್ರಾಡ್ ಹ್ಯಾಡಿನ್ ಎಲ್ಬಿಡಬ್ಲ್ಯೂ ಬಿ ಅಶ್ವಿನ್ 30, ಮೊಯ್ಸಿಸ್ ಹೆನ್ರೀಕೆಸ್ ಸಿ ಮತ್ತು ಬಿ ಜಡೇಜಾ 2, ಪೀಟರ್ ಸಿಡ್ಲ್ ಬಿ ಓಜಾ 13, ಮಿಚೆಲ್ ಸ್ಟಾರ್ಕ್ ಸಿ ಅಶ್ವಿನ್ ಬಿ ಜಡೇಜಾ 35, ಜೇವಿಯರ್ ಡೊಹಾರ್ಟಿ ಅಜೇಯ 18, ಇತರೆ 5.
ವಿಕೆಟ್ ಪತನ: 1-2, 2-35, 3-55, 4-89, 5-119, 6-123, 7-126, 8-143, 9-179.
ಬೌಲಿಂಗ್: ಭುವನೇಶ್ವರ ಕುಮಾರ್ 10-1-31-3, ಇಶಾಂತ್ ಶರ್ಮಾ 9-1-34-0, ಅಶ್ವಿನ್ 31-9-72-2, ರವೀಂದ್ರ ಜಡೇಜಾ 16.2-6-35-3, ಪ್ರಗ್ಯಾನ್ ಓಜಾ 21-6-46-2, ತೆಂಡೂಲ್ಕರ್ 2-0-2-0.
ಭಾರತ ದ್ವಿತೀಯ ಇನಿಂಗ್ಸ್ 136/4 (ಸೋಮವಾರ ದಿನಾಂತ್ಯಕ್ಕೆ)
ಮುರಳಿ ವಿಜಯ್ ಸ್ಟಂಪ್ ಹ್ಯಾಡಿನ್ ಬಿ ಡೊಹಾರ್ಟಿ 26, ಪೂಜಾರ ಎಲ್ಬಿಡಬ್ಲ್ಯೂ ಬಿ ಲಿಯಾನ್ 28, ವಿರಾಟ್ ಕೊಹ್ಲಿ ಸಿ ಹ್ಯೂಸ್ ಬಿ ಸಿಡ್ಲ್ 34, ತೆಂಡೂಲ್ಕರ್ ರನೌಟ್ 21, ಧೋನಿ ಅಜೇಯ 18, ಜಡೇಜಾ ಅಜೇಯ 8. ಇತರೆ 1; ವಿಕೆಟ್ ಪತನ: 1-42, 2-70, 3-103, 4-116.; ಬೌಲಿಂಗ್: ಮಿಚೆಲ್ ಸ್ಟಾರ್ಕ್ 10.3-1-51-0, ಸಿಡ್ಲ್ 11-2-34-1, ಲಿಯಾನ್ 5-0-27-1, ಡೊಹಾರ್ಟಿ 7-2-24-1.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


