ಕ್ರೀಡೆ

'ಮಲೇಷ್ಯನ್ ಜಿಪಿಯಲ್ಲೂ ಭಾರತ ಉತ್ತಮ ಪ್ರದರ್ಶನ'

'ಮಲೇಷ್ಯನ್ ಜಿಪಿಯಲ್ಲೂ ಭಾರತ ಉತ್ತಮ ಪ್ರದರ್ಶನ'
Published On :

ಸೆಪಾಂಗ್: ಭಾನುವಾರ ನಡೆಯಲಿರುವ ಮಲೇಷ್ಯನ್ ಗ್ರಾನ್‌ಪ್ರೀ ರೇಸ್‌ನಲ್ಲಿ ಭಾರತದ ಸಹರಾ ಫೋರ್ಸ್ ಇಂಡಿಯಾ ತಂಡ ಉತ್ತಮ ಪ್ರದರ್ಶನ ನೀಡಲಿರುವ ವಿಶ್ವಾಸವನ್ನು ತಂಡದ ಸಹ ಪಾಲುದಾರ ವಿಜಯ್ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮಲೇಷ್ಯನ್ ಜಿಪಿ ನಡೆಯಲಿರುವ ಸೆಪಾಂಗ್‌ನಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ತಂಡದ ಚಾಲಕರು ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ವರ್ಷದ ಜಿಪಿಯಲ್ಲಿ ನಮ್ಮ ಕ್ರೀಡಾಳುಗಳು ಎರಡಂಕಿ ಅಂಕಗಳನ್ನು ಗಳಿಸಿದ್ದರು. ಈ ಬಾರಿಯೂ ನಮ್ಮ ತಂಡ ಇಲ್ಲಿ ಉತ್ತಮ ಪ್ರದರ್ಶನ ನೀಡಲಿದೆ ಎಂಬ ವಿಶ್ವಾಸವಿದೆ' ಎಂದರು.
ಮಾ. 15ರಂದು ನಡೆದಿದ್ದ ಆಸ್ಟ್ರೇಲಿಯನ್ ಜಿಪಿಯಲ್ಲಿ ಫೋರ್ಸ್ ಇಂಡಿಯಾ ಉತ್ತಮ ಸಾಧನೆ ಮಾಡಿತ್ತು. ತಂಡದ ಆಟಗಾರರಾದ ಆ್ಯಂಡ್ರಿಯನ್ ಸೂಟಿಲ್ ಹಾಗೂ ಪೌಲ್ ಡಿ ರೆಸ್ತಾ ಅವರು, ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಗಳಿಸಿದ್ದರು.
ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಮಲ್ಯ, 'ಪ್ರಸಕ್ತ ವರ್ಷದ ಮೊದಲ ರೇಸ್‌ನಲ್ಲೇ ನಮ್ಮ ತಂಡದ ಕ್ರೀಡಾಳುಗಳು ಟಾಪ್ 10ರಲ್ಲಿ ಕಾಣಿಸಿಕೊಂಡಿರುವುದು ಸಂತಸ ತಂದಿದೆ. ಹಾಗಾಗಿ, ಮುಂದಿನ ರೇಸ್‌ನಲ್ಲಿ ನಮ್ಮ ತಂಡದ ಆಟಗಾರರು ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆಂಬುದು ಹೆಚ್ಚು ಕುತೂಹಲ ಕೆರಳಿಸಿದೆ' ಎಂದು ಅವರು ತಿಳಿಸಿದರು.
ಜವಾಬ್ದಾರಿ ಹೆಚ್ಚಿದೆ: ಇತ್ತೀಚೆಗಿನ ರೇಸ್‌ಗಳಲ್ಲಿ ಫೋರ್ಸ್ ಇಂಡಿಯಾ ತಂಡ, ಉತ್ತಮ ಸಾಧನೆ ಮಾಡಿರುವುದರಿಂದ ತಂಡದ ಆಟಗಾರರ ಮೇಲೆ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ ಎಂದ ಮಲ್ಯ, ಈ ಯಶಸ್ಸುಗಳಿಂದ ಮಾಧ್ಯಮಗಳು ಹಾಗೂ ತಂಡದ ಅಭಿಮಾನಿಗಳು - ಫೋರ್ಸ್ ಇಂಡಿಯಾ ತಂಡವನ್ನು ಪ್ರಮುಖ ಸ್ಪರ್ಧಾ ತಂಡವೆಂದು ಪರಿಗಣಿಸಿದ್ದಾರೆ.
ಹಾಗಾಗಿ, ಸ್ಥಿರವಾದ ಪ್ರದರ್ಶನವನ್ನು ಕಾಯ್ದುಕೊಳ್ಳವ ಅಗತ್ಯತೆ ನಮ್ಮ ತಂಡದ ಆಟಗಾರರಿಗೆ ಇದೆ ಎಂದು ಅವರು ತಿಳಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.