ಕ್ರೀಡೆ

ಯುಕೆ ಚಾಂಪಿಯನ್‌ಷಿಪ್: ಲಂಡನ್‌ಗೆ ಪಂಕಜ್ ಪಯಣ

Published On :

ನವದೆಹಲಿ: ಮುಂದಿನ ತಿಂಗಳ 20ರಿಂದ ಆರಂಭಗೊಳ್ಳಲಿರುವ 'ದ ಯುಕೆ ಚಾಂಪಿಯನ್‌ಷಿಪ್‌' ಸ್ನೂಕರ್ ಪಂದ್ಯಾವಳಿಯಲ್ಲಿ ಭಾರತದ ಖ್ಯಾತ ಸ್ನೂಕರ್ ತಾರೆ ಪಂಕಜ್ ಆಡ್ವಾಣಿ ಭಾಗವಹಿಸಲಿದ್ದಾರೆ. ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯಗಳು ಏ. 3ರಿಂದ 14ರವರೆಗೆ ನಡೆಯಲಿದ್ದು, ಏ. 20ರಿಂದ ಮೇ. 6ರವರೆಗೆ ಪ್ರಮುಖ ಪಂದ್ಯಾವಳಿ ನಡೆಯಲಿದೆ.
ಆಡ್ವಾಣಿ ಅವರು ವಿಶ್ವದ ಬಹುತೇಕ ಪ್ರಮುಖ ಸ್ನೂಕಪ್ ಪಂದ್ಯಾವಳಿಗಳನ್ನು ಗೆದ್ದಿದ್ದಾರೆ. ಆದರೆ, ಅವರು ಈವರೆಗೆ ವಿಶ್ವ ಪ್ರೊಫೆಷನಲ್ ಸ್ನೂಕರ್ ಚಾಂಪಿಯನ್‌ಷಿಪ್ ಗೆದ್ದಿಲ್ಲ. ಐಬಿಎಸ್‌ಸಿ ವಿಶ್ವ ಸ್ನೂಕರ್ ಚಾಂಪಿಯನ್‌ಷಿಪ್ ಸೇರಿದಂತೆ, ಐಬಿಎಸ್‌ಎಫ್ ವಿಶ್ವ ಪ್ರೊಫೆಷನಲ್ ಬಿಲಿಯರ್ಡ್ಸ್ ಪ್ರಶಸ್ತಿ ಹಾಗೂ ಆರು ಐಬಿಎಸ್‌ಎಫ್ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇದೀಗ, ಯುಕೆ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲುವ ತವಕದಲ್ಲಿ ಅವರು, ಮಂಗಳವಾರ ಬೆಂಗಳೂರಿನಿಂದ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದರು. ಪ್ರಯಾಣಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಆಡ್ವಾಣಿ, 'ಯುಕೆ ಚಾಂಪಿಯನ್‌ಷಿಪ್ ಪಂದ್ಯಾವಳಿ ಹಿಂದೆ ನಾನು ಆಡಿರುವ ಎಲ್ಲಾ ಪಂದ್ಯಾವಳಿಗಿಂತ ವಿಭಿನ್ನವಾಗಿದ್ದು, ಅಲ್ಲಿ ವಿಶ್ವದ ಸ್ನೂಕರ್ ದಿಗ್ಗಜರೊಂದಿಗೆ ಸೆಣೆಸಬೇಕಾಗುತ್ತದೆ. ನಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚುವಂಥಾ ಪಂದ್ಯಾವಳಿ ಇದಾಗಿದ್ದು, ಇಲ್ಲಿ ಸಾಕಷ್ಟು ಸವಾಲುಗಳು ಇವೆ. ಪಂದ್ಯಾವಳಿಯಲ್ಲಿನ ಸವಾಲುಗಳನ್ನು ನೆನಪಿಸಿಕೊಂಡರಷ್ಟೇ ಸಾಕು, ರೋಮಾಂಚನವಾಗುತ್ತಿದೆ' ಎಂದರು.
ತಯಾರಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, 'ಪಂದ್ಯಾವಳಿಯ ಕುರಿತು ಕಠಿಣ ಅಭ್ಯಾಸವನ್ನು ನಡೆಸಿದ್ದೇನೆ. ಮೊಟ್ಟ ಮೊದಲ ಬಾರಿಗೆ ವಿಶ್ವ ಪ್ರೊಫೆಷನಲ್ ಸ್ನೂಕರ್‌ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಮನಸ್ಸಿನ ಉದ್ವೇಗವಿದ್ದರೂ, ಆತ್ಮವಿಶ್ವಾಸವಿದೆ. ನನ್ನ ಸಾಮರ್ಥ್ಯಕ್ಕೆ ತಕ್ಕ ರೀತಿಯಲ್ಲಿ ಅಲ್ಲಿ ಆಡುತ್ತೇನೆ' ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.