ಕ್ರೀಡೆ

ಹರಿಣಗಳಿಗೆ ಜಯ ತಂದ ಡಿವಿಲಿಯರ್ಸ್

Published On :

ಬೆನೋನಿ (ದಕ್ಷಿಣ ಆಫ್ರಿಕಾ): ನಾಯಕ ಡಿವಿಲಿಯರ್ಸ್ ಅವರ ಅಜೇಯ 95 ರನ್ಗಳ ಸಹಾಯದಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ, ಪಾಕಿಸ್ತಾನ ವಿರುದ್ಧದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ, 49.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ಗಳನ್ನೂ ಕಳೆದುಕೊಂಡು 205 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಲು ಕ್ರೀಸ್ಗೆ ಇಳಿದ ದಕ್ಷಿಣ ಆಫ್ರಿಕಾ ತಂಡ, 44 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 208 ರನ್ ಗಳಿಸಿ, ಜಯ ಸಾಧಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನಕ್ಕೆ ಸ್ಟೇಯ್ನ್ ಮೊದಲ ಪೆಟ್ಟು ನೀಡಿದರು. ಆರಂಭಿಕ ಮಹಮ್ಮದ್ ಹಫೀಸ್ ಅವರನ್ನು ಬೇಗನೇ ಪೆವಿಲಿಯನ್ಗೆ ಅಟ್ಟಿದ ಅವರು, ಪಾಕಿಸ್ತಾನದ ಇನಿಂಗ್ಸ್ಗೆ ಮೊದಲ ವಿಘ್ನ ತಂದಿತ್ತರು.
ಆನಂತರ, ಪಾಕಿಸ್ತಾನ ಬೇಗನೇ ಮತ್ತೊಬ್ಬ ಆರಂಭಿಕ ಇಮ್ರಾನ್ ಫರ್ಹಾತ್ ಅವರನ್ನೂ ಕಳೆದುಕೊಂಡಿತು. ಈ ವಿಕೆಟ್ ತೆಗೆದಿದ್ದು ಸೋತ್ಸೋಬ್. ಆಗ, ತಂಡದ ಮೊತ್ತ 31 ರನ್. ಆಗ ಜೋಡಿಯಾದ ಕಮ್ರನ್ ಅಕ್ಮಲ್ ಹಾಗೂ ಯೂನಿಸ್ ಖಾನ್ ಜೋಡಿ, 3ನೇ ವಿಕೆಟ್ಗೆ 66 ರನ್ ಸೇರಿಸಿತು. ಆದರೆ, ತಂಡದ ಮೊತ್ತ 97 ರನ್ ಆಗಿದ್ದಾಗ, ಕಮ್ರನ್ ಅಕ್ಮಲ್ ಅವರ ವಿಕೆಟ್ ಪತನಗೊಂಡಿತು, ನಂತರ, ತಂಡದ ಮೊತ್ತ 104 ರನ್ ಆಗಿದ್ದಾಗ, ಯೂನಿಸ್ ಖಾನ್ ಅವರ ವಿಕೆಟ್ ಉರುಳಿತು.
ಹೀಗೆ, ಒಂದರ ಹಿಂದೊಂದರಂತೆ ಎರಡು ವಿಕೆಟ್ಗಳನ್ನು ಕಳೆದುಕೊಂಡಿದ್ದ ಪಾಕಿಸ್ತಾನಕ್ಕೆ ಕೊಂಚ ಆಸರೆಯಾಗಿದ್ದು, ಶೋಯೆಬ್ ಮಲ್ಲಿಕ್ ಹಾಗೂ ಶಾಹಿದ್ ಅಫ್ರಿದಿ. ಈ ಜೋಡಿ, 5ನೇ ವಿಕೆಟ್ಗೆ 47 ರನ್ ಸೇರಿಸಿತು.
ತಂಡದ ಮೊತ್ತ 151 ರನ್ ಆಗಿದ್ದಾಗ, ಶೋಯೆಬ್ ಮಲ್ಲಿಕ್ ಅವರು ವಿಕೆಟ್ ಒಪ್ಪಿಸಿ ಹೊರನಡೆದರು. ಈ ಹಂತದಲ್ಲಿ ಪಾಕಿಸ್ತಾನದ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ ಮೆಕ್ಲಾರೆನ್, ಚಕಚಕನೆ ಮೂರು ವಿಕೆಟ್ಗಳನ್ನು ಕಬಳಿಸಿ, ಪಾಕ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು.
