ಕೇರಳಕ್ಕೆ 7 ವಿಕೆಟ್ ಜಯ
ಶಿವಮೊಗ್ಗ: ಇಲ್ಲಿನ ಪೆಸಿಟ್ ಕಾಲೇಜಿನ ಅಬ್ದುಲ್ ಕಲಾಂ ಕ್ರೀಡಾಂಗಣದಲ್ಲಿ ನಡೆದ ಸೈಯದ್ ಆಲಿ ಟಿ-20 (ದಕ್ಷಿಣ ವಲಯ) ಪಂದ್ಯಾವಳಿಯಲ್ಲಿ ಆಂಧ್ರ ಪ್ರದೇಶದ ವಿರುದ್ಧ ಕೇರಳ 7 ವಿಕೆಟ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೇರಳ ತಂಡದ ನಾಯಕ ರೈಫಿ ಮಿನ್ಸೆಂಟ್ ಗೋಮ್ಸ್ ಸಾರಥ್ಯದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ, ನಿಗದಿತ 20 ಓವರ್ಗಳಲ್ಲಿ ಆಂಧ್ರ ತಂಡವನ್ನು 7 ವಿಕೆಟ್ ತೆಗೆದು 134 ರನ್ಗಳಿಗೆ ಕಟ್ಟಿಹಾಕಿತು.
ಆಂಧ್ರ ತಂಡದ 134 ರನ್ಗಳ ಗುರಿಯನ್ನು ಬೆನ್ನಟ್ಟಿದ ಕೇರಳ ತಂಡ 18.3 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವಿನ ನಗೆ ಬೀರಿತು. ಆರಂಭಿಕ ಆಟಗಾರರಾದ ವಿ.ಎ. ಜಗದೀಶ್, ನಿಕಿಲೇಶ್ ಸುರೇಂದ್ರನ್ ಜೊತೆಯಾಟದಲ್ಲಿ 5ನೇ ಓವರ್ ಅಂತ್ಯಕ್ಕೆ 40 ರನ್ಗಳಿಸಿದರು.
ತಂಡವನ್ನು ಗೆಲುವಿನ ಹಾದಿಗೆ ತಂದ ವಿ.ಎ. ಜಗದೀಶ್ 4 ಬೌಂಡರಿ ಬಾರಿಸಿ, ಮತ್ತೊಂದೆಡೆ 36 ರನ್ಗಳಿಸಿ ಅಜೇಯರಾಗಿ ಉಳಿದರು.
ಸಂಕ್ಷಿಪ್ತ ಸ್ಕೋರ್
ಆಂಧ್ರಪ್ರದೇಶ: 134/7 (20 ಓವರ್)
ಸುಮಂತ್ ಅಜೇಯ 60 (45),
ನರೇನ್ ರೆಡ್ಡಿ 24 (17)
ಬೌಲಿಂಗ್: ಜಗದೀಶ್ 25/2, ಪ್ರಶಾಂತ್ 15/2
ಕೇರಳ: 135/3 (18.4 ಓವರ್)
ಜಗದೀಶ್ 52 (49), ಪ್ರೇಮ್ 49 (40) ಬೌಲಿಂಗ್: ಪ್ರವೀಣ್ 27/1, ಅಚ್ಯುತ ರಾವ್ 24/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

