ಪಂಜಾಬ್ ಮಣಿಸಿದ ಕರ್ನಾಟಕ
ಇಂದೋರ್: ಆಲ್ರೌಂಡರ್ ಪ್ರದರ್ಶನ ನೀಡಿದ ರಾಜ್ಯ ಕ್ರಿಕೆಟ್ ತಂಡ ಇಂದೋರ್ನಲ್ಲಿ ಮಂಗಳವಾರ ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ನ ಬಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು 2 ವಿಕೆಟ್ ಅಂತರದಿಂದ ಪರಾಭವಗೊಳಿಸಿತು.
ಟಾಸ್ ಗೆದ್ದರೂ ಫೀಲ್ಡಿಂಗ್ ಆಯ್ದುಕೊಂಡ ರಾಜ್ಯ ತಂಡ, ಎದುರಾಳಿ ಪಂಜಾಬ್ ತಂಡವನ್ನು ಕೇವಲ 18.1 ಓವರ್ಗಳಲ್ಲಿ 129 ರನ್ಗಳಿಗೆ ಆಲೌಟ್ ಮಾಡಿತು. ನಂತರ 130 ರನ್ಗಳ ಗುರಿಯನ್ನು ಬೆನ್ನಟ್ಟಿದ ವಿನಯ್ ಕುಮಾರ್ ಪಡೆ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ 133 ರನ್ ಪೇರಿಸಿ 2 ವಿಕೆಟ್ ಅಂತರದಿಂದ ಜಯದ ಕೇಕೆ ಹಾಕಿತು.
ಆರಂಭಿಕ ಆಘಾತದ ನಂತರ, ಕರ್ನಾಟಕದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮನೀಶ್ ಪಾಂಡೆ (31) ಮತ್ತು ಸಿ.ಎಂ ಗೌತಮ್ (31) ತಂಡವನ್ನು ಜಯದ ಹಾದಿ ಹಿಡಿಸಿದರು. ಪಾಂಡೆ ರಾಜ್ವಿಂದರ್ ಸಿಂಗ್ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ ಮದನ್ಗೆ ಕ್ಯಾಚ್ ನೀಡಿದರೆ, ಗೌತಮ್ ಆರ್. ಶರ್ಮಾ ಬೌಲಿಂಗ್ನಲ್ಲಿ ಅಮಿತೋಜ್ ಸಿಂಗ್ ಕ್ಯಾಚ್ ನೀಡಿದರು.
ಪಂಜಾಬ್ ಸಿದ್ದಾರ್ಥ್ ಕೌಲ್, ರಾಜ್ವಿಂದರ್ ಸಿಂಗ್ ಹಾಗೂ ರಾಹುಲ್ ಶರ್ಮಾ ತಲಾ 2 ವಿಕೆಟ್ ಕಬಳಿಸಿದರು. ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಪಂಜಾಬ್ ಪರ ಆರಂಭಿಕ ಆಟಗಾರ ಇಂದರ್ ಸಿಂಗ್ 40 ಎಸೆತಗಳಲ್ಲಿ 60 ರನ್ ಪೇರಿಸುವ ಮೂಲಕ ಉತ್ತಮ ಬುನಾದಿ ಹಾಕಿಕೊಟ್ಟಿದ್ದರು.
ಆದರೆ, ನಂತರ ಬ್ಯಾಟ್ಸ್ಮನ್ಗಳು ಲಗುಬಗನೆ ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಅದು ನಿಗದಿತ ಓವರ್ಗಳು ಮುಕ್ತಾಯವಾಗುವ ಮುನ್ನವೇ ಆಲೌಟ್ ಆಗಲು ಕಾರಣವಾಯಿತು. ಕರ್ನಾಟಕ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಸ್ಟುವರ್ಟ್ ಬಿನ್ನಿ 26 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿದರು.
ಗುರುವಾರ ನಡೆಯಲಿರುವ ಸೂಪರ್ ಲೀಗ್ನ ತನ್ನ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡ ಉತ್ತರ ಪ್ರದೇಶವನ್ನು ಎದುರಿಸಲಿದೆ.
