ಕ್ರೀಡೆ

ಆರ್ಥರ್ ಟ್ವಿಟರ್ ಅಕೌಂಟ್ ಡಿಲೀಟ್

Published On :

ಸಿಡ್ನಿ: ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡ ಹೀನಾಯ ಸೋಲನುಭವಿಸಿದ ಹಿನ್ನಲೆಯಲ್ಲಿ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿ ಬೇಸತ್ತಿರುವ ಆಸೀಸ್ ತಂಡದ ತರಬೇತುದಾರ ಮಿಕಿ ಆರ್ಥರ್, ತಮ್ಮ ಟ್ವಿಟರ್ ಅಕೌಂಟನ್ನು ಡಿಲೀಟ್ ಮಾಡಿದ್ದಾರೆ. ಇಷ್ಟು ದಿನಗಳ ಕಾಲ ಸಂತೋಷ ನೀಡಿದ್ದಕ್ಕೆ ಟ್ವಿಟರ್‌ಗೆ ಧನ್ಯವಾದಗಳು. ನಾನು ಟ್ವಿಟರ್ ಅಕೌಂಟ್ ಡಿಲೀಟ್ ಮಾಡುತ್ತಿದ್ದೇನೆ. ಟ್ವಿಟರ್‌ನ ಎಲ್ಲ ಬೆಂಬಲಿಗರಿಗೂ ಧನ್ಯವಾದಗಳು ಎಂದು ಮಿಕಿ ಆರ್ಥರ್ ಮಂಗಳವಾರ ತಮ್ಮ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಸ್ಟಾರ್ಕ್‌ಗೆ ಗಾಯ ಆಸೀಸ್‌ಗೆ ಹಿನ್ನಡೆ
ನವದೆಹಲಿ:
ಭಾರತ ಪ್ರವಾಸದಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವ ಆಸ್ಟ್ರೇಲಿಯಾ ತಂಡ ಈಗ ಮತ್ತೊಂದು ಹಿನ್ನಡೆ ಅನುಭವಿಸುತ್ತಿದೆ. ಮೂರನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ವೇಗಿ ಮಿಚ್ಚೆಲ್ ಸ್ಟಾರ್ಕ್, ಗಾಯದ ಸಮಸ್ಯೆಗೆ ಒಳಗಾಗಿದ್ದು ಶುಕ್ರವಾರದಿಂದ ಆರಂಭವಾಗಲಿರುವ ನಾಲ್ಕನೇ ಟೆಸ್ಟ್‌ಗೆ ಅಲಭ್ಯರಾಗಲಿದ್ದಾರೆ. ತಮ್ಮ ಮೊಣಕೈ ಗಾಯದ ಸಮಸ್ಯೆಗೆ ಒಳಗಾಗಿರುವ ವೇಗಿ ಮಿಚ್ಚೆಲ್ ಸ್ಟಾರ್ಕ್ ತವರಿಗೆ ವಾಪಸ್ಸಾಗಲಿದ್ದು, ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ಕ್ಲಾರ್ಕ್ ಪಡೆ ದುರ್ಬಲ: ಕುಲಕರ್ಣಿ
ಮುಂಬೈ:
ಭಾರತ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳಲ್ಲೂ ಸೋಲು ಕಂಡಿಕುವ ಕ್ಲಾರ್ಕ್ ಪಡೆ ಇದುವರೆಗೂ ಭಾರತ ಪ್ರವಾಸ ಮಾಡಿದ ಕಾಂಗರೂ ತಂಡಗಳಲ್ಲಿ ಅತಿ ದುರ್ಬಲ ತಂಡ ಎಂದು ಭಾರತದ ಮಾಜಿ ಆಟಗಾರ ನಿಲೇಶ್ ಕುಲಕರ್ಣಿ ತಿಳಿಸಿದ್ದಾರೆ. ಪ್ರಸಕ್ತ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರದರ್ಶನವನ್ನು ನೋಡಿದರೆ ಇದುವರೆಗೂ ಭಾರತಕ್ಕೆ ಪ್ರವಾಸ ಮಾಡಿದ ಕಾಂಗರೂ ಪಡೆಗಳಲ್ಲಿ ಕ್ಲಾರ್ಕ್ ಪಡೆ ಅತ್ಯಂತ ದುರ್ಬಲವಾಗಿದೆ ಎಂದು ನಿಲೇಶ್ ತಿಳಿಸಿದ್ದಾರೆ. ಆಸೀಸ್‌ನ ಸ್ಪಿನ್ ವಿಭಾಗ ಅನನುಭವಿಯಾಗಿದ್ದು, ಬ್ಯಾಟಿಂಗ್ ವಿಭಾಗ ಕೂಡ ದುರ್ಬಲವಾಗಿದೆ. ಆಸೀಸ್‌ನ ದುರ್ಬಲ ಬೌಲಿಂಗ್‌ನಿಂದಾಗಿ ಭಾರತ ಹೆಚ್ಚು ಬಾರಿ ಮೇಲುಗೈ ಸಾಧಿಸಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.