ಈಡನ್ ಪಾರ್ಕ್ ಟೆಸ್ಟ್: ಕಿವೀಸ್ ಮೇಲುಗೈ
ಆಕ್ಲೆಂಡ್: ಆಂಗ್ಲರನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ ನ್ಯೂಜಿಲೆಂಡ್ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ 239 ರನ್ ಮುನ್ನಡೆ ಪಡೆದುಕೊಂಡಿದೆ.
ಈಡನ್ ಪಾರ್ಕ್ನಲ್ಲಿ ನಡೆಯುತ್ತಿರುವ ಪಂದ್ಯದ 3ನೇ ದಿನ ಇಂಗ್ಲೆಂಡ್ ತಂಡವನ್ನು 204 ರನ್ಗಳಿಗೆ ಆಲೌಟ್ ಮಾಡಿದ ಕಿವೀಸ್ ಪಡೆ ದಿನಾಂತ್ಯಕ್ಕೆ 3 ವಿಕೆಟ್ 35 ರನ್ ಗಳಿಸಿ ಮುನ್ನಡೆ ಸಾಧಿಸಿದೆ.
ಮೊದಲ ಟೆಸ್ಟ್ನಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಕಿವೀಸ್ನ ಪೀಟರ್ ಫುಲ್ಟಾನ್ ಅಜೇಯ 14 ಮತ್ತು ಡೀನ್ ಬ್ರೌನ್ಲೀ ಅಜೇಯ 13 ದಿನಾಂತ್ಯಕ್ಕೆ ಕ್ರೀಸ್ನಲ್ಲಿದ್ದರು.
3ನೇ ದಿನಾಂತ್ಯದಲ್ಲಿ 39 ರನ್ಗಳಿಗೆ ಒಟ್ಟು 8 ವಿಕೆಟ್ ಉರುಳಿದ್ದು ಅಚ್ಚರಿಗೆ ಕಾರಣವಾಯಿತು. ಇಂಗ್ಲೆಂಡ್ ಆಲೌಟ್ ಆದ ನಂತರ, ನ್ಯೂಜಿಲೆಂಡ್ನ ಅಗ್ರ ಕ್ರಮಾಂಕ ದಿಢೀರ್ ಕುಸಿತ ಕಂಡಿತು. ಹೀಗಾಗಿ ಪಂದ್ಯ ತೀವ್ರ ಕುತೂಹಲ ಹುಟ್ಟಿಸಿದೆ.
3 ಪಂದ್ಯಗಳ ಸರಣಿಯಲ್ಲಿ ಮಳೆ ಅಡ್ಡಿಯಿಂದ ಮೊದಲೆರಡು ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಈಗ 3ನೇ ಟೆಸ್ಟ್ಗೆ ಮಾತ್ರ ಪ್ರಖರವಾದ ಸೂರ್ಯನ ಬೆಳಕು ಚೆಲ್ಲಿದ್ದು, ಎರಡು ದಿನ ಬಾಕಿ ಉಳಿದಿರುವ ಪಂದ್ಯದಲ್ಲಿ ಫಲಿತಾಂಶ ಏನಾಗಲಿದೆ ಎಂಬುದು ಎಲ್ಲರ ಕುತೂಹಲ ಕೆರಳಿಸಿದೆ.
ಇಂಗ್ಲೆಂಡ್ ತಂಡವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದ ನಂತರ, ಅದರ ಮೇಲೆ ಫಾಲೋ ಆನ್ ಹೇರದಿರಲು ನ್ಯೂಜಿಲೆಂಡ್ ನಿರ್ಧರಿಸಿತು. ನಂತರ ದ್ವಿತೀಯ ಇನಿಂಗ್ಸ್ ಆರಂಭಿಸಲು ತೀರ್ಮಾನಿಸಿತು. ಆದರೆ, ಮೊದಲ ಓವರ್ನ 3ನೇ ಎಸೆತದಲ್ಲೇ ಹಮೀಶ್ ರುದರ್ಫೋರ್ಡ್ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ಅನುಭವಿಸಿತು. ಅಲ್ಲದೆ, 8 ರನ್ ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿದ್ದು, ಕಿವೀಸ್ ತೆಗೆದುಕೊಂಡ ನಿರ್ಧಾರ ಅದಕ್ಕೆ ತಿರುಗೇಟು ನೀಡಿದಂತಾಯಿತು.
ಚಹ ವಿರಾಮದ ನಂತರ 18 ಓವರ್ಗಳಲ್ಲಿ ಒಟ್ಟು 8 ವಿಕೆಟ್ ಉರುಳಿದ್ದು, ಪಿಚ್ ತಿರುವು ಪಡೆದಿದ್ದಕ್ಕೆ ಸಾಕ್ಷಿಯಾಗಿತ್ತು. ಕಾರಣ, ಮೊದಲ ಇನಿಂಗ್ಸ್ನಲ್ಲಿ ಕಿವೀಸ್ 443 ರನ್ ಗಳಿಸಲು ಕಾರಣವಾಗಿದ್ದ ಪಿಚ್ ನಿಧಾನವಾಗಿ ಬೌಲರ್ಗಳಿಗೆ ನೆರವಾಗತೊಡಗಿದೆ. ಹೀಗಾಗಿ ಅಂತಿಮವಾಗಿ ಫಲಿತಾಂಶ ಯಾರ ಪಾಲಾಗಲಿದೆ ಎಂಬ ಬಗ್ಗೆ ಕುತೂಹಲ ಉಂಟುಮಾಡಿದೆ.
ಸ್ಕೋರ್ ಬೋರ್ಡ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 443
ಇಂಗ್ಲೆಂಡ್ ಮೊದಲ ಇನಿಂಗ್ಸ್ 204
ಪ್ರಯಾರ್ 73, ರೂಟ್ 43.
ಬೌಲಿಂಗ್: ಬೊಲ್ಟ್ 68/6, ಸೌಥೀ 44/3
ನ್ಯೂಜಿಲೆಂಡ್ 2ನೇ ಇನಿಂಗ್ಸ್ 35/3
ಫುಲ್ಟಾನ್ ಅಜೇಯ 14, ಬ್ರೌನ್ಲೀ ಅಜೇಯ 13
ಬೌಲಿಂಗ್: ಬ್ರಾಡ್ 7/2, ಆ್ಯಂಡರ್ಸನ್ 11/1
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