ಶೋಯೆಬ್ ಮಲ್ಲಿಕ್ ಅವರನ್ನು ಹೊರಹಾಕಿದ್ದ ಮೆಕ್ಲಾರೆನ್, ನಂತರ, ಶಾಹೀದ್ ಅಫ್ರಿದಿ ಹಾಗೂ ಕ್ರೀಸ್ನಲ್ಲಿ ಗಟ್ಟಿಯಾಗಿ ತಳವೂರಲು ತಯಾರಿ ನಡೆಸಿದ್ದ ಮಿಸ್ಬಾ ಉಲ್ ಹಕ್ ಅವರ ವಿಕೆಟ್ಗಳನ್ನು ಪಡೆದರು.
ಆನಂತರ, ಪಾಕಿಸ್ತಾನ ನಿಗದಿತ ಅಂತರದಲ್ಲಿ ಉಳಿದ ವಿಕೆಟ್ಗಳನ್ನೂ ಕಳೆದುಕೊಂಡು 205 ರನ್ಗಳಿಗೆ ಆಲೌಟ್ ಆಯಿತು.
ನೆರವಾದ ವಿಲಿಯರ್ಸ್: ಪಾಕಿಸ್ತಾನ ನೀಡಿದ್ದ ಸುಲಭ ಸಾಧ್ಯವಾದ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೂಡಾ, ಆರಂಭದಲ್ಲೇ ಪೆಟ್ಟು ತಿಂದಿತು. ತಂಡದ ಮೊತ್ತ ಕೇವಲ 11 ರನ್ ಆಗಿದ್ದಾಗ, ಆರಂಭಿಕ ಡಿ ಕಾಕ್ ಅವರ ವಿಕೆಟನ್ನು ಕಳೆದುಕೊಂಡಿತು. ಆಗ, ಕ್ರೀಸ್ಗೆ ಆಗಮಿಸಿದ ಮೂರನೇ ಕ್ರಮಾಂಕದ ಇಂಗ್ರಾಮ್ ಹಾಗೂ ಆರಂಭಿಕ ಹಶೀಂ ಆಮ್ಲಾ ಜೋಡಿ 2ನೇ ವಿಕೆಟ್ಗೆ 22 ರನ್ ಸೇರಿಸಿತು. ತಂಡದ ಮೊತ್ತ 34 ರನ್ ಆಗಿದ್ದಾಗ ಇಂಗ್ರಾಮ್ ವಿಕೆಟ್ ಒಪ್ಪಿಸಿದರು. ಆಮ್ಲಾ ಅವರ ವಿಕೆಟ್ ಸಹ ಪತನಗೊಂಡಾಗ, ಇನಿಂಗ್ಸ್ ಭಾರ ಹೊತ್ತ ಡಿವಿಲಿಯರ್ಸ್, ಆಕರ್ಷಕ 95 ರನ್ ಗಳಿಸಿ ತಂಡವನ್ನು ವಿಜಯ ತಂದಿತ್ತರಲ್ಲದೇ, ಅಜೇಯರಾಗಿ  ಉಳಿದರು.
ಈ ಜಯದೊಂದಿಗೆ, ಹರಿಣಗಳ ತಂಡ, ಐದು ಪಂದ್ಯಗಳ ಏಕದಿನ ಸರಣಿಯನ್ನು 3-2 ಅಂತರದಲ್ಲಿ ಗೆದ್ದುಕೊಂಡಿದೆ.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 205 (49.1 ಓವರ್)
ಕಮ್ರನ್ ಅಕ್ಮಲ್ 48 (51), ಯೂನಿಸ್ ಖಾನ್ 29 (58); ಬೌಲಿಂಗ್: ಮೆಕ್ಲಾರೆನ್ 32/3, ಮಾರ್ಕೆಲ್ 33/2
ದಕ್ಷಿಣ ಆಫ್ರಿಕಾ: 208/4 (44 ಓವರ್)
ಡಿ ವಿಲಿಯರ್ಸ್ ಅಜೇಯ 95 (111), ಬೆಹರ್ಡಿನ್ 35 (36); ಬೌಲಿಂಗ್: ಮಹಮ್ಮದ್ ಇರ್ಫಾನ್ 28/2, ಜುನೈದ್ 30/1
ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ: ಡಿ ವಿಲಿಯರ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.