ಕ್ರೀಡೆ

ಕೇರಳ ಮಣಿಸಿದ ಸೌಥ್ ಯುನೈಟೆಡ್

Published On :

ಬೆಂಗಳೂರು: ಪಂದ್ಯಾವಳಿಯಲ್ಲೇ ಆಕರ್ಷಕ ಪ್ರದರ್ಶನ ತೋರಿದ ಸ್ಥಳೀಯ ಸೌಥ್ ಯುನೈಟೆಡ್ ತಂಡ, ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಡಿವಿಷನ್ ಐ-ಲೀಗ್ ಪಂದ್ಯಾವಳಿಯ ಭಾನುವಾರದ ಪಂದ್ಯದಲ್ಲಿ ಕೇರಳದ ಈಗಲ್ ತಂಡದ ವಿರುದ್ಧ 4-0 ಅಂತರದಿಂದ ಜಯ ಕಂಡುಕೊಂಡಿತು.
ಪಂದ್ಯಾವಳಿಯಲ್ಲಿ ಸೌಥ್ ಯುನೈಟೆಡ್ ತಂಡಕ್ಕೆ ಇದು ಎರಡನೇ ಜಯವಾಗಿದೆ. ಪಂದ್ಯದ 25ನೇ ನಿಮಿಷದಲ್ಲಿ  ವಿನೋದ್‌ಕುಮಾರ್, 45 ಮತ್ತು 89ನೇ ನಿಮಿಷದಲ್ಲಿ ಆಮೋಸ್ ಎರಡು ಗೋಲು ಹಾಗೂ 52ನೇ ನಿಮಿಷದಲ್ಲಿ ಸ್ಟಿಫನ್ ಸೌಥ್ ಯುನೈಟೆಡ್ ತಂಡದ ಪರ ಗೋಲು ದಾಖಲಿಸಿದರು. ಆದರೆ, ಎದುರಾಳಿ ಕೇರಳ ತಂಡ ಯಾವುದೇ ಗೋಲು ದಾಖಲಿಸುವಲ್ಲಿ ವೈಫಲ್ಯ ಕಂಡಿತು.
ಇನ್ನು ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಸಮಬಲದ ಪೈಪೋಟಿ ನೀಡಿದ ಕೋಲ್ಕತಾದ ಸದರ್ನ್ ಸಮಿತಿ ಮತ್ತು ಮಿಜೋರಾಂನ ಲೂನಾಜಮೂಲ್ ತಂಡಗಳು 1-1 ಅಂತರದಿಂದ ಡ್ರಾ ಸಾಧಿಸಿದವು. ಸದರ್ನ್ ಸಮಿತಿ ತಂಡದ ಪರ ಪಂದ್ಯದ 85ನೇ ನಿಮಿಷದಲ್ಲಿ ಡೇವಿಡ್ ಕೆಸಿ ನೈಹ್ತೆ ಗೋಲು ದಾಖಲಿಸಿದರೆ, ಪಂದ್ಯದ 66ನೇ ನಿಮಿಷದಲ್ಲಿ ಲೂನಾಜಮೂಲ್ ತಂಡದ ಪರ ಇಸ್ಸಾಕ್ ಗೋಲು ದಾಖಲಿಸಿದರು.

ನೂತನ ದಾಖಲೆ ಗುರಿಯಿಲ್ಲ: ಬೋಲ್ಟ್
ರಿಯೋ ಡಿ ಜನೈರೋ:
ಬರುವ ವಾರ ರಿಯೋ ಡಿ ಜನೈರೋದ ಕೊಪಾಕಬನ್ ಬೀಚ್‌ನಲ್ಲಿ ನಡೆಯಲಿರುವ 150 ಮೀ. ಓಟದ ಸ್ಪರ್ಧೆಯಲ್ಲಿ ನೂತನ ವಿಶ್ವ ದಾಖಲೆ ನಿರ್ಮಿಸುವ ಗುರಿ ಹೊಂದಿಲ್ಲ ಎಂದು ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಹೇಳಿದ್ದಾರೆ. ಆರು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಬೋಲ್ಟ್ ಈಗಾಗಲೇ 2009ರಲ್ಲಿ ಮ್ಯಾಂಚೆಸ್ಟರ್‌ನಲ್ಲಿ ನಡೆದ 150ಮೀ ಸ್ಪರ್ಧೆಯಲ್ಲಿ 14.36 ಸೆಕೆಂಡ್‌ಗಳಲ್ಲಿ ತಲುಪುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
'ಪಂದ್ಯಾವಳಿಗೂ ಮುನ್ನ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ನಾನು ಯಾವತ್ತೂ ಯೋಚಿಸುವುದಿಲ್ಲ. ನಾನು ಎಷ್ಟು ಸಾಧ್ಯವಿದೆಯೋ ಅಷ್ಟು ಓಡಲು ಬಯಸುತ್ತೇನೆ' ಎಂದು ಎಂದಿದ್ದಾರೆ 26 ವರ್ಷದ ಬೋಲ್ಟ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.