ಗೆದ್ದು ಬೀಗಿದ ಕರ್ನಾಟಕ
ಶಿವಮೊಗ್ಗ: ಬಿಸಿಸಿಐ ಮುಷ್ತಾಕ್ ಅಲಿ ದಕ್ಷಿಣ ವಲಯ ಟಿ-20 ಪಂದ್ಯಾವಳಿಯ ಗುರುವಾರದ ಪಂದ್ಯದಲ್ಲಿ ಕರ್ನಾಟಕ ತಂಡ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತು.
ಭದ್ರಾವತಿ ವಿಐಎಸ್ಎಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು ಹೈದರಾಬಾದ್ ವಿರುದ್ಧ 12 ರನ್ಗಳ ಗೆಲುವು ಸಾಧಿಸಿ ನಾಕೌಟ್ ಹಂತಕ್ಕೆ ತಮ್ಮ ದಾರಿಯನ್ನು ಸುಗಮವಾಗಿಸಿಕೊಂಡಿತು.
ಕರ್ನಾಟಕ ತಂಡದ ಗೆಲುವಿನಲ್ಲಿ ಮಾಯಾಂಕ ಅಗರ್ವಾಲ್ ಅಬ್ಬರದ ಶತಕ, ಬೌಲಿಂಗ್ ವಿಭಾಗದಲ್ಲಿ ಮನೀಶ್, ಗೌತಮ್ ನೆರವಾದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕರ್ನಾಟಕ ತಂಡ ಆರಂಭದಿಂದಲೇ ಅಬ್ಬರಿಸಲು ಆರಂಭಿಸಿತು. ಮೊದಲ 10 ಓವರ್ನಲ್ಲಿ ತಂಡದ ಮೊತ್ತ 85 ರನ್ ಗಡಿ ಮುಟ್ಟಿತು. ಆದರೆ, ತಂಡದ ಮೊತ್ತ 81 ರನ್ ಆಗಿದ್ದಾಗ ಮನೀಷ್ ಪಾಂಡೆ (31) ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು.
ಈ ಸಂದರ್ಭದಲ್ಲಿ ಕ್ರೀಸ್ಗೆ ಆಗಮಿಸಿದ ಕೆ.ಎಲ್. ರಾಹುಲ್ ರನ್ ಗತಿ ಮತ್ತಷ್ಟು ಏರಿಸಲು ಮಾಯಾಂಕ್ ಜೊತೆ ಕೈಜೋಡಿಸಿದರು. 19 ಎಸೆತಗಳಲ್ಲಿ ಎರಡು ಭರ್ಜರಿ ಸಿಕ್ಸರ್, ಎರಡು ಬೌಂಡರಿಯೊಂದಿಗೆ 31 ರನ್ ಸಿಡಿಸಿದ ರಾಹುಲ್ ಔಟಾದರು.
ಮಾಯಾಂಕ್ ವಿಜಂೃಭಣೆ: ಮಾಯಾಂಕ ಅಗರ್ವಾಲ್ ಆಟವೇ ದಿನದ ಹೈಲೈಟ್. 65 ಎದುರಿಸಿದ ಮಾಯಾಂಕ್ 111 ರನ್ ಸಿಡಿಸಿದರು. ಇದರಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಸೇರಿತ್ತು. ಹೈದರಾಬಾದ್ನ ಬೌಲರ್ಗಳನ್ನು ಕಾಡಿದ ಮಾಯಾಂಕ್, ಕ್ರೀಡಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಕರ್ನಾಟಕ ತಂಡ ಇನ್ನಿಂಗ್ಸ್ ಮುಗಿಸಿದಾಗ 185 ರನ್ ಗಳಿಸಿ ಏಳು ವಿಕೆಟ್ ಕಳೆದುಕೊಂಡಿತ್ತು.
ಪ್ರತಿದಾಳಿ: ಕರ್ನಾಟಕ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್, ಮೊದಲ 5 ಓವರ್ಗಳಲ್ಲಿ 56 ರನ್ ಗಳಿಸಿತ್ತು. ಆದರೆ, ಅಂತಿಮವಾಗಿ, 20 ಓವರ್ಗಳಲ್ಲಿ 173 ರನ್ ಮಾತ್ರ ಗಳಿಸಿ ಶರಣಾಯಿತು.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

