ಏಷ್ಯನ್ ಬಾಕ್ಸಿಂಗ್: ಕಳಪೆ ಪ್ರದರ್ಶನ
ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಹೇಳಿಕೊಳ್ಳುವಂಥಾ ಸಾಧನೆಯನ್ನು ಭಾರತ ಮಾಡದಿರುವುದಕ್ಕೆ, ಅನುನಭವಿ ಆಟಗಾರರುಳ್ಳ ತಂಡವನ್ನು ಪಂದ್ಯಾವಳಿಗೆ ಕಳಿಸಿದ್ದೇ ಕಾರಣ ಎಂದು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಬಾಕ್ಸರ್ಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ಭಾರತ ಎರಡು ಸ್ವರ್ಣ ಹಾಗೂ ಮೂರು ಬೆಳ್ಳಿ ಪದಕಗಳನ್ನು ಗೆದ್ದಿತ್ತು. ಈ ಬಾರಿ ಕೇವಲ 4 ಕಂಚಿನ ಪದಕಗಳನ್ನು ಭಾರತೀಯ ಆಟಗಾರರು ಗೆದ್ದಿದ್ದಾರೆ. ಪಂದ್ಯಾವಳಿಯಲ್ಲಿ ಕೇವಲ 4 ಪದಕಗಳನ್ನು ಗೆದ್ದಿದ್ದ ಭಾರತೀಯ ಬಾಕ್ಸರ್ಗಳ ತಂಡ, ಸೋಮವಾರ ಸ್ವದೇಶಕ್ಕೆ ಹಿಂದಿರುಗಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಾಕ್ಸರ್ಗಳು, ಪಂದ್ಯಾವಳಿಗೆ ಕಳುಹಿಸಲಾಗಿದ್ದ ತಂಡದಲ್ಲಿ ಅನುಭವಿ ಆಟಗಾರರು ಇರಲಿಲ್ಲ. ಅಲ್ಲದೇ, ಪಂದ್ಯಾವಳಿಯಲ್ಲಿ ದೈತ್ಯ ಪ್ರತಿಭೆಗಳೊಂದಿಗೆ ಭಾರತೀಯ ಸೆಣೆಸಬೇಕಾಗಿತ್ತು. ಇದು ಹಿನ್ನಡೆಗೆ ಕಾರಣವಾಯಿತು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