ಸಂಕ್ಷಿಪ್ತ ಸ್ಕೋರ್
ಪಂಜಾಬ್: 129/10 (18.1 ಓವರ್)
ಇಂದರ್ ಸಿಂಗ್ ಎಲ್ಬಿಡಬ್ಲ್ಯೂ ಬಿ ಗೌತಮ್ 60 (44), ಮಂದೀಪ್ ಸಿಂಗ್ ಸಿ ರಾಹುಲ್ ಬಿ ಬಿನ್ನಿ 11 (13), ಗುರುಕೀರ್ತ್ ಸಿಂಗ್ ಸಿ ಉತ್ತಪ್ಪ ಬಿ ಪಾಂಡೆ 12 (15), ಎಂ. ಸಿಧಾನ್ ರನೌಟ್ 2 (3), ಚಾವ್ಲಾ ಸಿ ಸ್ಟಂಪ್ ಗೌತಮ್ ಬಿ ಬಿನ್ನಿ 8 (8), ಅಮಿತೋಜ್ ಸಿಂಗ್ ಬಿ ನಾಯರ್ 12 (15), ಸಿ ಮದನ್ ಸಿ ಪಾಂಡೆ ಬಿ ಬಿನ್ನಿ 2 (3), ಎಂ.ಎಸ್ ಗೋನಿ ರನೌಟ್ 0 (0), ಆರ್. ಶರ್ಮಾ ರನೌಟ್ 1 (1), ಎಸ್. ಕೌಲ್ ಅಜೇಯ 8 (8), ರಜ್ವಿಂದರ್ ಸಿಂಗ್ ರನೌಟ್ 0 (0), ಇತರೆ 13.
ವಿಕೆಟ್ ಪತನ: 1-45, 2-73, 3-89, 4-105, 5-105, 6-109, 7-109, 8-110, 9-128, 10-129.
ಬೌಲಿಂಗ್: ವಿನಯ್ 2.1-0-17-0, ಮಿಥುನ್ 2-0-15-0, ಅಕ್ಷಯ್ 3-0-24-0, ಬಿನ್ನಿ 4-0- 26-3, ಪಾಂಡೆ 2-0-19-1, ಗೌತಮ್ 4-0-10-1, ನಾಯರ್ 1-0-12-1.
ಕರ್ನಾಟಕ: 133/8 (19.4 ಓವರ್)
ಉತ್ತಪ್ಪ ರನೌಟ್ 1 (2), ಅಗರ್ವಾಲ್ ಸಿ ಮದನ್ ಬಿ ಕೌಲ್ 14 (14), ಕೆಎಲ್ ರಾಹುಲ್ ಎಲ್ಬಿಡಬ್ಲ್ಯು 1 (4), ಮನೀಶ್ ಪಾಂಡೆ ಸಿ ಮದನ್ ಬಿ ರಾಜ್ವಿಂದರ್ ಸಿಂಗ್ 31 (29), ಸ್ಟುವರ್ಟ್ ಬಿನ್ನಿ ಸಿ ಕೌಲ್ ಬಿ ರಾಜ್ವಿಂದರ್ ಸಿಂಗ್ 17 (16), ಗೌತಮ್ ಸಿ ಅಮಿತೋಜ್ ಬಿ ಶರ್ಮಾ 31 (26), ನಾಯರ್ ಬಿ ಶರ್ಮಾ 16 (16), ವಿನಯ್ ಅಜೇಯ 3 (3), ಕೆ. ಗೌತಮ್ ಸಿ ಮಂದೀಪ್ ಬಿ ಗೋನಿ 2 (3), ಮಿಥುನ್ ಅಜೇಯ 9 (5), ಇತರೆ 8.
ವಿಕೆಟ್ ಪತನ: 1-3, 2-5, 3-19, 4-44, 5-75, 6-117, 7-117, 8-121.
ಬೌಲಿಂಗ್: ಗೋನಿ 4-0-17-1, ಕೌಲ್ 4-0-16-2, ಅವಿತೋಜ್ 3.4-0-36-0, ರಾಜ್ವಿಂದರ್ 4-0-28-2, ಆರ್. ಶರ್ಮಾ 4-0-34-2.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

