ರಣಜಿ: ವಿಜಯಕ್ಕಾಗಿ ಆಡಿದರೆ ಹಣ
ನವದೆಹಲಿ: ರಣಜಿ ಪಂದ್ಯಗಳಲ್ಲಿ ಭಾಗವಹಿಸುವ ಯಾವುದೇ ತಂಡ, ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸದೇ, ಗೆಲ್ಲಲು ಪ್ರಯತ್ನಿಸುವ ತಂಡಕ್ಕೆ ಪ್ರೋತ್ಸಾಹ ಧನ ನೀಡಲು ಚಿಂತನೆ ನಡೆಸಲಾಗಿದೆ. ಮುಂಬೈನಲ್ಲಿ ನಡೆದ ಬಿಸಿಸಿಐ ತಾಂತ್ರಿಕ ಸಮಿತಿ ಸಭೆಯಲ್ಲಿ ಈ ಕುರಿತಂತೆ ಚರ್ಚೆ ನಡೆದಿದೆ.
ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಬಿಸಿಸಿಐ ತಾಂತ್ರಿಕ ಸಮಿತಿಯಲ್ಲಿ ಕಳೆದ ಶುಕ್ರವಾರ ದೇಶೀಯ ಕ್ರಿಕೆಟ್ ಹಾಗೂ ಅದರ ಬೆಳವಣಿಗೆ ಕುರಿತಾಗಿ ಮೊದಲ ಸುತ್ತಿನ ಮಾತುಕತೆ ನಡೆದಿತ್ತು. ರಣಜಿ ಪಂದ್ಯಗಳಲ್ಲಿ ಕೆಲ ತಂಡಗಳ ತಂತ್ರಗಾರಿಕೆಯಿಂದಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವುದನ್ನು ಸಮಿತಿಯ ಎಲ್ಲಾ ಸದಸ್ಯರೂ ಒಪ್ಪಿಕೊಂಡರು. ಹೀಗೆ, ಪಂದ್ಯಗಳು ಅನವಶ್ಯಕವಾಗಿ ಡ್ರಾ ಆಗುವುದನ್ನು ತಪ್ಪಿಸಲು, ಪಂದ್ಯವನ್ನು ಗೆಲ್ಲುವ ಸಲುವಾಗಿ ಹೋರಾಟ ನಡೆಸುವ ತಂಡಕ್ಕೆ ಪ್ರೋತ್ಸಾಹ ಧನ ನೀಡಲು ಆರಂಭಿಸಲು ಎಲ್ಲಾ ಸಮಿತಿ ಸದಸ್ಯರೂ ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.
'ಈ ಬಾರಿಯ ರಣಜಿ ಪಂದ್ಯಾವಳಿಯಲ್ಲಿ, ಪಂಜಾಬ್ ಹಾಗೂ ಉತ್ತರ ಪ್ರದೇಸ ತಂಡಗಳು ನಾಲ್ಕು ಬಾರಿ ಪಂದ್ಯ ಗೆಲ್ಲುವಂಥಾ ಉತ್ತಮ ಪ್ರಯತ್ನ ಮಾಡಿದ್ದವು. ಹಾಲಿ ಚಾಂಪಿಯನ್ ಮುಂಬೈ ತಂಡವೂ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಅಂಥಾ ಪ್ರದರ್ಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ, ಚರ್ಚೆ ನಡೆಸಿದ ಸಮಿತಿ ಸದಸ್ಯರು, ಪಂದ್ಯದಲ್ಲಿ ಉತ್ತಮ ಗೆಲುವು ಸಾಧಿಸಲು ಪ್ರಯತ್ನಿಸುವ ಪ್ರತಿಯೊಂದು ತಂಡಕ್ಕೂ ಪ್ರೋತ್ಸಾಹ ಧನ ನೀಡಿದರೆ, ಭವಿಷ್ಯದಲ್ಲಿ ರಣಜಿ ಪಂದ್ಯಗಳಲ್ಲಿ ಉಭಯ ತಂಡಗಳ ನಡುವೆ ಹಣಾಹಣಿಯನ್ನು ಹೆಚ್ಚಿಸಬಹುದು' ಎಂಬ ಅಭಿಪ್ರಾಯಕ್ಕೆ ಸಮಿತಿ ಸದಸ್ಯರು ಸಮ್ಮತಿಸಿದರು ಎನ್ನಲಾಗಿದೆ.
ವಿರಾಮದ ಅವಧಿ ಹೆಚ್ಚಳ: ಪ್ರೋತ್ಸಾಹಧನ ಮಾತ್ರವಲ್ಲದೇ, ರಣಜಿ ಪಂದ್ಯಾವಳಿಯಲ್ಲಿ ನಡೆಯುವ ಎರಡು ಗ್ರೂಪ್ ಹಂತಗಳ ನಡುವಿನ ವಿರಾಮ ವೇಳೆಯನ್ನು ಹೆಚ್ಚಿಸುವ ಕುರಿತಾಗಿಯೂ ಚರ್ಚಿಸಲಾಯಿತು. ಇದರಿಂದಾಗಿ, ಆಟಗಾರರಿಗೆ ಹೆಚ್ಚಿನ ವಿಶ್ರಾಂತಿಯೂ ಸಿಗುತ್ತದೆಂದು ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು.
ಎಸ್ಜಿ ಚೆಂಡುಗಳಿಗೆ ಅವಕಾಶ: ಅಂಡರ್-25 ಸಿಕೆ ನಾಯ್ಡು ಪಂದ್ಯಾವಳಿಗಳಲ್ಲಿ ಎಸ್ಜಿ ಚೆಂಡುಗಳನ್ನು ಉಪಯೋಗಿಸುವ ಕುರಿತಾಗಿಯೂ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಿಕೆ ನಾಯ್ಡು ಪಂದ್ಯಾವಳಿಗಳಲ್ಲಿ ಆಡುವ ಯುವ ಆಟಗಾರರಿಗೆ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ ಅನುಭವ ನೀಡಲು ಸಹಾಯಕವಾಗುತ್ತದೆ ಎಂದು ಸದಸ್ಯರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

