ಕ್ರೀಡೆ

ಮಲೇಷ್ಯಾ ಜಿಪಿ: ಸೆಬಾಸ್ಟಿಯನ್ ಜಯಭೇರಿ

ಮಲೇಷ್ಯಾ ಜಿಪಿ: ಸೆಬಾಸ್ಟಿಯನ್ ಜಯಭೇರಿ
Published On :

ಸೆಪಾಂಗ್: ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಸೆಬಾಸ್ಟಿಯನ್ ವೆಟಲ್ ಅವರು ಭಾನುವಾರ ನಡೆದ ಮಲೇಷ್ಯಾ ಜಿಪಿಯಲ್ಲಿ ಜಯಗಳಿಸಿದರು. ರೆಡ್‌ಬುಲ್ ತಂಡದ ವೆಟಲ್, ತಮ್ಮದೇ ತಂಡದ ಮಾರ್ಕ್ ವೆಬರ್ ಅವರನ್ನು ರೇಸ್‌ನ ಕೊನೆಯ ಕ್ಷಣದಲ್ಲಿ ಹಿಂದಿಕ್ಕಿ ಮೊದಲ ಸ್ಥಾನ ಪಡೆದರು.
ವೆಬರ್ ದ್ವಿತೀಯ ಸ್ಥಾನ ಗಳಿಸಿದರು. ಇನ್ನು ಪೋಡಿಯಂನ ಮೂರನೇ ಸ್ಥಾನ ಮಾಜಿ ವಿಶ್ವ ಚಾಂಪಿಯನ್ ಮರ್ಸಿಡೀಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಅವರ ಪಾಲಾಯಿತು.
ವೆಟ್ಟಲ್ ಅವರ ಪಾಲಿಗೆ ಇದು ಅವರ 27ನೇ ಗೆಲುವಾಗಿದೆ. ಅತ್ತ, ಮೂರನೇ ಸ್ಥಾನ ಗಳಿಸಿದ ಲೂಯಿಸ್ ಹ್ಯಾಮಿಲ್ಟನ್ ಅವರು ಮರ್ಸಿಡೀಸ್ ತಂಡವನ್ನು ಸೇರಿದ ಬಳಿಕ ದಾಖಲಿಸಿದ ಮೊದಲ ಗೆಲುವು ಇದಾಗಿದೆ.
ಮರ್ಸಿಡೀಸ್ ತಂಡದ ನಿಕೋಲ್ ರೋಸ್‌ಬರ್ಗ್ 4ನೇ ಸ್ಥಾನ ಗಳಿಸಿದರೆ, ಫೆರಾರಿಯ ಫೆಲಿಪೆ ಮಸ್ಸಾ ಅವರು 5ನೇ ಸ್ಥಾನಗಳಿಸಿದರು.
 ಆದರೆ, ಮಾಜಿ ವಿಶ್ವ ಚಾಂಪಿಯನ್ ಫರ್ನಾಂಡೊ ಅಲಾನ್ಸೊ ಅವರು ಸಾಗುತ್ತಿದ್ದ ಕಾರು, ರೇಸ್‌ನ ಎರಡನೇ ಲ್ಯಾಪ್‌ನಲ್ಲಿ ಲಘು ಅಪಘಾತಕ್ಕೀಡಾದ ಕಾರಣ ಅವರು ರೇಸ್‌ನಿಂದ ನಿವೃತ್ತಿಪಡೆಯಬೇಕಾಯಿತು.
ಲೋಟಸ್ ತಂಡದ ಫ್ರಾನ್ಸ್ ಕ್ರೀಡಾಳು ರೊಮೇನ್ ಗ್ರಾಸಿಯನ್ 6ನೇ ಸ್ಥಾನ ಗಳಿಸಿದರೆ, ಕಳೆದ ವಾರದ ಆಸ್ಟ್ರೇಲಿಯನ್ ಜಿಪಿ ಗೆದ್ದಿದ್ದ ಕಿಮಿ ರೈಕೋನನ್ ಅವರು 7ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅವರ ನಂತರದ ಸ್ಥಾನಗಳಲ್ಲಿ ನಿಕೊ ಹಲ್ಕನ್‌ಬರ್ಗ್, ಸರ್ಗಿಯೊ ಪರೇಜ್ ಹಾಗೂ ಜೀನ್-ಎರಿಕ್ ವರ್ಗ್ನೆ, ಕಾಣಿಸಿಕೊಂಡರು.

