ಸಂಕಷ್ಟದಲ್ಲಿ ಆಂಗ್ಲ ಪಡೆ
ಅಕ್ಲೆಂಡ್: ಅರೆಕಾಲಿಕ ಬೌಲರ್ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ನ ಎರಡು ಮಹತ್ವದ ವಿಕೆಟ್ ಪಡೆಯುವ ಮೂಲಕ ಈಡನ್ ಪಾರ್ಕ್ನಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಿಡಿತ ಸಾಧಿಸಿದೆ.
ದ್ವಿತೀಯ ಇನಿಂಗ್ಸ್ನಲ್ಲಿ 481 ರನ್ಗಳ ವಿಶ್ವ ದಾಖಲೆಯ ಗುರಿಯನ್ನು ಬೆನ್ನಟ್ಟಿರುವ ಇಂಗ್ಲೆಂಡ್ 4ನೇ ದಿನಾಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದೆ. ಹೀಗಾಗಿ ಪ್ರವಾಸಿ ಆಂಗ್ಲ ಪಡೆ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ.
ಮೊದಲ ಇನಿಂಗ್ಸ್ನಲ್ಲಿ ಶತಕ ಪೂರೈಸಿದ್ದ ಪೀಟರ್ ಫುಟ್ಲಾನ್ (110) ದ್ವಿತೀಯ ಇನಿಂಗ್ಸ್ನಲ್ಲೂ ಶತಕ ಪೂರೈಸುವುದರೊಂದಿಗೆ ಕಿವೀಸ್ ದ್ವಿತೀಯ ಇನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 241 ಡಿಕ್ಲೇರ್ ಪಡೆದುಕೊಂಡಿತು.
ನಂತರ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಆಂಗ್ಲರು ಆರಂಭಿಕ ಆಘಾತ ಅನುಭವಿಸುವುದರೊಂದಿಗೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಿಮ ಒಂದು ದಿನ ಮಾತ್ರ ಬಾಕಿ ಉಳಿದಿರುವ ಪಂದ್ಯದಲ್ಲಿ ಇಂಗ್ಲೆಂಡ್ಗೆ ಜಯದ ಆಸೆ ದೂರ ಉಳಿದಿದ್ದು, ಡ್ರಾ ಸಾಧಿಸುವುದು ಕಷ್ಟಸಾಧ್ಯವಾಗಿದೆ.
ಒಂದು ವೇಳೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಜಯ ಸಾಧಿಸಬೇಕಾದರೆ, ಟೆಸ್ಟ್ ಇತಿಹಾಸದಲ್ಲೇ ನಾಲ್ಕನೇ ಇನಿಂಗ್ಸ್ನಲ್ಲಿ ಅತಿ ಹೆಚ್ಚಿನ ಮೊತ್ತವನ್ನು ಕಲೆ ಹಾಕಬೇಕಾದ ಅಗತ್ಯವಿದೆ. ಪ್ರಸ್ತುತ ಈ ದಾಖಲೆ ವೆಸ್ಟ್ ಇಂಡೀಸ್ ಹೆಸರಿನಲ್ಲಿದೆ. 2003ರಲ್ಲಿ ಅಂಟಿಗುವಾದಲ್ಲಿ ಪಂದ್ಯದಲ್ಲಿ 418 ರನ್ ಪೇರಿಸಿದ್ದ ವಿಂಡೀಸ್ ಆಸ್ಟ್ರೇಲಿಯಾವನ್ನು ಪರಾಭವಗೊಳಿಸಿತ್ತು.
ಆದರೆ, ದ್ವಿತೀಯ ಓವರ್ನಲ್ಲಿ ಕಾಂಪ್ಟನ್ (2) ವಿಕೆಟ್ ಪಡೆಯುಲ್ಲಿ ಟಿಮ್ ಸೌಥೀ ಯಶಸ್ವಿಯಾದರು. ಇನ್ನು ಜೋನಾಥನ್ ಟ್ರಾಟ್ (37) ನೈಲ್ ವಾಗ್ನಾರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಹೀಗಾಗಿ ಇಂಗ್ಲೆಂಡ್ 60 ರನ್ಗಳಿಗೆ ತನ್ನ ಮಹತ್ವದ ಎರಡು ವಿಕೆಟ್ ಕಳೆದುಕೊಂಡಿತು.
