ಕ್ರೀಡೆ

ಆರ್‌ಸಿಬಿ ಸಮರಾಭ್ಯಾಸ ಶುರು

ಆರ್‌ಸಿಬಿ ಸಮರಾಭ್ಯಾಸ ಶುರು
Published On :

ಬೆಂಗಳೂರು: ಏಪ್ರಿಲ್ ಮೊದಲ ವಾರದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರನೇ ಆವೃತ್ತಿಯು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಐಪಿಎಲ್ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಂಗಳವಾರದಿಂದ ತನ್ನ ಅಭ್ಯಾಸವನ್ನು ಆರಂಭಿಸಿತು. ತಂಡದ ತವರು ಪಿಚ್ ಆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಆಟಗಾರರು ಮಂಗಳವಾರ ತಮ್ಮ ಮೊದಲ ದಿನದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯ ಮೊದಲ ಪಂದ್ಯ ಏ. 6ರಂದು ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಮುಖಾಮುಖಿಯಾಗಲಿದೆ.
ಮಂಗಳವಾರ ನಡೆದ ಮೊದಲ ದಿನದ ಅಭ್ಯಾಸದಲ್ಲಿ ತಂಡದ ಎಂಟು ಆಟಗಾರರು ಅಭ್ಯಾಸಕ್ಕಿಳಿದಿದ್ದರು. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಅಭ್ಯಾಸ ನಡೆಸಿದ ಆಟಗಾರರಿಗೆ ತಂಡದ ತರಬೇತುದಾರ ರೇ ಜೆನ್ನಿಂಗ್ಸ್ ಮಾರ್ಗದರ್ಶನ ನೀಡಿದರು.
ಕೆ.ಪಿ. ಅಪ್ಪಣ್ಣ, ಅರುಣ್ ಕಾರ್ತಿಕ್, ಅಭಿನವ್ ಮುಕುಂದ್, ಹರ್ಷಲ್ ಪಟೇಲ್, ಸಯ್ಯದ್ ಮಹಮ್ಮದ್, ಶೆಲ್ಡನ್ ಜಾಕ್ಸನ್, ವಿಜಯ್ ಝೋಲ್ ಹಾಗೂ ಪಂಕಜ್ ಸಿಂಗ್ ಅವರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದರು.
ಐಪಿಎಲ್ ಹಿನ್ನೆಲೆಯಲ್ಲಿ, ಮಂಗಳವಾರವೇ ಬೆಂಗಳೂರಿಗೆ ಆಗಮಿಸಿರುವ ತಂಡದ ವೇಗದ ಬೌಲರ್ ಜಹೀರ್ ಖಾನ್, ತಂಡವನ್ನು ಸೇರಿಕೊಂಡಿದ್ದಾರಾದರೂ ಮೊದಲ ದಿನದ ಅಭ್ಯಾಸದಲ್ಲಿ ಅವರು ಪಾಲ್ಗೊಳ್ಳಲಿಲ್ಲ. ಬುಧವಾರದಿಂದ ಅವರು ಅಭ್ಯಾಸ ನಡೆಸುವ ನಿರೀಕ್ಷೆಯಿದೆ. ಇನ್ನು, ತಂಡದ ಸ್ಟಾರ್ ಆಟಗಾರ ಕ್ರಿಸ್ ಗೇಯ್ಲ್ ಸೇರಿದಂತೆ ಇತರ ಆಟಗಾರರು ಗುರುವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ತಂಡದ ಅಭ್ಯಾಸ ಆರಂಭಕ್ಕೂ ಒಂದು ವಾರ ಮುನ್ನವೇ ನಗರಕ್ಕೆ ಆಗಮಿಸಿದ್ದ ತರಬೇತುದಾರ ಜೆನ್ನಿಂಗ್ಸ್, ಶಿವಮೊಗ್ಗಕ್ಕೆ ತೆರಳಿ, ಅಲ್ಲಿ ಕರ್ನಾಟಕ ತಂಡ ಭಾಗವಹಿಸಿದ್ದ ಮುಷ್ತಾಕ್ ಅಲಿ ಪಂದ್ಯಾವಳಿ ವೀಕ್ಷಿಸಿದ್ದರು.

'ವಿರಾಟ್ ಸಾಮರ್ಥ್ಯ ಹೆಚ್ಚಲಿದೆ'
ಬೆಂಗಳೂರು:
ಪ್ರತಿಭಾನ್ವಿತ ವಿರಾಟ್ ಕೊಹ್ಲಿ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ಈ ಅನುಭವ ಅವರನ್ನು ಮುಂದೊಂದು ದಿನ ಅವರಿಗೆ ಟೀಂ ಇಂಡಿಯಾಗೆ ನಾಯಕನಾಗುವ ಸಾಮರ್ಥ್ಯವನ್ನು ತಂದುಕೊಡಲಿದೆ ಎಂದು ಆರ್‌ಸಿಬಿ ತಂಡದ ತರಬೇತುದಾರ ರೇ ಜೆನ್ನಿಂಗ್ಸ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಡಿಯಲ್ಲಿ ಆರ್‌ಸಿಬಿ ಅಭ್ಯಾಸ ನಡೆಸಿತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆನ್ನಿಂಗ್ಸ್, 'ಆರ್‌ಸಿಬಿ ತಂಡವನ್ನು ಮುನ್ನಡೆಸುವ ಅವಕಾಶದಿಂದ ಅವರ ನಾಯಕತ್ವ ಗುಣ ಮತ್ತಷ್ಟು ಹೆಚ್ಚಲಿದೆ. ಇದು ಅವರಿಗೆ ಮುಂದೊಂದು ದಿನ ಭಾರತ ತಂಡವನ್ನೂ ಮುನ್ನಡೆಸುವ ಶಕ್ತಿ ನೀಡಲಿದೆ' ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.