ತಾಂತ್ರಿಕ ದೋಷ: ಭಾರತೀಯರಿಗೆ ನಿರಾಸೆ
ಸೆಪಾಂಗ್:
ಕಳೆದ ವಾರ ನಡೆದಿದ್ದ ವರ್ಷದ ಮೊದಲ ರೇಸ್ ಆದ ಆಸ್ಟ್ರೇಲಿಯನ್ ಜಿಪಿಯಲ್ಲಿ ಟಾಪ್ 10ರಲ್ಲಿ ಕಾಣಿಸಿಕೊಂಡು, ಉತ್ತಮ ಸಾಧನೆ ಮಾಡಿದ್ದ ಭಾರತದ ಸಹರಾ ಫೋರ್ಸ್ ಇಂಡಿಯಾದ ಚಾಲಕರಾದ ಆ್ಯಡ್ರಿಯನ್ ಸುಟಿಲ್ ಹಾಗೂ ಪೌಲ್ ಡಿ ರೆಸ್ತಾ ಅವರು ಭಾನುವಾರ ಮಲೇಷ್ಯಾ ಜಿಪಿಯನ್ನು ಮುಕ್ತಾಯಗೊಳಿಸಲು ಆಗಲಿಲ್ಲ. ಭಾನುವಾರ ನಡೆದ ರೇಸ್‌ನಲ್ಲಿ ಸುಟಿಲ್ ಹಾಗೂ ರೆಸ್ತಾ - ಇಬ್ಬರ ಕಾರುಗಳ ಚಕ್ರಗಳಲ್ಲಿದ ನಟ್‌ಗಳು ಬಿಗಿಯಾಗಿಲ್ಲದ್ದರಿಂದ ಇಬ್ಬರಿಗೂ ಕಾರು ಚಾಲನೆ ಕಷ್ಟವಾಯಿತು. ಚಕ್ರಗಳು ಬಿಗಿಯಾಗಿ ಫಿಟ್ ಆಗಿಲ್ಲದ್ದನ್ನು ಬೇಗನೇ ಗ್ರಹಿಸಿಕೊಂಡ ಸುಟಿಲ್ ರೇಸ್‌ನ 27ನೇ ಲ್ಯಾಪ್‌ನಲ್ಲಿ ಚಾಲನೆಯನ್ನು ನಿಲ್ಲಿಸಿ, ಮುಂದಾಗಬಹುದಿದ್ದ ಅವಗಢವನ್ನು ತಪ್ಪಿಸಿದರು. ಇದಾದ ಕೆಲವೇ ನಿಮಿಷಗಳಲ್ಲಿ ರೆಸ್ತಾ ಅವರ ಕಾರಿನಲ್ಲೂ ಇದೇ ರೀತಿಯ ದೋಷ ಕಾಣಿಸಿಕೊಂಡಿದ್ದರಿಂದ ರೇಸ್‌ನ 22ನೇ ಲ್ಯಾಪ್‌ನಲ್ಲಿ ರೇಸ್‌ನಿಂದ ನಿವೃತ್ತಿಯಾದರು.

ಮಲೇಷ್ಯಾ ಜಿಪಿ: ಟಾಪ್ 10

ಕ್ರ.ಸಂಖ್ಯೆ    ಚಾಲಕ    ತಂಡ
1.    ಸೆಬಾಸ್ಟಿಯನ್ ವೆಟಲ್    ರೆಡ್‌ಬುಲ್
2.    ಮಾರ್ಕ್ ವೆಬರ್    ರೆಡ್‌ಬುಲ್
3.    ಲೂಯಿಸ್ ಹ್ಯಾಮಿಲ್ಟನ್    ಮರ್ಸಿಡೀಸ್
4.    ನಿಕೊ ರೋಸ್‌ಬರ್ಗ್    ಮರ್ಸಿಡೀಸ್
5.    ಫೆಲಿಪೆ ಮಾಸ್ಸಾ    ಫೆರಾರಿ
6.    ರೊಮೇನ್ ಗ್ರಾಸಿಯನ್    ಲೋಟಸ್
7.    ಕಿಮಿ ರೈಕೋನನ್    ಲೋಟಸ್
8.    ನಿಕೊ ಹಲ್ಕನ್‌ಬರ್ಗ್    ಫೆರಾರಿ
9.    ಸರ್ಗಿಯೋ ಪರೇಜ್    ಮೆಕ್‌ಲಾರೆನ್
10.    ಜೀನ್‌ಎರಿಕ್ ಟೊರೊ    ರೊಸೊ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.