ಕೆಎಸ್ಸಿಎ ವತಿಯಿಂದ ತರಬೇತಿ ಶಿಬಿರಕ್ಕೆ ಚಾಲನೆ
ಬೆಂಗಳೂರು: ಮಕ್ಕಳಲ್ಲಿ ಅಡಗಿರುವ ಕ್ರಿಕೆಟ್ ಪ್ರತಿಭೆಯನ್ನು ಗುರುತಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) 'ಆರ್ಸಿ- ಕೆಎಸ್ಸಿಎ ಬೇಸಿಗೆ ಕ್ರಿಕೆಟ್ ಶಿಬಿರ'ವನ್ನು ಆಯೋಜಿಸಿದೆ. ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೆಎಸ್ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ, ಕಾರ್ಯದರ್ಶಿ ಜಾವಗಲ್ ಶ್ರೀನಾಥ್ ಹಾಗೂ ಆರ್ಸಿ-ಕೆಎಸ್ಸಿಎ ಅಧ್ಯಕ್ಷ ಜಿ.ಆರ್. ವಿಶ್ವನಾಥ್ ಅವರು ಶಿಬಿರದ ಬಗ್ಗೆ ವಿವರಗಳನ್ನು ನೀಡಿದರು.
ಬೆಂಗಳೂರು ನಗರ ಸೇರಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ 41 ಕೇಂದ್ರಗಳಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂಬ್ಳೆ, ಬೇರುಮಟ್ಟದಲ್ಲಿರುವ ಮಕ್ಕಳಲ್ಲಿನ ಕ್ರಿಕೆಟ್ ಪ್ರತಿಭೆಯನ್ನು ಹೆಕ್ಕಿ ತೆಗೆಯಲು ಹಾಗೂ ಜಿಲ್ಲಾ ಕೇಂದ್ರಗಳ ಮಟ್ಟಕ್ಕೆ ಕ್ರಿಕೆಟನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಪ್ರತೀವರ್ಷದಂತೆ ಈ ಬಾರಿಯೂ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಕಳೆದ ಬಾರಿ 30 ಕೇಂದ್ರಗಳಲ್ಲಿ ಶಿಬಿರಗಳನ್ನು ನಡೆಸಲಾಗಿದ್ದು, ಈ ಬಾರಿ 41 ಕೇಂದ್ರಗಳಲ್ಲಿ ಶಿಬಿರಗಳು ನಡೆಯುತ್ತಿರುವುದು ವಿಶೇಷ ಎಂದು ತಿಳಿಸಿದರು.
ಶಿಬಿರದ ಬಗ್ಗೆ ಮತ್ತಷ್ಟು ವಿವರಗಳನ್ನು ನೀಡಿದ ಜವಾಗಲ್ ಶ್ರೀನಾಥ್, 'ಶಿಬಿರಗಳಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಆಯಾ ಶಿಬಿರಾರ್ಥಿಯ ವಯಸ್ಸಿಗೆ ಅನುಗುಣವಾಗಿ, ಅಂಡರ್-14, ಅಂಡರ್ 16 ಹಾಗೂ ಅಂಡರ್-19 ಎಂಬ ಮೂರು ವಿಭಾಗಗಳಲ್ಲಿ ಮಕ್ಕಳು ತರಬೇತಿ ಪಡೆಯಬಹುದು ಎಂದರು. ಆದರೆ, ಅಂಡರ್-14 ಶಿಬಿರ ಬೆಂಗಳೂರಿನಲ್ಲಿ ಮಾತ್ರ ನಡೆಯಲಿದೆ ಎಂಬ ಸ್ಪಷ್ಟನೆಯನ್ನು ಅವರು ನೀಡಿದರು.
ಬೆಂಗಳೂರಿನಲ್ಲಿ 9 ಕೇಂದ್ರಗಳು: ಬೆಂಗಳೂರು ಹೊರತುಪಡಿಸಿದಂತೆ, ರಾಜ್ಯದಲ್ಲಿ ಒಟ್ಟು 41 ಕೇಂದ್ರಗಳಲ್ಲಿ ತರಬೇತಿ ನಡೆಯಲಿದ್ದು, ಬೆಂಗಳೂರು ನಗರದಲ್ಲಿ ಒಂಭತ್ತು ಕಡೆ ಶಿಬಿರ ನಡೆಯಲಿದೆ.
ಶಿಬಿರ ಕೇಂದ್ರಗಳು: ಈ ಕೆಳಕಂಡ ಸ್ಥಳಗಳಲ್ಲಿ ಆಸಕ್ತರ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಆರ್ಸಿ-ಕೆಎಸ್ಸಿಎ ಕೋರಿದೆ.
ಮಾರ್ಚ್ 29ರಂದು ಬೆಂಗಳೂರಿನ ಜೆಪಿ ನಗರ ಕ್ರೀಡಾಂಗಣ, ಜೆಎಸ್ಎಸ್ (ಉತ್ತರಹಳ್ಳಿ), ಜ್ಞಾನಜ್ಯೋತಿ ಎಚ್ಎಎಲ್, ಎಂಜಿ ರಸ್ತೆ ವೆಬ್ಸ್ ಹಾಗೂ ಎಸ್ಆರ್ಎ ಅರಮನೆ ಮೈದಾನ, ಜಯಮಹಲ್ ಎಕ್ಸ್ಟೆನ್ಷನ್ಗಳಲ್ಲಿ ಅಂಡರ್-14 ವಿಭಾಗಕ್ಕೆ ಆಯ್ಕೆ ಟ್ರಯಲ್ಸ್ ನಡೆಯಲಿವೆ. ಮಾ. 23ರಿಂದ 25ರವರೆಗೆ ಮೇಲ್ಕಂಡ ಕೇಂದ್ರಗಳಲ್ಲಿ ದಾಖಲಾತಿ ಪ್ರಕ್ರಿಯೆ ನಡೆಯಲಿವೆ.
ಬೆಂಗಳೂರಿನ ಮೇಲ್ಕಂಡ ಕೇಂದ್ರಗಳಲ್ಲೇ ಏಪ್ರಿಲ್ 15 (ಅಂಡರ್ 16), ಏಪ್ರಿಲ್ 16ರಂದು ಅಂಡರ್ 19 ವಿಭಾಗಗಳಿಗೆ ಆಯ್ಕೆ ಟ್ರಯಲ್ಸ್ ನಡೆಯಲಿದ್ದು, ಎರಡೂ ವಯೋವುತಿಯ ವಿಭಾಗಗಳಿಗೆ ದಾಖಲಾತಿ ಪ್ರಕ್ರಿಯೆಗಳು ಏ. 6ರಿಂದ ಏ. 10ರವರೆಗೆ ನಡೆಯಲಿದೆ. ಹೆಚ್ಚಿನ ಮಾಹಿತಿಗಳಿಗೆ ್ಞಡ್ಛಛ.್ಛ್ಟ.್ಝಟಿ ವೆಬ್ಸೈಟ್ಗೆ ಭೇಟಿ ನೀಡಲು ಕೋರಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

