ಡೇವಿಸ್: ಇಂಡೋನೇಷ್ಯಾ ತಂಡ ಪ್ರಕಟ
ಬೆಂಗಳೂರು: ರಾಜ್ಯ ಲಾನ್ ಟೆನಿಸ್ ಸ್ಟೇಡಿಯಂನಲ್ಲಿ ಏಪ್ರಿಲ್ 5ರಿಂದ 7ರ ವರೆಗೆ ನಡೆಯಲಿರುವ ಡೇವಿಸ್ ಕಪ್ ಏಷ್ಯಾ ಓಸೆನಿಯಾ ಗುಂಪು 1ರ ಪಂದ್ಯಾವಳಿಗೆ ಇಂಡೋನೇಷ್ಯಾ ಮಂಗಳವಾರ ತಂಡ ಪ್ರಕಟಿಸಿದೆ.
ಭಾರತ ಮತ್ತು ಇಂಡೋನೇಷ್ಯಾ ನಡುವೆ ಪಂದ್ಯಗಳು ನಡೆಯಲಿವೆ. ಮಾರ್ಚ್ 31ಕ್ಕೆ ಇಂಡೋನೇಷ್ಯಾ ತಂಡ ಬೆಂಗಳೂರು ನಗರಕ್ಕೆ ಆಗಮಿಸಲಿದ್ದು, ಏಪ್ರಿಲ್ 1ರಿಂದ ಅಭ್ಯಾಸ ನಡೆಸಲಿದೆ. ಆದರೆ, ಭಾರತದ ಆಟಗಾರರು ಮಾರ್ಚ್ 30ರಂದು ನಗರಕ್ಕೆ ಆಗಮಿಸಲಿದ್ದಾರೆ. ಈ ಹಿಂದೆ ನಡೆದ ಪಂದ್ಯದಲ್ಲಿ ಸೋತಿರುವ ಭಾರತ ಮತ್ತು ಇಂಡೋನೇಷ್ಯಾ ತಂಡಗಳು ಜಯದ ಕಾತರದಲ್ಲಿವೆ.
ಎರಡನೇ ದರ್ಜೆಯ ತಂಡವನ್ನು ಕಣಕ್ಕಿಳಿಸಿದ್ದರಿಂದ ಫೆಬ್ರುವರಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 1-4 ಅಂತರದಿಂದ ಸೋಲನುಭವಿಸಿತ್ತು. ಇನ್ನು ಇಂಡೋನೇಷ್ಯಾ ತಂಡ ಜಪಾನ್ ವಿರುದ್ಧ 0-5 ಅಂತರದಿಂದ ಪರಾಭವ ಹೊಂದಿತ್ತು.
ಇಂಡೋನೇಷ್ಯಾ ತಂಡ: ಕ್ರಿಸ್ಟೋಫರ್ ರುಂಕಾತ್, ಎಲ್ಬರ್ಟ್ ಸೀ, ವಿಸ್ನು ಆದಿ ನುಗ್ರಾಹೋ ಹಾಗೂ ಡೇವಿಡ್ ಅಗುಂಗ್ ಸುಸಾಂತೋ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