ನಂತರ ಒಂದು ಬಾರಿ ಜೀವದಾನ ಪಡೆದ ನಾಯಕ ಅಲಸ್ಟೇರ್ ಕುಕ್ (43) ಇಯಾನ್ ಬೆಲ್ (8) ಅವರೊಂದಿಗೆ ಜತೆಯಾಟದಲ್ಲಿ 25 ಓವರ್ಗಳಲ್ಲಿ 30 ರನ್ ಪೇರಿಸಿದರು. ಆದರೆ, ದಿನಾಂತ್ಯಕ್ಕೆ ಕೇನ್ ವಿಲಿಯಮ್ಸನ್ ಅವರು ಕುಕ್ ಮತ್ತು ನೈಟ್ವಾಚ್ಮನ್ ಸ್ಟೀವನ್ ಫಿನ್ ವಿಕೆಟ್ ಕಬಳಿಸಿದ್ದು, ನ್ಯೂಜಿಲೆಂಡ್ ಪಂದ್ಯದಲ್ಲಿ ಮೇಲೆ ಹಿಡಿತ ಸಾಧಿಸಲು ನೆರವಾಯಿತು. 6.1 ಓವರ್ ಬೌಲಿಂಗ್ ಮಾಡಿದ ವಿಲಿಯಮ್ಸನ್ 5 ರನ್ ನೀಡಿ 2 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು.
ಇನ್ನು ಸುಮಾರು 2 ಗಂಟೆಗಳ ಕಾಲ ಕ್ರೀಸ್ನಲ್ಲಿ ನಿಂತು, 89 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿರುವ ಇಯಾನ್ ಬೆಲ್ ಮಾತ್ರ ದಿನಾಂತ್ಯಕ್ಕೆ ಕ್ರೀಸ್ನಲ್ಲಿದ್ದರು.
ಇದಕ್ಕೂ ಮುನ್ನ ದಿನದ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ಗೆ ಫುಲ್ಟಾನ್ ಜತೆ ತಕ್ಕ ಸಾಥ್ ನೀಡಿದ್ದು, ಬ್ರೆಂಡಾನ್ ಮೆಕ್ಕಲಂ (ಅಜೇಯ 67) ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಸಫಲರಾದರು. ಇಬ್ಬರ ಜತೆಯಾಟದಲ್ಲಿ 101 ಎಸೆತಗಳನ್ನು ಎದುರಿಸುವ ಮೂಲಕ 5ನೇ ವಿಕೆಟ್ಗೆ 117 ರನ್ ಕಲೆ ಹಾಕಿದರು. ಇದರೊಂದಿಗೆ ನ್ಯೂಜಿಲೆಂಡ್ ಮೇಲುಗೈ ಸಾಧಿಸಲು ನೆರವಾದರು.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 443
ಇಂಗ್ಲೆಂಡ್ ಮೊದಲ ಇನಿಂಗ್ಸ್ 204
ನ್ಯೂಜಿಲೆಂಡ್ 2ನೇ ಇನಿಂಗ್ಸ್ 241/6 (ಡಿ)
ಫುಲ್ಟಾನ್ 110, ಮೆಕಲಂ ಅಜೇಯ 67
ಬೌಲಿಂಗ್: ಬ್ರಾಡ್ 54/2,
ಪನೇಸರ್ 53/2
ಇಂಗ್ಲೆಂಡ್ 2ನೇ ಇನಿಂಗ್ಸ್ 90/4
ಕುಕ್ 43, ಟ್ರಾಟ್ 37
ಬೌಲಿಂಗ್: ವಿಲಿಯಮ್ಸನ್ 5/2, ವಾಗ್ನರ್ 6/2
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

