ಕ್ರೀಡೆ

ಐ- ಲೀಗ್ 2ನೇ ಡಿವಿಷನ್: ವಾಸ್ಕೋ ವಿರುದ್ಧ ಮುಂಬೈ ಟೈಗರ್ಸ್‌ಗೆ ಜಯ

Published On :

ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ 2ನೇ ಡಿವಿಷನ್ ಸಿ ಗುಂಪಿನ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡ ಗೋವಾದ ವಾಸ್ಕೋ ತಂಡವನ್ನು 1-0 ಗೋಲಿನ ಅಂತರದಿಂದ ಪರಾಭವಗೊಳಿಸಿತು.   ಪಂದ್ಯದ 22ನೇ ನಿಮಿಷದಲ್ಲಿ ಮೊಹ್ಮದ್ ರಫಿ ಗೋಲು ದಾಖಲಿಸಿದರು. ಆದರೆ, ವಾಸ್ಕೋ  ಗೋಲು ದಾಖಲಿಸುವಲ್ಲಿ ವಿಫಲವಾಯಿತು. ದಿನದ ಎರಡನೇ ಪಂದ್ಯದಲ್ಲಿ ಲೂನಾಜುಮಲ್ ತಂಡವನ್ನು ಕೇರಳ ಈಗಲ್ ತಂಡ 3-1 ಗೋಲುಗಳ ಅಂತರದಿಂದ ಪರಾಭವಗೊಳಿಸಿತು.
ಲೂನಾಜುಮಲ್ ತಂಡದ ಪರ ಪಂದ್ಯದ 66ನೇ ನಿಮಿಷದಲ್ಲಿ ಬಿ ಜೋರಾಮಾತ್ರಾ ಗೋಲು ದಾಖಲಿಸಿದರು. ಇನ್ನು ಕೇರಳ ಈಗಲ್ಸ್ ತಂಡದ ಪರ ಪಂದ್ಯದ 7ನೇ ನಿಮಿಷದಲ್ಲಿ ಒನೊಮೀಕ್ಪೋರ್ಟ್, 45ನೇ ನಿಮಿಷದಲ್ಲಿ ಎಂ. ಸೂಜಿಕುಮಾರ್ ಹಾಗೂ 61ನೇ ನಿಮಿಷದಲ್ಲಿ ಅಹ್ಮದ್ ಮಲಿಕ್ ಗೋಲು ದಾಖಲಿಸಿದರು.
ಕೆಜಿಎಫ್ ಪಂದ್ಯ ಡ್ರಾ: ಮಧ್ಯಪ್ರದೇಶದ ಬೋಪಾಲ್‌ನಲ್ಲಿ ನಡೆಯುತ್ತಿರುವ ಎ ಗುಂಪಿನ ಪಂದ್ಯಾವಳಿಯ ಮಂಗಳವಾರದ ಪಂದ್ಯದಲ್ಲಿ ಬೆಂಗಳೂರಿನ ಕೆಜಿಎಫ್ ಅಕಾಡೆಮಿ (ಬೆಮಲ್) ಮತ್ತು ಕೆಂಕ್ರೆ ಸ್ಪೋರ್ಟ್ಸ್ ತಂಡಗಳು 2-2 ಗೋಲುಗಳಿಂದ ಡ್ರಾ ಸಾಧಿಸಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.